ಕಾಂಗ್ರೆಸ್ ನಾಯಕರಿಗೆ ಸಂವಿಧಾನ ಪುಸ್ತಕ ಹಿಡಿದುಕೊಳ್ಳುವ ಯೋಗ್ಯತೆಯಿಲ್ಲ; ಡಾ.ಕೆ. ಅನ್ನದಾನಿ

Published : Jul 01, 2024, 02:51 PM IST
ಕಾಂಗ್ರೆಸ್ ನಾಯಕರಿಗೆ ಸಂವಿಧಾನ ಪುಸ್ತಕ ಹಿಡಿದುಕೊಳ್ಳುವ ಯೋಗ್ಯತೆಯಿಲ್ಲ; ಡಾ.ಕೆ. ಅನ್ನದಾನಿ

ಸಾರಾಂಶ

ಸಂವಿಧಾನವನ್ನು ಮೂಲೆಗೆಸೆದು ಎಮರ್ಜೆನ್ಸಿ ಹೇರಿದ್ದ ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯದ 11,000 ಕೋಟಿ ರೂ. ವರ್ಗಾವಣೆ ಮಾಡಿದ  ಕಾಂಗ್ರೆಸ್‌ ನಾಯಕರಿಗೆ ಸಂವಿಧಾನ ಪುಸ್ತಕವನ್ನು ಹಿಡಿದುಕೊಳ್ಳಲು ಯೋಗ್ಯತೆಯಿಲ್ಲ.

ಮಂಡ್ಯ (ಜು.01):  ದೇಶದಲ್ಲಿ ಸಂವಿಧಾನವನ್ನು ಮೂಲೆಗೆಸೆದು ಎಮರ್ಜೆನ್ಸಿ ಹೇರಿದ್ದ ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಮೀಸಲಿದ್ದ 11,000 ಕೋಟಿ ರೂ. ಹಣವನ್ನು ಬೇರೆ ಯೋಜನೆಗೆ ವರ್ಗಾವಣೆ ಮಾಡಿಕೊಂಡಿರುವ ಕಾಂಗ್ರೆಸ್‌ ನಾಯಕರಿಗೆ ಸಂವಿಧಾನ ಪುಸ್ತಕವನ್ನು ಹಿಡಿದುಕೊಳ್ಳಲು ಯೋಗ್ಯತೆಯಿಲ್ಲ ಎಂದು ಜೆಡಿಎಸ್ ಮಾಜಿ ಶಾಸಕ ಡಾ.ಕೆ. ಅನ್ನದಾನಿ ವಾಗ್ದಾಳಿ ಮಾಡಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್.ಸಿ, ಎಸ್.ಟಿ. ಜನರಿಗೆ ರಾಜ್ಯ ಸರ್ಕಾರದಿಂದ ದ್ರೋಹ ಮಾಡಲಾಗಿದೆ. ಹೀಗಾಗಿ, ಅವರಿಗೆ ಸಂವಿಧಾನ ಪುಸ್ತಕ ಹಿಡಿಯಲು ಕಾಂಗ್ರೆಸ್ ಗೆ ಯೋಗ್ಯತೆ ಇಲ್ಲ. ರಾಜ್ಯ ಸರ್ಕಾರ, ರಾಹುಲ್ ಗಾಂಧಿ ಎಲ್ಲಿಗೆ ಹೋದರು ಸಂವಿಧಾನದ ಪುಸ್ತಕ ಹಿಡಿದುಕೊಳ್ತಾರೆ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕಾಂಗ್ರೆಸ್ ನಿಂದ ಅಥವಾ ನರೇಂದ್ರ ಮೋದಿ ಅವರಿಂದ ಸಂವಿಧಾನಕ್ಕೆ ಅಪಪ್ರಚಾರ ಆಗಿದ್ಯಾ? ಕಾಂಗ್ರೆಸ್‌ನವರು 98 ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದಲ್ಲದೇ, ಎಮರ್ಜೆನ್ಸಿ ಡಿಕ್ಲೆರ್ ಮಾಡಿ ಜೈಲಿಗೆ ಹಾಕಿದ್ದೀರಿ ಎಂದು ವಾಗ್ದಾಳಿ ಮಾಡಿದರು.

ಕಾಂಗ್ರೆಸ್ ನಾಯಕರ ಜಾತಿವಾದಿತನ ಬಜಾರದಲ್ಲಿ ಬೆತ್ತಲಾಗಿದೆ; ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

ದೇಶದಲ್ಲಿ ಎಮರ್ಜೆನ್ಸಿ ಡಿಕ್ಲೇರ್ ಮಾಡಿದಾಗ ಇಂಧಿರಾಗಾಂಧಿ ಸಂವಿಧಾನವನ್ನ ಸೈಡಿಗೆ ಹಾಕಿದ್ದರು. ಈ ಮೂಲಕ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಗೌರವ ತೋರಿದ್ದೀರಿ. ಹೀಗಾಗಿ, ಕಾಂಗ್ರೆಸ್‌ಗೆ ಸಂವಿಧಾನ ಪುಸ್ತಕ ಹಿಡಿಯಲು ಕಾಂಗ್ರೆಸ್ ಗೆ ಯೋಗ್ಯತೆ ಇಲ್ಲ. ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ರಾಜ್ಯದಲ್ಲಿ 11 ಸಾವಿರ ಕೋಟಿ ರೂ. SCP/TSP ಹಣ ವರ್ಗಾವಣೆ ಮಾಡಿ ತಳ ಸಮುದಾಯಗಳ ಜನರಿಗೆ ಅನ್ಯಾಯ ಮಾಡಿದ್ದೀರಿ. ವಾಲ್ಮೀಕಿ ನಿಗಮದ 187 ಕೋಟಿ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದೀರಿ. ಅರಣ್ಯ ಪ್ರದೇಶದಲ್ಲಿ ವಾಸ ಮಾಡುವ ಗಿರಿ ಜನರಿಗೆ ಮೀಸಲಿಟ್ಟ ಹಣ ದುರ್ಬಳಕೆ ಆಗಿದೆ. ಸರ್ಕಾರಕ್ಕೆ ಸ್ವಲ್ಪವೂ ಮಾನವೀಯತೆ ಇಲ್ಲ ಎಂದು ಕಿಡಿಕಾರಿದರು.

ಸಿಟಿ ರವಿ ಏನು ಮಾತಾಡ್ತಾರಂತ ಅವರಿಗೇ ಗೊತ್ತಾಗೊಲ್ಲ: ಸಚಿವ ಶಿವರಾಜ್ ತಂಗಡಗಿ

ರಾಜ್ಯದಲ್ಲಿ ಎಸ್‌ಸಿ, ಎಸ್ಟಿ ಸದನ ಸಮಿತಿ ಏನು ಮಾಡ್ತಿದೆ? ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಸಚಿವರ ರಾಜೀನಾಮೆ ಕೊಡಿಸಿದರೆ ಮುಗಿಯಲ್ಲ, ಒಬ್ಬ ಸರ್ಕಾರಿ ನೌಕರ ಸಾವನ್ನಪ್ಪಿದ್ದು ಅವರಿಗೆ ನ್ಯಾಯ ಸಿಗಬೇಕು. ಮುಖ್ಯಮಂತ್ರಿಗಳ ಬಳಿಯೇ ಹಣಕಾಸು ಖಾತೆ ಇದೆ. ಅವರೇ, ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜ್ಯ ಸಕರ್ಕಾರದ ಹಣವನ್ನು ಬೇರೆ ರಾಜ್ಯದ ಚುನಾವಣೆಗೂ ಬಳಕೆ ಮಾಡಿದ್ದೀರಿ. ಆಂದ್ರಪ್ರದೇಶದ, ತೆಲಂಗಾಣಕ್ಕೆ ಹಣ ಹೋಗಿದೆ. ಮುಖ್ಯಮಂತ್ರಿಗಳು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೆ, ಹಣ ದುರುಪಯೋಗ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ