ಸಂವಿಧಾನ ಬದಲಾಯಿಸಲು ಅದು ಮಗ್ಗಿ ಪುಸ್ತಕವಲ್ಲ: ಮಾಜಿ ಸಚಿವ ಎನ್.ಮಹೇಶ್

By Kannadaprabha News  |  First Published Jun 27, 2024, 6:15 PM IST

ಸಂವಿಧಾನವನ್ನು ಆಡಳಿತದ ಗ್ರಂಥ ಎಂದು ಒಪ್ಪಿಕೊಳ್ಳಲಾಗಿದೆ, ಆದರೆ ಇದನ್ನು ಜನ ನಂಬಲಿಲ್ಲ, ರಾಹುಲ್ ಗಾಂಧಿ ಹೇಳಿಕೆಯನ್ನು ನಂಬಿದ್ದು ವಿಷಾದಕರ ಸಂಗತಿ ಎಂದು ಮಾಜಿ ಸಚಿವ ಎನ್.ಮಹೇಶ್ ಕಳವಳ ವ್ಯಕ್ತಪಡಿಸಿದರು.
 


ಕೋಲಾರ (ಜೂ.27): ಸಂವಿಧಾನವನ್ನು ಆಡಳಿತದ ಗ್ರಂಥ ಎಂದು ಒಪ್ಪಿಕೊಳ್ಳಲಾಗಿದೆ, ಆದರೆ ಇದನ್ನು ಜನ ನಂಬಲಿಲ್ಲ, ರಾಹುಲ್ ಗಾಂಧಿ ಹೇಳಿಕೆಯನ್ನು ನಂಬಿದ್ದು ವಿಷಾದಕರ ಸಂಗತಿ ಎಂದು ಮಾಜಿ ಸಚಿವ ಎನ್.ಮಹೇಶ್ ಕಳವಳ ವ್ಯಕ್ತಪಡಿಸಿದರು. ನಗರದ ಸುವರ್ಣ ಕನ್ನಡ ಭವನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಾಗರೀಕರ ವೇದಿಕೆಯಿಂದ ತುರ್ತು ಪರಿಸ್ಥಿತಿ ಸಂವಿಧಾನದ ಆಶಯಕ್ಕೆ ಅಪಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಲೋಕಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿ ವಿರುದ್ಧ ಹೇಳಿಕೆ ನೀಡಿಕೊಂಡ ಸಂಖ್ಯಾ ಬಲವನ್ನು ಹೆಚ್ಚಿಸಿಕೊಂಡಿತು ಎಂದರು.

ಬಿಜೆಪಿಗೆ ಜನತೆ ಬೆಂಬಲ: ಬಿಜೆಪಿ ಅಧಿಕಾರಿಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆ ಅಂತ ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ರಾಹುಲ್ ಗಾಂಧಿ ಐಎನ್‌ಡಿ ಒಕ್ಕೂಟದ ಮುಖಂಡರ ಜಪ ಆಗಿತ್ತು, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗಾಗಿ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ಅಂತ ಮನವಿ ಮಾಡಿದರು, ಆದರೂ ಸಹ ಪ್ರಭುದ್ಧರು ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದರು.

Tap to resize

Latest Videos

ಸಿದ್ದರಾಮಯ್ಯ ಸರ್ಕಾರ ಬೆಲೆ ಏರಿಕೆ ಸಮರ್ಥಿಸಿಕೊಳ್ಳುವುದು ನಾಚಿಕೆಗೇಡು: ಮಾಜಿ ಸಚಿವ ಎನ್.ಮಹೇಶ್

ಸಂವಿಧಾನ ಬದಲಾವಣೆ ಮಾಡಲು ಅದೇನು ಮಗ್ಗಿ ಪುಸ್ತಕವಲ್ಲ, ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ, ಸದನದ ಮೊದಲೇ ದಿನವೇ ಸೋನಿಯಾ, ರಾಹುಲ್ ಗಾಂಧಿ, ಇಂಡಿಯಾ ಒಕ್ಕೂಟದ ಸಂಸದರು ಗಲಾಟೆ ಶುರು ಮಾಡಿದ್ದಾರೆ. ಅವರಿಗೆಲ್ಲ ತುರ್ತು ಪರಿಸ್ಥಿತಿಯ ಬಗ್ಗೆ ಅರಿವಿಲ್ಲದಂತೆ ಕಾಣುತ್ತಿದೆ ಎಂದು ಲೇವಡಿ ಮಾಡಿದರು.

ಅಂಬೇಡ್ಕರ್‌ ವಿರೋಧಿ ಕಾಂಗ್ರೆಸ್‌: ದೇಶದಲ್ಲಿ ಯುಪಿಎ ಸರ್ಕಾರದ ಅಧಿಕಾರದಲ್ಲಿ ಇದ್ದಾಗ ಸಂವಿಧಾನ ಪುಸ್ತಕವನ್ನು ಮುಟ್ಟೆಯಿಲ್ಲ, ಆದರೆ ಈಗ ಬಿಡದೀರ ಹಿಡುದುಕೊಂಡಿದ್ದಾರೆ. ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಹಲವು ಅಧಿಕಾರ ನಡೆಸಿದರು. ಸಂವಿಧಾನದ ಜಪ ಮಾಡುತ್ತಿದ್ದರು ಹೊರತು ಉದ್ದೇಶ ಈಡೇರಿಸಲು ಮುಂದಾಗಲಿಲ್ಲ, ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಿದ್ದು ಕಾಂಗ್ರೆಸ್ ಎಂದು ಕಿಡಿಕಾರಿದರು.

ಪ್ರಿಯಾಂಕ್‌ ಖರ್ಗೆ ಸೂಪರ್ ಸಿಎಂ: ಮಾಜಿ ಸಚಿವ ಎನ್.ಮಹೇಶ್‌

ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ೧೯೭೫ ಜೂನ್ ೨೫ರಂದು ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು, ಆಗ ದೇಶದಲ್ಲಿ ಅಗೋರ ಪರಿಸ್ಥಿತಿ ಉಂಟಾಗಿತ್ತು. ಸಾವಿರಾರು ವರ್ಷಗಳಿಂದ ಬ್ರಿಟಿಷ್, ಪ್ರೇಂಚ್ ಸೇರಿದಂತೆ ಅನೇಕರನ್ನು ಎದುರಿಸಿತು ದೇಶ, ಇಂದಿರಾಗಾಂಧಿ ಅವರು ಮಾಡಿದ ತಪ್ಪುಗಳಿಂದ ತುರ್ತು ಪರಿಸ್ಥಿತಿ ಘೋಷಣೆಯಾಯಿತು. ಸಂವಿಧಾನವನ್ನು ಕಗ್ಗೋಲೆ ಮಾಡಿದಂತಹ ದಿನ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆರ್‌ಪಿಐ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ, ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ವೈ.ಸಂಪಂಗಿ, ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಇದ್ದರು.

click me!