ಚನ್ನಪಟ್ಟಣ ಚದುರಂಗದಲ್ಲಿ ದಿನಕ್ಕೊಂದು ದಾಳ, ಪಟ್ಟಣ ಪಗಡೆಯಾಟದಲ್ಲಿ ಸೈನಿಕನ ನಿಗೂಢ ನಡೆ. ಇತ್ತ ಚನ್ನಪಟ್ಟಣ ನಂದೇ ಎಂದು ಬಂಡೆ ಶಪಥ ದಳಪತಿ ಪ್ರತಿಜ್ಞೆ.. ಸಿದ್ಧವಾಗ್ತಿದೆ ಮತ್ತೊಂದು ರಣರಂಗ. ಚನ್ನಪಟ್ಟಣ ಮಹಾಯುದ್ಧ ಫಿಕ್ಸ್! ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬೊಂಬೆ ಆಡ್ಸೋನು ಯಾರು?
ಚನ್ನಪಟ್ಟಣ (ಸೆ.23): ಚನ್ನಪಟ್ಟಣ ಚದುರಂಗದಲ್ಲಿ ದಿನಕ್ಕೊಂದು ದಾಳ, ಪಟ್ಟಣ ಪಗಡೆಯಾಟದಲ್ಲಿ ಸೈನಿಕನ ನಿಗೂಢ ನಡೆ. ಇತ್ತ ಚನ್ನಪಟ್ಟಣ ನಂದೇ ಎಂದು ಬಂಡೆ ಶಪಥ ದಳಪತಿ ಪ್ರತಿಜ್ಞೆ.. ಸಿದ್ಧವಾಗ್ತಿದೆ ಮತ್ತೊಂದು ರಣರಂಗ. ಚನ್ನಪಟ್ಟಣ ಮಹಾಯುದ್ಧ ಫಿಕ್ಸ್! ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬೊಂಬೆ ಆಡ್ಸೋನು ಯಾರು?
ಬೊಂಬೆನಾಡಿನಲ್ಲಿ ಶುರುವಾಯ್ತು ಅಸಲಿ ಚದುರಂಗದಾಟ.. ದಾಳ ಉರುಳಿಸಿದ ದಳಪತಿ, ದೋಸ್ತಿಗಳ ನಿದ್ದೆಗೆಡಿಸಿದೆ ಸೈನಿಕನ ಆ ನಿಗೂಢ ನಡೆ.. ಪಟ್ಟಣ ಗೆಲ್ಲಲು ಡಿಕೆ ಸಾಹೇಬನ ಮತ್ತೊಂದು ಮಾಸ್ಟರ್ ಪ್ಲಾನ್. ಕುಮಾರಸ್ವಾಮಿ ವಿರುದ್ಧ ಮಾಜಿ ಆಪ್ತಮಿತ್ರನನ್ನೇ ಅಖಾಡಕ್ಕಿಳಿಸಿದ ಕನಕಪುರ ಬಂಡೆ. 'ಚನ್ನಪಟ್ಟಣಕ್ಕೂ ನನಗೂ, ಭಕ್ತ-ಭಗವಂತನ ಸಂಬಂಧ ಎಂದಿರುವ ಚದುರಂಗದ ಚಾಣಕ್ಯ ಡಿಕೆಶಿ ಮಾತಿನ ಮರ್ಮವೇನು? ಬೊಂಬೆಯಾಟದಲ್ಲಿ ಗೆಲ್ಲಲು ಹತ್ತಾರು ತಂತ್ರ, ನೂರಾರು ರಣತಂತ್ರ..? ಅಷ್ಟಕ್ಕೂ ಚನ್ನಪಟ್ಟಣದಲ್ಲಿ ಈ ಬಾರಿ ಬೊಂಬೆ ಆಡ್ಸೋನು ಯಾರು ಅಂತೀರಿ?
undefined
ಯೋಗೇಶ್ವರ್ ಬಗ್ಗೆ ಕುಮಾರಸ್ವಾಮಿಯವ್ರಿಗಿರೋ ಆತಂಕ ಏನು..? ಬಂಡಾಯವೇಳ್ತಾರೆ ಅನ್ನೋ ಆತಂಕನಾ..? ಹೌದು.. ಸೈನಿಕ ಬಂಡಾಯವೆದ್ರೆ, ಚನ್ನಪಟ್ಟಣ ಗೆಲ್ಲೋದು ಕಷ್ಟ ಅನ್ನೋ ಸತ್ಯ ದಳಪತಿಗೂ ಗೊತ್ತು. ಆದ್ರ ಜೊತೆಗೆ ಕುಮಾರಸ್ವಾಮಿಯವ್ರನ್ನು ಮತ್ತೊಂದು ಆತಂಕ ಕಾಡ್ತಾ ಇದೆ. ಅದೇ ಸೈನಿಕನ ಅದೊಂದು ನಿಗೂಢ ನಡೆ.. ಅದು ಇಡೀ ಚನ್ನಪಟ್ಟಣ ಚದುರಂಗಕ್ಕೇ ತಿರುವು ನೀಡಬಲ್ಲ ನಡೆ.. ಅಷ್ಟಕ್ಕೂ ಏನದು ಸೈನಿಕನ ನಡೆ..? ಇಲ್ಲಿದೆ ನೋಡಿ,
ಚನ್ನಪಟ್ಟಣದಲ್ಲಿ ಅಭಿವೃದ್ಧಿಯ ದೀಪ ಹಚ್ಚಿದ್ದೇವೆ: ಡಿಸಿಎಂ ಡಿ.ಕೆ.ಶಿವಕುಮಾರ್
ಚನ್ನಪಟ್ಟಣದಲ್ಲಿ ದೋಸ್ತಿ ಅಭ್ಯರ್ಥಿಯಾಗಲು ಯೋಗೇಶ್ವರ್ ಹರಸಾಹಸ ಮಾಡ್ತಾ ಇದ್ರೆ, ಇತ್ತ ದಳಪತಿಯ ಲೆಕ್ಕಾಚಾರವೇ ಬೇರೆ. ಆ ಲೆಕ್ಕಾಚಾರಕ್ಕೆ ಅಡ್ಡಿಯಾಗಿರೋದೇ ಸೈನಿಕನ ಆ ನಿಗೂಢ ನಡೆ. ಅದು ಇಡೀ ಚನ್ನಪಟ್ಟಣ ಚದುರಂಗಕ್ಕೇ ತಿರುವು ನೀಡಬಲ್ಲ ನಡೆ.. ಹೀಗಾಗಿ ಯೋಗೇಶ್ವರ್ ಅವರನ್ನು ವಿಶ್ವಾಸಕ್ಕೆ ಪಡೆದೇ ಚುನಾವಣೆ ಎದುರಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಅಷ್ಟಕ್ಕೂ ಏನದು ಬೊಂಬೆನಾಡಿನಲ್ಲಿ ಸೈನಿಕ ಇಡ್ತಾ ಇರೋ ನಡೆ..?
ಚನ್ನಪಟ್ಟಣದಲ್ಲಿ ಯೋಗೇಶ್ವರ್ ತಮ್ಮದೇ ಪ್ರಭಾವ ಹೊಂದಿದ್ದಾರೆ. ಸೈನಿಕನಿಗೆ ಅವರದ್ದೇ ಆದ ವೋಟ್ ಬ್ಯಾಂಕ್ ಇದೆ. ಇಷ್ಟಿದ್ರೂ ಸಿ.ಪಿ ಯೋಗೇಶ್ವರ್ ಅವ್ರನ್ನೇ ಮೈತ್ರಿ ಅಭ್ಯರ್ಥಿ ಮಾಡಲು ದಳಪತಿ ಕುಮಾರಸ್ವಾಮಿ ಹಿಂದೇಟು ಹಾಕ್ತಾ ಇರೋದ್ಯಾಕೆ..? ಚನ್ನಪಟ್ಟಣ ಚದುರಂಗದಲ್ಲಿ ಯೋಗೇಶ್ವರ್ ಉರುಳಿಸುವ ಒಂದು ದಾಳಕ್ಕೆ ಇಡೀ ಚುನಾವಣೆಯ ದಿಕ್ಕನ್ನೇ ಬದಲಿಸುವ ಶಕ್ತಿ ಇದೆ. ಕಾರಣ, ಬೊಂಬೆನಾಡಿನ ರಣರಂಗದಲ್ಲಿ ಸೈನಿಕನ ಸಾಮರ್ಥ್ಯ. ಅಲ್ಲಿ ಯೋಗೇಶ್ವರ್'ಗೆ ಅವರದ್ದೇ ಆದ ವೋಟ್ ಬ್ಯಾಂಕ್ ಇದೆ. ಇಷ್ಟಿದ್ರೂ ಸಿ.ಪಿ ಯೋಗೇಶ್ವರ್ ಅವ್ರನ್ನೇ ಮೈತ್ರಿ ಅಭ್ಯರ್ಥಿ ಮಾಡಲು ದಳಪತಿ ಕುಮಾರಸ್ವಾಮಿ ಹಿಂದೇಟು ಹಾಕ್ತಾ ಇರೋದ್ಯಾಕೆ..?
ಸಿಪಿವೈಗೆ ನಿಗಮ ಮಂಡಳಿ ಸ್ಥಾನ?
ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯ ಆಯ್ಕೆಯು ಇಕ್ಕಟ್ಟಿಗೆ ಸಿಲುಕಿದ್ದು, ಟಿಕೆಟ್ ಆಕಾಂಕ್ಷಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಕೇಂದ್ರದ ಅಧೀನದಲ್ಲಿರುವ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಮನವೊಲಿಕೆ ಪ್ರಯತ್ನ ಕಸರತ್ತು ನಡೆದಿದೆ ಎಂದು ಹೇಳಲಾಗಿದೆ.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್‌ಗೆ ಟಿಕೆಟ್ ನೀಡಲು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಒಲವು ಇಲ್ಲ. ಈ ಹಿನ್ನೆಲೆಯಲ್ಲಿ ಯೋಗೇಶ್ವರ್ ಅವರಿಗೆ ಕೇಂದ್ರದ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಮಾಧಾನಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಅಡಗಿದೆ.
ಚನ್ನಪಟ್ಟಣಕ್ಕೆ ಡಿ.ಕೆ.ಸುರೇಶ್ ಅಭ್ಯರ್ಥಿಯಾಗಲಿ: ಸಚಿವ ಜಮೀರ್ ಅಹಮದ್ ಖಾನ್
ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ತಮಗೆ ಬೇಕಾದ ಅಭ್ಯರ್ಥಿಯನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಪಣತೊಟ್ಟಿದ್ದಾರೆ. ಹೀಗಾಗಿ ಯೋಗೇಶ್ವರ್ ವಿಶ್ವಾಸಕ್ಕೆ ತೆಗೆದುಕೊಂಡು ಎನ್‌ಡಿಎ ಒಗ್ಗಟ್ಟಾಗಿ ಕೆಲಸ ಮಾಡಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ತಂತ್ರಗಾರಿಕೆಯಾಗಿದೆ. ಅಲ್ಲದೇ, ರಾಜ್ಯ ಬಿಜೆಪಿ ನಾಯಕರ ಮೂಲಕ ಯೋಗೇಶ್ವರ್ ಮನವೊಲಿಕೆ ಪ್ರಯತ್ನ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ. ಇದೀಗ ಸಿಪಿ ಯೋಗೇಶ್ವರ ನಡೆ ಭಾರೀ ಕುತೂಹಲ ಕೆರಳಿಸಿದೆ