ಕಾಂಗ್ರೆಸ್ ಮುಖಂಡರ ವ್ಯಕ್ತಿತ್ವದ ಬೆತ್ತಲೆ ಪ್ರದರ್ಶನವಾಗಿದೆ: ಸಂಸದ ರಾಘವೇಂದ್ರ

Published : May 18, 2025, 10:42 PM IST
ಕಾಂಗ್ರೆಸ್ ಮುಖಂಡರ ವ್ಯಕ್ತಿತ್ವದ ಬೆತ್ತಲೆ ಪ್ರದರ್ಶನವಾಗಿದೆ: ಸಂಸದ ರಾಘವೇಂದ್ರ

ಸಾರಾಂಶ

ಕಾಂಗ್ರೆಸ್ ಪಕ್ಷದ ಮುಖಂಡರು ಈ ದೇಶದ ಪ್ರಜೆ ಎನ್ನುವುದನ್ನು ಮರೆತು ಶತ್ರು ರಾಷ್ಟ್ರ ಪಾಕಿಸ್ತಾನದ ಪರವಾದ ವಕ್ತಾರರ ರೀತಿ ಹೇಳಿಕೆ ನೀಡುತ್ತಿರುವುದು ಅತ್ಯಂತ ಬಾಲಿಷವಾಗಿದ್ದು, ಇದರಿಂದ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಮುಖಂಡರ ವ್ಯಕ್ತಿತ್ವದ ಬೆತ್ತಲೆ ಪ್ರದರ್ಶನವಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಟೀಕಿಸಿದರು.

ಶಿಕಾರಿಪುರ (ಮೇ.18): ಕಾಂಗ್ರೆಸ್ ಪಕ್ಷದ ಮುಖಂಡರು ಈ ದೇಶದ ಪ್ರಜೆ ಎನ್ನುವುದನ್ನು ಮರೆತು ಶತ್ರು ರಾಷ್ಟ್ರ ಪಾಕಿಸ್ತಾನದ ಪರವಾದ ವಕ್ತಾರರ ರೀತಿ ಹೇಳಿಕೆ ನೀಡುತ್ತಿರುವುದು ಅತ್ಯಂತ ಬಾಲಿಷವಾಗಿದ್ದು, ಇದರಿಂದ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಮುಖಂಡರ ವ್ಯಕ್ತಿತ್ವದ ಬೆತ್ತಲೆ ಪ್ರದರ್ಶನವಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಟೀಕಿಸಿದರು.

ಪಟ್ಟಣದ ಮಾಳೇರಕೇರಿಯಲ್ಲಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಏ.22 ರಂದು ಸಂಜೆ ಕಾಶ್ಮೀರದ ಪೆಹಲ್ಗಾಮ್‌ನಲ್ಲಿನ ಸುಂದರ ಬೈಸರನ್ ಕಣಿವೆ ಪ್ರದೇಶದಲ್ಲಿ ಹಲವು ಪ್ರವಾಸಿಗರು ಸಂತೋಷ ಸಂಭ್ರಮದಲ್ಲಿ ಮೈಮರೆತಿದ್ದಾಗ ಪಾಕಿಸ್ತಾನಿ ಪ್ರಾಯೋಜಿತ ಉಗ್ರರ ಏಕಾಏಕಿ ಗುಂಡಿನ ದಾಳಿಗೆ 26 ಹಿಂದೂ ಅಮಾಯಕ ಮುಗ್ದರು ಬಲಿಯಾಗಿದ್ದು, ಅತ್ಯಂತ ದುರದೃಷ್ಟಕರ ಘಟನೆ ಎಂದ ಅವರು ಹಿಂದೂ ಧರ್ಮೀಯರು ಎಂಬುದನ್ನು ಖಚಿತಪಡಿಸಿಕೊಂಡು ಹತ್ಯೆಗೈದ ಭಯೋತ್ಪಾದಕರ ಕೃತ್ಯವನ್ನು ಮಾನವೀಯತೆ ಗೌರವಿಸುವ ಜಗತ್ತಿನ ಯಾರೂ ಬೆಂಬಲಿಸಲು ಸಾದ್ಯವಿಲ್ಲ.
 
ಇದರೊಂದಿಗೆ ಕೃತ್ಯದ ಬಗ್ಗೆ ಪ್ರದಾನಿ ಮೋದಿಗೆ ತಿಳಿಸಿ ಎಂದು ಬಹಿರಂಗವಾಗಿ ಹತ್ಯೆಯಾದ ಪುರುಷರ ಪತ್ನಿಯರಿಗೆ ಹೇಳುವ ಮೂಲಕ ಭಯೋತ್ಪಾದಕರ ಮನಸ್ಥಿತಿ ಅತ್ಯಂತ ಕ್ರೂರತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಹತ್ಯೆಯ ಭೀಕರ ದುರ್ಘಟನೆಗೆ ಪ್ರತೀಕಾರವಾಗಿ ಭಾರತ ಸರ್ಕಾರ ಕೈಗೊಂಡ ದಿಟ್ಟ ನಿರ್ದಾರದಿಂದ ಭಯೋತ್ಪಾದಕರ 9 ಅಡಗುತಾಣಗಳು ಚಿಂದಿಯಾಗಿ 100 ಕ್ಕೂ ಅಧಿಕ ಭಯೋತ್ಪಾದಕರ ರುಂಡ ಚೆಂಡಾಡಿದ ಸೈನ್ಯ ಇಂತಹ ಕುಕೃತ್ಯವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ರವಾನಿಸಿದೆ ಎಂದರು.

ಯೋಧರ ತ್ಯಾಗ ಬಲಿದಾನ ಸಮಸ್ತ ಜನತೆ ಶ್ಲಾಘಿಸುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಮಾತ್ರ ಯೋಧರ ಆತ್ಮಸ್ಥೈರ್ಯ ಕುಗ್ಗಿಸುವ ರೀತಿಯಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನ ಪರವಾಗಿ ವಕ್ತಾರರ ರೀತಿ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಿಸಿದರು. ಈ ಹಿಂದೆ ಪುಲ್ವಾಮ ವಾಯು ದಾಳಿಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಸಾಕ್ಷಿ ಕೇಳಿ, ಪುಲ್ವಾಮ ದಾಳಿ ನಕಲಿಯಾಗಿದ್ದು, ಕೇವಲ ಮರಗಿಡಗಳಿಗೆ ಗುಂಡು ಹಾರಿಸಲಾಗಿದೆ ಎಂದು ಉದ್ದಟತನದ ಹೇಳಿಕೆ ನೀಡಿದ್ದರು ಎಂದ ಅವರು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪರೇಷನ್‌ ಸಿಂದೂರದಿಂದ ಪಾಕಿಸ್ತಾನದ ಜತೆ ಯುದ್ದ ಬೇಡ ಎಂದು ಹೇಳಿಕೆ ನೀಡಿ ಪಾಕಿಸ್ತಾನದ ಮಾದ್ಯಮದಿಂದ ಮುಕ್ತಕಂಠದಿಂದ ಹೊಗಳಿಸಿಕೊಂಡಿದ್ದಾರೆ. 

ಸುರಕ್ಷತೆ ಮತ್ತು ವಿದ್ಯುದ್ದೀಕರಣ ಕಾಮಗಾರಿ ಹಿನ್ನೆಲೆ: ಕೆಲವು ರೈಲುಗಳ ಸಂಚಾರ ರದ್ದು

ದೇಶದ ಪ್ರಜೆ ಎಂಬುದನ್ನು ಮರೆತು ಶತ್ರು ರಾಷ್ಟ್ರದ ವಕ್ತಾರರ ರೀತಿ ಪದೇಪದೇ ಬಾಲಿಷ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರ ವ್ಯಕ್ತಿತ್ವದ ಬೆತ್ತಲೆ ಪ್ರದರ್ಶನವಾಗಿದೆ ಎಂದು ಆಪಾದಿಸಿದರು. ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಅಪರೇಷನ್ ಸಿಂದೂರ ಕೇವಲ ಬೂಟಾಟಿಕೆ ಎಂಬ ಹೇಳಿಕೆ ಪಕ್ಷದ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದ್ದು, ದೇಶದ ವೀರ ಸೈನಿಕರ ಸಮರ್ಪಣಾ ಮನೋಭಾವ ತ್ಯಾಗ ಬಲಿದಾನ ಪ್ರಶ್ನಿಸುವ ಪ್ರಯತ್ನವಾಗಿದೆ. ಇದರಿಂದಾಗಿ ಸೈನ್ಯಕ್ಕೆ ಅಗೌರವ ತೋರುವ ಪ್ರಯತ್ನ ತೀವ್ರ ಖಂಡನೀಯ ಹಾಗೂ ಅಕ್ಷ್ಯಮ್ಯ ಅಪರಾಧ ಎಂದ ಅವರು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ
ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!