ಭಾರತಕ್ಕೆ ಮುಸ್ಲಿಂ ಪ್ರಧಾನಿ ಆಗ್ಬೇಕು ಅನ್ನೋ ವಿಷಯ ಚರ್ಚೆ ಆಗ್ತಿದೆ.. ಈ ಬಗ್ಗೆ ಟ್ವಿಟರ್ ಆಭಿಯಾನ ಶುರುವಾಗಿದೆ.. ಕಾಂಗ್ರೆಸ್ ಘಟಾನುಘಟಿ ನಾಯಕರು ಮುಸ್ಲಿಂ ಪ್ರಧಾನಿ ಆಗ್ಬೇಕು ಅನ್ನೋದಕ್ಕೆ ಧ್ವನಿಗೂಡಿಸಿದ್ದಾರೆ.. ಆದ್ರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ ಪಾಟೀಲ, ಮುಸ್ಲಿಂ ಪ್ರಧಾನಿ ಅನ್ನೋದು ಹುಚ್ಚು ಕಲ್ಪನೆ ಎಂದಿದ್ದಾರೆ.
ಗದಗ (ಅ.31) : ಭಾರತಕ್ಕೆ ಮುಸ್ಲಿಂ ಪ್ರಧಾನಿ ಆಗ್ಬೇಕು ಅನ್ನೋ ವಿಷಯ ಚರ್ಚೆ ಆಗ್ತಿದೆ.. ಈ ಬಗ್ಗೆ ಟ್ವಿಟರ್ ಆಭಿಯಾನ ಶುರುವಾಗಿದೆ.. ಕಾಂಗ್ರೆಸ್ ಘಟಾನುಘಟಿ ನಾಯಕರು ಮುಸ್ಲಿಂ ಪ್ರಧಾನಿ ಆಗ್ಬೇಕು ಅನ್ನೋದಕ್ಕೆ ಧ್ವನಿಗೂಡಿಸಿದ್ದಾರೆ.. ಆದ್ರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ ಪಾಟೀಲ, ಮುಸ್ಲಿಂ ಪ್ರಧಾನಿ ಅನ್ನೋದು ಹುಚ್ಚು ಕಲ್ಪನೆ ಎಂದಿದ್ದಾರೆ.
ಗದಗ(Gadag)ನಲ್ಲಿ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿ.ಸಿ. ಪಾಟೀಲ(B.C.Patil), ಮುಸ್ಲಿಂ ಪ್ರಧಾನಿ(Muslim Prime minister) ಅನ್ನೋದು ಕಲ್ಪನೆ. ಮುಸ್ಲಿಂ ಪ್ರಧಾನಿ ವಿಷಯ ಕಲ್ಪನೆಯೇ ಹೊರತು ಸಹಕಾರ ಆಗೋದಕ್ಕೆ ಸಾಧ್ಯವಿಲ್ಲ ಅಂದ್ರು. ಅಷ್ಟೇ ಅಲ್ಲ, ಇದು ಭಾರತ, ಅದೆಲ್ಲ ಇಲ್ಲಿ ನಡೆಯುವುದಿಲ್ಲ.ಹಾಗೇ ಆಗೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
Minority PM Row: ವಿರೋಧ ಪಕ್ಷಗಳಿಗೆ ಬೇಕಂತೆ 'ಮುಸ್ಲಿಂ ಪ್ರಧಾನಿ'!
ಸಿದ್ದರಾಮಯ್ಯ(Siddaramaiah) ವಿರುದ್ಧದ ಕಿಕ್ ಬ್ಯಾಕ್(Kick back) ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಅವರ ಮೇಲಿನ ಆರೋಪಗಳಿಂದ ರಕ್ಷಣೆ ಪಡೆಯಲು ಸಿದ್ದು ಮುಂದಾಗಿದ್ರು.. ಲೋಕಾಯುಕ್ತ(Lokayukta) ಮುಚ್ಚಿ ಎಸಿಬಿ(ACB) ರಚನೆ ಮಾಡಿದ್ದೇ ಅದಕ್ಕೆ ಸಾಕ್ಷಿಯಾಗಿದೆ ಅಂದ್ರು.. ಸ್ಟೀಲ್ ಬ್ರಿಡ್ಜ್(Steel bridg) ಯಾಕೆ ವಾಪಾಸ್ ಹೋಯ್ತು. ಆರೋಪ ಬಂದಿದ್ದಕ್ಕೆ ತಾನೇ ವಾಪಾಸ್ ಹೋಗಿರೋದು?.
ಸ್ವಪಕ್ಷದಿಂದ ಕಿರುಕುಳ ಎಂಬ ಜನಾರ್ದನ ರೆಡ್ಡಿ(Janardan Reddy) ಅವರ ಹೇಳಿಕೆಗೆ ಎಲ್ಲ ಸುಳ್ಳು ಎಂದ್ರು. ಯಾರೂ ಕಿರುಕುಳ ಕೊಡಲ್ಲ, ಜನಾರ್ದನ್ ರೆಡ್ಡಿ ಆರಾಮಾಗಿದ್ದಾರೆ ಎಂದಿದ್ದಾರೆ. ಜತೆಗೆ ನಮ್ಮ ಪಕ್ಷದಲ್ಲಿ ಆ ರೀತಿ ಏನಾದ್ರೂ ನಡೆದಿದೆಯಾ ಅನ್ನೋ ಪ್ರಶ್ನೆಗೆ ನನಗೆ ಗೊತ್ತಿಲ್ಲ, ಪಕ್ಷದಲ್ಲಿ ಆ ರೀತಿ ನಡೆದಿಲ್ಲ ಎಂದು ತಿಳಿಸಿದರು.
ಎಸ್ಸಿ ಎಸ್ಟಿ ಕ್ರೆಡಿಟ್ ವಾರ್ ವಿಚಾರಕ್ಕೆ ಉತ್ತರ ನೀಡಿದ ಪಾಟೀಲ್, ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ ಸರ್ಕಾರ. ಸುಮ್ನೆ ಆಯೋಗ ರಚನೆ ಮಾಡಿದಿವಿ ಅಂದ್ರೆ ಹೇಗೆ? ಆಗಲೇ ಜಾರಿ ಮಾಡಬಹುದಿತ್ತಲ್ಲ. ಯಾಕೆ ಮಾಡಿಲ್ಲ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನಿಸಿದ್ರು. ಮುಂದುವರಿದು, ಸುಮ್ನೆ ಜನರ ಕಣ್ಣೊರೆಸುವುದಕ್ಕೆ ಆಯೋಗ ರಚನೆ ಮಾಡ್ಕೊಂಡು ಬಂದ್ರು. ಆದ್ರೆ, ಸಾಮಾಜಿಕ ನ್ಯಾಯ ಕೊಡುವ ಕೆಲಸವನ್ನ ನಮ್ಮ ಸರ್ಕಾರ ಮಾಡಿದೆ. ಯಾರು ಮೀಸಲಾತಿ ಹೆಚ್ಚು ಮಾಡಿದ್ದಾರೆ ಅಂತಾ ಆ ಜನಾಂಗಕ್ಕೆ ಗೊತ್ತಿದೆ ಎಂದರು.
ಭಾರತದಲ್ಲಿ ಮುಸ್ಲಿಂ ರಾಷ್ಟ್ರಪತಿ, ಪಿಎಂ ಆಗಲು ಸಾಧ್ಯವೇ ಇಲ್ವಾ? ಟ್ವಿಟರ್‌ನಲ್ಲಿ Muslim PM ಟ್ರೆಂಡ್ ಆಗಿದ್ದೇಕೆ?
ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರಕ್ಕೆ ಸಂಹಿತೆ ಅವಶ್ಯಕತೆ ಇದೆ.. ಮುಂದಿನ ದಿನದಲ್ಲಿ ಎಲ್ಲೆಡೆ ಜಾರಿಗೆ ಬರುತ್ತೆ ಎಂದು ಜಾರಿ ಮಾಡುವ ಕುರಿತು ಬಿ.ಸಿ.ಪಾಟೀಲ್ ಸುಳಿವು ನೀಡಿದರು.