ವಿಮಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಇದ್ದ ಕಾರಣಕ್ಕೆ ಅನಾಹುತ ತಪ್ಪಿದೆ
ಸಂಸದರನ್ನು ಸಮರ್ಥಿಸಿಕೊಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
ಪ್ರಧಾನಿ ಮೋದಿ ಅವರೇ ನ್ಯಾಯ ಕೊಡಿ ಎನ್ನುವ ಟ್ವಿಟ್‌ಗೆ ತಿರುಗೇಟು
ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.19): ವಿಮಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಇದ್ದ ಕಾರಣಕ್ಕೆ ಅನಾಹುತ ತಪ್ಪಿದೆ. ಅವರು ಡೋರ್ ಸ್ವಲ್ಪ ಓಪನ್ ಇದೆ ನೋಡಿ ಎಂದು ಹೇಳಿದ್ದೇ ಅಪರಾಧವಾ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.
ಚನ್ನೈನ ವಿಮಾನದಲ್ಲಿ ರಕ್ಷಣೆ ಮಾಡಿದವರ ಮೇಲೆ ಆರೋಪ ಹೊರಿಸುವುದು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿರುವ ಒಂದು ಕೆಟ್ಟ ಖಾಯಿಲೆ. ಹೀಗಾಗಿ ಜನರ ರಕ್ಷಣೆ ಮಾಡಲು ಹೊರಟಾಗ ಇದು ಮೋದಿ ವ್ಯಾಕ್ಸಿನ್ ಎಂದರು. ಯಾರು ಸತ್ತರು? ಇದೇ ಕಾಂಗ್ರೆಸ್, ಓವೈಸಿ ವ್ಯಾಕ್ಸಿನ್ ತಗೊಂಡ್ರೆ ನಪುಂಸಕರಾಗುತ್ತಾರೆ ಎಂದು ಅಪಪ್ರಾಚರ ಮಾಡಿದರು. ನಮ್ಮ ಜನನ ಪ್ರಮಾಣ ಚೀನಾವನ್ನೂ ಮೀರಿಸಿತು ಎಂದು ವ್ಯಂಗ್ಯವಾಡಿದವರ ಬಗ್ಗೆ ಏನು ಮಾತನಾಡಬೇಕೋ ಗೊತ್ತಾಗುತ್ತಿಲ್ಲ ಎಂದರು.
Haveri: ವಿಮಾನವನ್ನೇ ನೋಡದ ಹೆತ್ತವ್ವನಿಗೆ ವಿಮಾನದಲ್ಲೇ ಹುಟ್ಟುಹಬ್ಬ ಆಚರಿಸಿದ ಮಗ
ಸಿದ್ದರಾಮಯ್ಯ ಟ್ವೀಟ್‌ಗೆ ತಿರುಗೇಟು: ನ್ಯಾಯ ಕೊಡಿ ಎಂದು ಕೇಳುವವರಿಗೆ ಒಂದು ನೈತಿಕತೆ ಇರಬೇಕು. ಸಮಾಜವಾದಿ ಹೆಸರಲ್ಲಿ ಮಜಾವಾದಿ ರಾಜಕಾರಣ ಮಾಡಿದವರಿಗೆ ಜನ ಶಿಕ್ಷೆ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮಾಲೀಕರು ಜನರೇ, ಅವರೇ ನ್ಯಾಯ ಕೊಡುವವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಪ್ರವಾಸದ ಹಿನ್ನೆಲೆಯಲ್ಲಿ ನ್ಯಾಯ ಕೊಡಿ ಎಂದು ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ರವಿ, ಅವರ ಕಾಲದಲ್ಲಿ ಪಿಎಫ್ಐ ಎಸ್‌ಡಿಪಿಐ ಮೇಲಿನ ಕೇಸ್ ವಾಪಸ್ ಪಡೆದು ಸರಣಿ ಕೊಲೆಗೆ ಕಾರಣರಾದರು. ಜನರು ಅವರಿಗೆ ಶಿಕ್ಷೆ ಕೊಟ್ಟರು. ಅವರನ್ನು ಅಧಿಕಾರದಿಂದ ಇಳಿಸಲು ಹಲವು ಕಾರಣಗಳಲ್ಲಿ ಅದೂ ಒಂದು ಕಾರಣ. ರೀಡು ಮೂಲಕ ಸಾವಿರಾರು ಕೋಟಿ ಹಗರಣ ನಡೆಸಿದ ಕಾರಣಕ್ಕೆ ಶಿಕ್ಷೆ ನೀಡಬೇಕೆಂದೇ ಜನ ನ್ಯಾಯ ಕೊಟ್ಟಿದ್ದು ಎಂದು ಟೀಕಿಸಿದರು.
ತಮ್ಮದೇ ಪಕ್ಷದವರನ್ನು ಸೋಲಿಸಿ ಅಧಿಕಾರ ಪಡೆದಿಲ್ಲ: ಮೋದಿ ಅವರು ಯಾವಾಗಲೂ ದೇಶಕ್ಕೆ, ಬಡವರಿಗೆ ದಲಿತರಿಗೆ, ಮಹಿಳೆಯರಿಗೆ ನ್ಯಾಯ ಒದಗಿಸಲು ಮುಂದಿದ್ದಾರೆ. ನೀವು ಯಾವ ರೀತಿ ನ್ಯಾಯ ಬಯಸುತ್ತಿದ್ದೀರಿ ಗೊತ್ತಿಲ್ಲ. ಅಧಿಕಾರ ಇದ್ದರೆ ಮಾತ್ರ ಇಲ್ಲಿರುತ್ತೇನೆ. ಇಲ್ಲವಾದಲ್ಲಿ ಇನ್ನೊಂದು ಪಕ್ಷಕ್ಕೆ ಹೋಗುತ್ತೇನೆ ಎನ್ನುವ ಜಾಯಮಾನದವರು ಮೋದಿ ಅವರಲ್ಲ. ತಮ್ಮದೇ ಪಕ್ಷದ ನಾಯಕರನ್ನು ಸೋಲಿಸಿ ಅನ್ಯಾಯ ಮಾಡಿದವರು ಮೋದಿ ಅವರಲ್ಲ. ನಿಜವಾಗಲೂ ಪರಮೇಶ್ವರ್ ಅವರು ತಮ್ಮನ್ನು ಸೋಲಿಸಿದವರನ್ನ ಸೋಲಿಸಿ ನನಗೆ ನ್ಯಾಯ ಕೊಡಿ ಎಂದು ಕೇಳಬೇಕು. ಮಲ್ಲಿಕಾರ್ಜುನ ಖರ್ಗೆ ನ್ಯಾಯ ಕೇಳಬೇಕು. ಸಿದ್ದರಾಮಯ್ಯ ಅವರಲ್ಲ ಎಂದು ವ್ಯಂಗ್ಯವಾಡಿದರು.
ವಿಮಾನ ಹಾರಿಸುವ ಮೊದಲು ಅಪ್ಪನ ಆಶೀರ್ವಾದ ಪಡೆದ ಮಹಿಳಾ ಪೈಲಟ್
13 ಕೋಟಿ ಶೌಚಾಲಯ ನಿರ್ಮಾಣ: ದೇಶದ ಜನರಿಗೆ ನ್ಯಾಯ ಕೊಡುವ ಕೆಲಸವನ್ನು ಮೋದಿ ಅವರು ಮಾಡುತ್ತಿದ್ದಾರೆ. ಇದಕ್ಕಾಗಿ 13 ಕೋಟಿ ಶೌಚಾಲಯ ನಿರ್ಮಾಣ ಮಾಡಿಕೊಟ್ಟರು. ಇದು ತಮಾಷೆ ವಿಚಾರವಲ್ಲ. ಬ್ಯಾಂಕ್ ಖಾತೆಯೇ ಇಲ್ಲದ 40 ಕೋಟಿ ಜನರಿಗೆ ಖಾತೆ ಮಾಡಿಸಿದರು. ಉಚಿತ ಗ್ಯಾಸ್ ಸಂಪರ್ಕ ಕೊಟ್ಟು ಜನರಿಗೆ ನ್ಯಾಯ ಕೊಟ್ಟರು, ಕಾಂಗ್ರೆಸ್ ನಾಯಕರು ಕೋವಿಡ್ ವ್ಯಾಕ್ಸಿನ್ ಬಗ್ಗೆ ಅಪ್ರಪ್ರಚಾರ ಮಾಡಿದರು. ಉಚಿತವಾಗಿ 216 ಕೋಟಿ ವ್ಯಾಕ್ಸಿನ್ ನೀಡಲಾಯಿತು. ಗರೀಬಿ ಕಲ್ಯಾಣ್ ಯೋಜನೆಯಡಿ ಮೂರು ವರ್ಷದಿಂದ ಉಚಿತ ಅಕ್ಕಿ ಕೊಡುತ್ತಿದ್ದಾರೆ. ನ್ಯಾಯ ಕೊಡುವುದು ಎಂದರೆ ಇದು ಎಂದರು.