ಅಮಿತ್ ಶಾ ದೊಡ್ಡ ಗಿಫ್ಟ್ ಬಗ್ಗೆ ಮಾತನಾಡದಿದ್ದು ಒಳ್ಳೆಯದಾಯಿತು: ನೂತನ ಸಂಸದ ವಿ.ಸೋಮಣ್ಣ

By Govindaraj S  |  First Published Jun 6, 2024, 6:24 AM IST

ಈ ಬಾರಿ ಚುನಾವಣೆಯಲ್ಲಿ ಅಮಿತ್ ಶಾ ಅವರು ದೊಡ್ಡ ಗಿಫ್ಟ್‌ ಬಗ್ಗೆ ಮಾತನಾಡದಿದ್ದು ಒಳ್ಳೆಯದಾಯಿತು ಎಂದು ತುಮಕೂರು ನೂತನ ಸಂಸದ ವಿ. ಸೋಮಣ್ಣ ಹೇಳಿದರು.


ಮೈಸೂರು (ಜೂ.06): ಈ ಬಾರಿ ಚುನಾವಣೆಯಲ್ಲಿ ಅಮಿತ್ ಶಾ ಅವರು ದೊಡ್ಡ ಗಿಫ್ಟ್‌ ಬಗ್ಗೆ ಮಾತನಾಡದಿದ್ದು ಒಳ್ಳೆಯದಾಯಿತು ಎಂದು ತುಮಕೂರು ನೂತನ ಸಂಸದ ವಿ. ಸೋಮಣ್ಣ ಹೇಳಿದರು. ಬುಧವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ವೇಳೆ ಅಮಿತ್ ಶಾ ಅವರು ದೊಡ್ಡ ಗಿಫ್ಟ್ ಬಗ್ಗೆ ಮಾತನಾಡಿದ್ದಕ್ಕೆ ಒಂದಿಷ್ಟು ಸಮಸ್ಯೆ ಆಯಿತು. ಆದರೆ ಈ ಬಾರಿ ಆ ಮಾತು ಆಡಲಿಲ್ಲ ಎಂದು ತಿಳಿಸಿದರು.

ಜೆಡಿಎಸ್ ಬಿಜೆಪಿ ಒಂದೇ ನ್ಯಾಣದ ಎರಡು ಮುಖದ ರೀತಿ ಕೆಲಸ ಮಾಡಿದರು. ರಾಜ್ಯದ 28 ಕ್ಷೇತ್ರದಲ್ಲೂ ಆ ಸಮನ್ವಯತೆ ಇತ್ತು. ತುಮಕೂರು ಕ್ಷೇತ್ರದಲ್ಲಿ ಬಿಜೆಪಿಗಿಂತಲೂ ಜೆಡಿಎಸ್ ನವರು ಹೆಚ್ಚಿನದಾಗಿ ಕೆಲಸ ಮಾಡಿದರು. ದೇವೇಗೌಡರು, ಕುಮಾರಸ್ವಾಮಿ ನಾಲ್ಕೈದು ಬಾರಿ ಬಂದು ನನಗೆ ದೊಡ್ಡ ಶಕ್ತಿ ನೀಡಿದರು. ಅವರಿಗೆ ನಾನು ಯಾವತ್ತೂ ಋಣಿ ಆಗಿರುತ್ತೇನೆ ಎಂದರು.

Tap to resize

Latest Videos

undefined

ಜೆಡಿಎಸ್ ಮತ್ತು ಬಿಜೆಪಿಯ ಈ ಸಮನ್ವಯತೆ ರಾಜ್ಯದಲ್ಲಿ ಮುಂದಿನ ದಿನಗಳಲ್ಲೂ ಇದೇ ರೀತಿ ಮುಂದುವರೆಯುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಹನ್ನೊಂದು ತಿಂಗಳು ಒಂದು ರೀತಿ ವನವಾಸದಲ್ಲಿ ಇದ್ದೆ. ಸದಾ ಕೆಲಸ ಮಾಡುವವನಿಗೆ ಕೆಲಸವೇ ಇಲ್ಲದಂತಾಗಿತ್ತು. ಈಗ ಅದು ಮುಕ್ತಾಯವಾಗಿದೆ. ತುಮಕೂರಿನ ಜನ ನಾನು ಹೊರಗಿನವನು ಎಂದು ಒಂದು ಕ್ಷಣವೂ ಅಂದುಕೊಳ್ಳಲಿಲ್ಲ ಎಂದರು.

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಸಿದ್ದರಾಮಯ್ಯ

ಯಾರೋ ನಾಲ್ಕು ಜನ ನಾಯಕರು ಮಾತನಾಡಿದ್ದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ಎರಡು ಲಕ್ಷದ ಮುನ್ನಡೆಯ ನೀರಿಕ್ಷೆಯಲ್ಲಿದ್ದೆ. ಆದರೆ 20 ಸಾವಿರ ಕಡಿಮೆ ಆಯಿತಷ್ಟೇ ಎಂದು ಸೋಮಣ್ಣ ತಿಳಿಸಿದರು. ಸಚಿವ ಸ್ಥಾನ ತೀರ್ಮಾನ ಎಲ್ಲವೂ ಹೈ ಕಮಾಂಡ್ ಗೆ ಬಿಟ್ಟಿದ್ದು. ಇಂದಿನ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಈ ನಡುವೆಯೂ ನನಗೆ ಒಂದು ಅವಕಾಶ ಸಿಕ್ಕಿದರೆ ಇನ್ನೂ ಹೆಚ್ಚಿನ ಕೆಲಸ ಆಗುತ್ತದೆ ಅಷ್ಟೇ. ಅವಕಾಶ ನೀಡುವ ವಿಷಯ ಹೈಕಮಾಂಡ್ ಗೆ ಬಿಟ್ಟಿದ್ದು. ನಾನು ನಾಳೆ ದೆಹಲಿಗೆ ಹೋಗುತ್ತೇನೆ ಎಂದರು.

click me!