ಬಯಲುಸೀಮೆ ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಬದ್ದ: ಸಚಿವ ಬೋಸರಾಜು

Published : Apr 19, 2025, 07:55 PM ISTUpdated : Apr 19, 2025, 08:27 PM IST
ಬಯಲುಸೀಮೆ ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಬದ್ದ: ಸಚಿವ ಬೋಸರಾಜು

ಸಾರಾಂಶ

ಬಯಲುಸೀಮೆಯ ಜಿಲ್ಲೆಗಳಲ್ಲಿ ಜನರ ನೀರಿನ ಬವಣೆಗೆ ಶಾಶ್ವತವಾಗಿ ಪರಿಹಾರ ಒದಗಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಈ ನಿಟ್ಟಿನಲ್ಲಿ ಏತ್ತಿನಹೊಳೆ, ಕೆ.ಸಿ ವ್ಯಾಲಿ, ಹೆಚ್‌ಎನ್‌ ವ್ಯಾಲಿ ಹಾಗೂ ವೃಷಭಾವತಿ ವ್ಯಾಲಿಯಂತಹ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಬೋಸರಾಜು ತಿಳಿಸಿದರು.

ತುಮಕೂರು (ಏ.19): ಬಯಲುಸೀಮೆಯ ಜಿಲ್ಲೆಗಳಲ್ಲಿ ಜನರ ನೀರಿನ ಬವಣೆಗೆ ಶಾಶ್ವತವಾಗಿ ಪರಿಹಾರ ಒದಗಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಈ ನಿಟ್ಟಿನಲ್ಲಿ ಏತ್ತಿನಹೊಳೆ, ಕೆ.ಸಿ ವ್ಯಾಲಿ, ಹೆಚ್‌ಎನ್‌ ವ್ಯಾಲಿ ಹಾಗೂ ವೃಷಭಾವತಿ ವ್ಯಾಲಿಯಂತಹ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಬೋಸರಾಜು ತಿಳಿಸಿದರು. ಇಂದು ಗೊರವನಹಳ್ಳಿಯಲ್ಲಿ ಕೊರಟಗೆರೆ ತಾಲ್ಲೂಕಿನಲ್ಲಿ ಅಂತರ್ಜಲ ಅಭಿವೃದ್ದಿ ಸಲುವಾಗಿ ಎತ್ತಿನಹೊಳೆ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ 62 ಕೆರೆಗಳಿಗೆ ನೀರನ್ನು ತುಂಬಿಸುವ ಕಾಮಗಾರಿಗೆ ಮಾನ್ಯ ಗೃಹ ಸಚಿವರಾದ ಪರಮೇಶ್ವರ್‌ ಅವರೊಂದಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಎತ್ತಿನ ಹೊಳೆ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ 285 ಕೋಟಿ ವೆಚ್ಚದಲ್ಲಿ 62 ಕೆರೆಗಳಿಗೆ ನೀರು ತುಂಬಿಸುವ ಈ ಮಹತ್ವದ ಕಾಮಗಾರಿಗಳಿಂದ ಕೊರಟಗೆರೆ ತಾಲೂಕಿನ ಅಂತರ್ಜಲ ವೃದ್ಧಿಸಲಿದೆ. ಈ ಕೆರೆಗಳಲ್ಲಿ ಸುಮಾರು 826 ಎಂಸಿಎಫ್ಟಿ ನಷ್ಟು ನೀರು ಸಂಗ್ರಹವಾಗುವುದರಿಂದ ತಾಲೂಕಿನ ಕುಡಿಯುವ ನೀರಿನ ಬವಣೆ ಗಣನೀಯವಾಗಿ ಇಳಿಕೆಯಾಗಲಿದೆ. ಇದರಲ್ಲಿ ನಮ್ಮ ಸಣ್ಣ ನೀರಾವರಿ ಇಲಾಖೆಯ 43 ಕೆರೆಗಳು ಸೇರಿವೆ. ಇವುಗಳ ಸಂಗ್ರಹಣಾ ಸಾಮರ್ಥ್ಯ1848.46 ಎಂ.ಸಿ.ಎಫ್ ಟಿ ಇದ್ದು, ಈ ಯೋಜನೆ ಮೂಲಕ ಇವುಗಳಿಗೆ 659.47 ಎಂಸಿಎಫ್ ಟಿ ನಷ್ಟು ನೀರನ್ನು ತುಂಬಿಸುವುದರಿಂದ ಕೊರಟಗೆರೆ ತಾಲೂಕಿನ ರೈತರ ನೆಮ್ಮದಿಯ ಬದುಕಿಗೆ ದಾರಿಯಾಗಲಿದೆ ಎಂದರು. 

ಸುವರ್ಣ ನ್ಯೂಸ್ ಇಂಪ್ಯಾಕ್ಟ್: ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಗ್ರಾಮಗಳಿಗೆ ಆ್ಯಂಬುಲೆನ್ಸ್ ಸೇವೆ!

ನಮ್ಮ ಸರ್ಕಾರದ ಗುರಿಯಂತೆ, ಎತ್ತಿನಹೊಳೆ ಯೋಜನೆ ಅಡಿ ಈಗಾಗಲೇ ತಿಪಟೂರು ತಾಲೂಕಿನ 105 ಕೆರೆಗಳು, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 131 ಕೆರೆಗಳ ನೀರು ತುಂಬಿಸುವ ಕಾಮಗಾರಿಗಳನ್ನು ಅಂತಿಮ ಹಂತಕ್ಕೆ ತಂದು, ಆ ಭಾಗದ ರೈತರು, ಜನರ ಮೊಗದಲ್ಲಿ ನಮ್ಮ ಸರ್ಕಾರ ಮಂದಹಾಸ ಮೂಡಿಸಿದೆ. ಮಧುಗಿರಿ ಗುರುತ್ವಾ ಕಾಲುವೆಯಿಂದ ಮಧುಗಿರಿ ತಾಲೂಕಿನಲ್ಲಿ 45 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳಿಗೂ ಈ ಎತ್ತಿನ ಯೋಜನೆ ಅಡಿ ತಾಂತ್ರಿಕ, ಆಡಳಿತಾತ್ಮಕ ಅನುಮೋದನೆ ಪಡೆದಿರುವುದಲ್ಲದೇ, ಕಾಮಗಾರಿಗಳೂ ಆರಂಭಿಸಿರುವುದು ಭವಿಷ್ಯದ ನೀರಿನ ಬವಣೆ ನೀಗಿಸಲು ನಮ್ಮ ಕಾಂಗ್ರೆಸ್ ಸರ್ಕಾರ ಇಟ್ಟಿರುವ ದಿಟ್ಟ ಹೆಜ್ಜೆಗೆ ಸಾಕ್ಷಿಯಾಗಿದೆ. 

ಎತ್ತಿನಹೊಳೆ ಯೋಜನೆಯ ಸಮರ್ಪಕ ಅನುಷ್ಠಾನದ ಮೂಲಕ ಬಯಲು ಸೀಮೆಯ 7 ಜಿಲ್ಲೆಗಳ ನೀರಿನ ಬವಣೆಗೆ ಮುಕ್ತಿ ದೊರಕಿಸುವುದಂತೂ ಖಚಿತ. ಮುಖ್ಯವಾಗಿ,ಇದರ ಹೆಚ್ಚಿನ ಲಾಭ ತುಮಕೂರು ಜಿಲ್ಲೆಯ ರೈತರಿಗೂ ಆಗಲಿದೆ. ಈ ಮುಖ್ಯ ಕಾಲುವೆಯ ಉದ್ದ 262 ಕಿ.ಮೀಯಾಗಿದ್ದು, ಇದರಲ್ಲಿ ಸುಮಾರು 159 ಕಿ.ಮೀಯಷ್ಟು ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲೇ ಹಾದುಹೋಗುವುದರಿಂದ ಸುತ್ತಮುತ್ತ ರೈತರ ಕೃಷಿ ಚಟುವಟಿಕೆಗಳಿಗೂ, ಜನರ ಕುಡಿಯುವ ನೀರಿಗೂ  ಪರಿಹಾರ ದೊರೆಯಲಿದೆ ಎನ್ನುವುದು ಖುಷಿಯ ವಿಚಾರ ಎಂದರು. 

ಹತ್ತು ದಿನಗಳಲ್ಲಿ ಐದು ಜಾನುವಾರುಗಳ ಕೊಂದ ಹುಲಿ: ಅರಣ್ಯ ಇಲಾಖೆ ಕಾರ್ಯಾಚರಣೆ

ಬಯಲುಸೀಮೆಯ ಜಿಲ್ಲೆಗಳಲ್ಲಿ ಜನರು ನೀರಿನ ಬವಣೆಯಿಂದ ತತ್ತರಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಈಗಾಗಲೇ ಕೆಸಿ ವ್ಯಾಲಿ, ಹೆಚ್‌ ನ್‌ ವ್ಯಾಲಿಯಂತಹ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ತುಮಕೂರು ಜಿಲ್ಲೆಯಲ್ಲಿ ಕುಸಿದಿರುವ ಅಂತರ್ಜಲವನ್ನು ಅಭಿವೃದ್ದಿಗೊಳಿಸಿ, ವ್ಯವಸಾಯ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ