ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎನ್ನುವುದು ಬಿಜೆಪಿಯವರ ಭ್ರಮೆ: ಸಚಿವ ಶಿವರಾಜ ತಂಗಡಗಿ

By Kannadaprabha News  |  First Published Sep 23, 2024, 5:35 PM IST

ಸರ್ಕಾರ ಬೀಳುತ್ತೆ ಬೀಳುತ್ತೆ ಎಂದು ಬಿಜೆಪಿಯವರು ಭ್ರಮೆಯಲ್ಲಿ ಹೇಳುತ್ತಿದ್ದಾರೆ. ಆದರೆ, ಸರ್ಕಾರ ಬೀಳಲ್ಲ ಎಂದು ಸಚಿವ ಶಿವರಾಜ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಬಳಿ ವಿಮಾನ ತಂಗುದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೆಡವಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. 
 


ಕೊಪ್ಪಳ (ಸೆ.22): ಸರ್ಕಾರ ಬೀಳುತ್ತೆ ಬೀಳುತ್ತೆ ಎಂದು ಬಿಜೆಪಿಯವರು ಭ್ರಮೆಯಲ್ಲಿ ಹೇಳುತ್ತಿದ್ದಾರೆ. ಆದರೆ, ಸರ್ಕಾರ ಬೀಳಲ್ಲ ಎಂದು ಸಚಿವ ಶಿವರಾಜ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಬಳಿ ವಿಮಾನ ತಂಗುದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೆಡವಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಆದರೆ, ಅದು ಆಗದ ಕೆಲಸ. ಬಿಜೆಪಿಯವರು ಯಾವಾಗ ಪೂರ್ಣ ಬಹುಮತದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ರಾಜ್ಯದ ಮತದಾರರು ಆಶೀರ್ವಾದ ಮಾಡಿಯೇ ಇಲ್ಲ. ಆದರೆ, ಅಡ್ಡ ದಾರಿ ಹಿಡಿದು ಅಧಿಕಾರಕ್ಕೆ ಬಂದಿದ್ದಾರೆ ಎಂದರು. ಈಗ 136 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸರ್ಕಾರ ರಚನೆ ಮಾಡಲಾಗಿದೆ. 

ಈ ಸರ್ಕಾರವನ್ನು ಕೆಡುವ ಲೆಕ್ಕಾಚಾರ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯವರು ಇನ್ನು ಹತ್ತು ವರ್ಷ ಪ್ರತಿಪಕ್ಷದಲ್ಲಿಯೇ ಕುಳಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು. ತಿರುಪತಿ ಲಡ್ಡು ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದು ತಪ್ಪು. ದೇಶದಾದ್ಯಂತ ಭಕ್ತರು ಇದ್ದಾರೆ. ಪ್ರಸಾದ ಸ್ವೀಕಾರ ಮಾಡುತ್ತಾರೆ. ಅವರ ಭಾವನೆಗೆ ಧಕ್ಕೆ ಮಾಡುವುದು ಸರಿಯಲ್ಲ. ಆದರೆ, ನಂದಿನಿ ತುಪ್ಪ ಮಾತ್ರ ಶುದ್ಧವಾಗಿರುವ ತುಪ್ಪವಾಗಿದೆ. ರಾಜ್ಯದಲ್ಲಿ ಎಲ್ಲಿಯೂ ಆ ರೀತಿಯಾಗಿಲ್ಲ ಎಂದರು. ಶಾಸಕ ಮುನಿರತ್ನ ಮಾತನಾಡಿದ ಆಡಿಯೋವನ್ನು ಕೇಳಿಯೂ ನೀವು ಅವರ ಮೇಲೆ ದ್ವೇಷದಿಂದ ಕೇಸ್ ಹಾಕಲಾಗುತ್ತದೆ ಎನ್ನುವುದು ಸರಿಯಲ್ಲ. ಅವರು ತಪ್ಪು ಮಾಡಿದ್ದಾರೆ, ಅದಕ್ಕೆ ಶಿಕ್ಷೆ ಅನುಭವಿಸುತ್ತಾರೆ. ಆದರೆ, ಯಾರು ಆ ರೀತಿ ಮಾತನಾಡಬಾರದು ಎಂದರು.

Latest Videos

undefined

ಚನ್ನಪಟ್ಟಣದಲ್ಲಿ ಅಭಿವೃದ್ಧಿಯ ದೀಪ ಹಚ್ಚಿದ್ದೇವೆ: ಡಿಸಿಎಂ ಡಿ.ಕೆ.ಶಿವಕುಮಾರ್

ಸಿಎಂ, ಡಿಸಿಎಂ ಇಚ್ಛಾಶಕ್ತಿಯಿಂದ ಗೇಟ್ ದುರಸ್ತಿ: ಕಿತ್ತುಹೋದ ತುಂಗಭದ್ರಾ ಜಲಾಶಯದ ಗೇಟ್ ನಂ.೧೯ ಅನ್ನು ಕೇವಲ ೬ ದಿನಗಳಲ್ಲಿ ದುರಸ್ತಿ ಮಾಡುವ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ ಪ್ರಬಲವಾದ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಗೇಟ್ ದುರಸ್ತಿಗೊಳಿಸುವಲ್ಲಿ ಶ್ರಮವಹಿಸಿದ ಸಾಧಕರಿಗೆ ಏರ್ಪಡಿಲಾದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆ. ೧೦ರಂದು ಬೆಳಗಿನ ಜಾವ ಗೇಟ್ ನಂ.೧೯ ಹಠಾತ್ತನೆ ಕಿತ್ತುಕೊಂಡು ಹೋಯಿತು. 

ಬೆಳಗ್ಗೆ ೩ಗಂಟೆಗೆ ಜಲಾಶಯದ ಸ್ಥಿತಿಯನ್ನು ತಾವು ವೀಕ್ಷಿಸಿ ದೂರವಾಣಿ ಮೂಲಕ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಮಾಹಿತಿ ನೀಡಿದಾಗ ತಕ್ಷಣ ಸ್ಪಂದಿಸಿದರು. ಆ.೧೧ರಿಂದಲೇ ಡ್ಯಾಂನ ಗೇಟಿನ ದುರಸ್ತಿ ಕಾರ್ಯ ತಜ್ಞ ಕನ್ನಯ್ಯ ನಾಯ್ಡು ಉಸ್ತುವಾರಿಯಲ್ಲಿ ಪ್ರಾರಂಭಗೊಂಡು ಕೇವಲ ೬ ದಿನಗಳಲ್ಲಿ ಮುಕ್ತಾಯಗೊಂಡಿತು. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರು ನಿಟ್ಟುಸಿರು ಬಿಡುವಂತಾಯಿತು ಎಂದರು. ಇದೇ ವರ್ಷವೇ ತುಂಗಭದ್ರಾ ಜಲಾಶಯ ಅಷ್ಟು ಕ್ರಸ್ಟ್ ಗೇಟ್‌ಗಳನ್ನು ಬದಲಿಸಿ, ನೂತನ ಗೇಟ್ ಅಳವಡಿಸುವಂತೆ ಈ ಭಾಗದ ಜನರ ಪರವಾಗಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು.

ಚನ್ನಪಟ್ಟಣಕ್ಕೆ ಡಿ.ಕೆ.ಸುರೇಶ್‌ ಅಭ್ಯರ್ಥಿಯಾಗಲಿ: ಸಚಿವ ಜಮೀರ್‌ ಅಹಮದ್‌ ಖಾನ್‌

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಜಲಾಶಯದ ಗೇಟು ಕಿತ್ತುಕೊಂಡು ಹೋದಾಗ ೪೦ ಟಿಎಂಸಿ ನೀರು ಪೋಲಾಯಿತು. ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಗದ್ದೆಗಳಿಗೆ ಒಂದು ಬೆಳೆಗಾದರೂ ನೀರು ಲಭ್ಯವಾಗುವುದೇ ಎಂದು ಆತಂಕಗೊಂಡಿದ್ದರು, ಆದರೆ ಸರ್ಕಾರ ತ್ವರಿತವಾಗಿ ಕ್ರಮವಹಿಸಿ, ಗೇಟ್ ದುರಸ್ತಿ ಮಾಡಿಸಿತು ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ದುರಸ್ತಿ ಕಾರ್ಯ ವೀಕ್ಷಣೆಗೆ ಬಂದಾಗ ಜಲಾಶಯವು ಮತ್ತೆ ಭರ್ತಿಯಾಗಲಿದೆ. ಜಲಾಶಯದ ಭರ್ತಿಯಾದಾಗ ತಾವು ಮತ್ತೆ ಬಂದು ಬಾಗಿನ ಅರ್ಪಿಸುವುದಾಗಿ ಹೇಳಿದ್ದರು. ಮಾತು ಕೊಟ್ಟಂತೆ ಜಲಾಶಯವು ೨ನೇ ಬಾರಿ ಭರ್ತಿಯಾಗಿ ಮುಖ್ಯಮಂತ್ರಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ ಎಂದರು.

click me!