ಈ ದೇಶದ ಕಾನೂನೇ ಸರಿಯಿಲ್ಲ. ದೇಶ ಕಾನೂನು ತಂದಿದೆ. ಆದರೆ ನ್ಯಾಯಾಲಯ ಅದನ್ನು ತಡೆ ಹಿಡಿದಿದೆ. ಸೂಕ್ತ ಕಾನೂನಿಲ್ಲದೇ ಪೊಲೀಸ್ ಇಲಾಖೆ ಸಹ ಅಸಹಾಯಕವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ವಿಷಾಧಿಸಿದರು.
ಕಾರವಾರ (ಜು.1) : ಈ ದೇಶದ ಕಾನೂನೇ ಸರಿಯಿಲ್ಲ. ದೇಶ ಕಾನೂನು ತಂದಿದೆ. ಆದರೆ ನ್ಯಾಯಾಲಯ ಅದನ್ನು ತಡೆ ಹಿಡಿದಿದೆ. ಸೂಕ್ತ ಕಾನೂನಿಲ್ಲದೇ ಪೊಲೀಸ್ ಇಲಾಖೆ ಸಹ ಅಸಹಾಯಕವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ವಿಷಾಧಿಸಿದರು.
ನಗರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಮ್ಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದ ಕುರಿತು ಐದು ಪ್ರಕರಣ ದಾಖಲಿಸಿದ್ದೇನೆ. ಏನೂ ಪ್ರಯೋಜನವಾಗಿಲ್ಲ. ಈ ದೇಶದ ಕಾನೂನು ಸರಿಯಿಲ್ಲ. ಪೊಲೀಸರಿಗೂ ಏನು ಮಾಡಲಾಗುತ್ತಿಲ್ಲ. ಕಾನೂನು ರೂಪಿಸಿರುವುದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿದೆ. ಹೀಗಾಗಿ ಅವರು ಸ್ವಲ್ಪ ಮುನ್ನುಗ್ಗಿದ್ದಾರೆ. ಏನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ಅದಕ್ಕೆ ಕಡಿವಾಣ ಹಾಕುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
undefined
Karnataka election 2023: ಜನತೆಯ ಮುಂದೆ ಬಿಜೆಪಿ ಅಸಲಿ ಬಣ್ಣ ಬಯಲು ಮಾಡುತ್ತೇವೆ: ಶಾಸಕ ಮಂಕಾಳ ವೈದ್ಯ
ಸಾಮಾಜಿಕ ಜಾಲಾತಾಣದಲ್ಲಿ ಕೆಟ್ಟದಾಗಿ ಟೀಕೆ ಮಾಡಿ ಸಮಾಜವನ್ನು ಹಾಳು ಮಾಡಿದ್ದಾರೆ. ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ಕಳ್ಳರ ರೀತಿ ಫೇಕ್ ಅಕೌಂಟ್ ಮಾಡಿಕೊಂಡು ತೇಜೋವಧೆ ಮಾಡುವವರಿಗೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿಗೆ ಐದು ವರ್ಷ, ಕೇಂದ್ರದಲ್ಲಿ ಹತ್ತು ವರ್ಷ ಅಧಿಕಾರ ಜನರು ಕೊಟ್ಟಿದ್ದಾರೆ. ಆದರೆ ಏನೂ ಅಭಿವೃದ್ಧಿಯನ್ನು ಬಿಜೆಪಿ ಸರ್ಕಾರ ಮಾಡಲಿಲ್ಲ. ದೇಶದಲ್ಲಿ, ರಾಜ್ಯದಲ್ಲಿ ಮಾಡಬಾರದ್ದನ್ನೇ ಬಿಜೆಪಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಟೀಕೆ, ಅವಹೇಳನ ಮಾಡುವುದು ಅವರ ಕೆಲಸವಾಗಿದೆ. ಅವರ ಮನಸ್ಥಿತಿ ಸರಿಯಿಲ್ಲ. ಬೆಳಗ್ಗೆ ಒಂದು ಹೊತ್ತಾದರೂ ಬಿಜೆಪಿಗರು ದೇವಸ್ಥಾನಕ್ಕೆ ಹೋಗಬೇಕು ಎಂದು ಲೇವಡಿ ಮಾಡಿದರು.
Bhatkal Assembly Election: ಭಟ್ಕಳದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಬೆಂಬಲವಿಲ್ಲ, ತಂಜೀಮ್ ನಿರ್ಧಾರ!