ಲೋಕಸಭಾ ಚುನಾವಣೆ 2024: ಇಂಡಿಯಾ ಮೈತ್ರಿಕೂಟಕ್ಕೆ 400 ಸೀಟು, ಸೈಯ್ಯದ ಬರಾಹಾನುದ್ದೀನ್

By Kannadaprabha News  |  First Published Apr 23, 2024, 4:00 PM IST

ಈ ಬಾರಿ ಕಾಂಗ್ರೆಸ್ ಗೆಲುವು ಖಚಿತವಾಗಿದೆ. ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಹಲವಾರು ಅಭಿವೃದ್ಧಿ ಮಾಡಿ ದೇಶದ ಚಿತ್ರವನ್ನು ಬದಲಿಸಿದ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲುತ್ತದೆ. ಈ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ 400 ಅಧಿಕ ಸೀಟು ಬರಲಿದ್ದು, ಬಿಜೆಪಿಗೆ 150ಕ್ಕಿಂತ ಕಡಿಮೆ ಸೀಟ್ ಬರಲಿವೆ ಎಂದ ವಿಜಯಪುರ ಲೋಕಸಭಾ ಕ್ಷೇತ್ರದ ಎಐಸಿಸಿ ವೀಕ್ಷಕ ಸೈಯ್ಯದ ಬರಾಹಾನುದ್ದೀನ್ 


ವಿಜಯಪುರ(ಏ.23): ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವು 400ರ ಗಡಿ ದಾಟಲಿದ್ದು, ಬಿಜೆಪಿ 150ಕ್ಕಿಂತ ಕಡಿಮೆ ಸ್ಥಾನ ಪಡೆದು ಅಧಿಕಾರದಿಂದ ಕೆಳಗಿಳಿಯಲಿದೆ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಎಐಸಿಸಿ ವೀಕ್ಷಕ ಸೈಯ್ಯದ ಬರಾಹಾನುದ್ದೀನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಗೆಲುವು ಖಚಿತವಾಗಿದೆ. ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಹಲವಾರು ಅಭಿವೃದ್ಧಿ ಮಾಡಿ ದೇಶದ ಚಿತ್ರವನ್ನು ಬದಲಿಸಿದ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲುತ್ತದೆ. ಈ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ 400 ಅಧಿಕ ಸೀಟು ಬರಲಿದ್ದು, ಬಿಜೆಪಿಗೆ 150ಕ್ಕಿಂತ ಕಡಿಮೆ ಸೀಟ್ ಬರಲಿವೆ ಎಂದರು.

Tap to resize

Latest Videos

ಈಶ್ವರಪ್ಪಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ: ರಾಧಾಮೋಹನ್‌

ಕಾಂಗ್ರೆಸ್ ನಡೆಸಿದ ಭಾರತ್‌ ಜೋಡೋ ಯಾತ್ರೆ ಯಾವುದೇ ಓಟಿಗಾಗಿ ಅಲ್ಲ, ಅದು ಮನಸುಗಳನ್ನು ಜೋಡಿಸುವ ಯಾತ್ರೆ. ಇದನ್ನು ಕಾಂಗ್ರೆಸ್ ಓಟಿಗಾಗಿ ಬಳಸಿಕೊಳ್ಳುವ ಅವಶ್ಯಕತೆ ಇಲ್ಲ. ಜನರೇ ಬಿಜೆಪಿ ಆಡಳಿತದಿಂದ ಬೇಸತ್ತು ಹೋಗಿದ್ದಾರೆ. ಅವರ ಬದಲಾವಣೆ ಬಯಸಿ ಈ ಬಾರಿ ಇಂಡಿಯಾ ಮೈತ್ರಿಕೂಟಕ್ಕೆ ಮತ ನೀಡಲಿದ್ದಾರೆ ಎಂದು ತಿಳಿಸಿದರು.

ವಿಜಯಪುರದಲ್ಲಿ ರಾಜು ಆಲಗೂರ ಗೆಲುವು ಖಚಿತ. ನಾನು ಕಳೆದು ಮೂರು ದಿನಗಳಿಂದ ಸಿಂದಗಿ, ವಿಜಯಪುರ ನಗರ ಸೇರಿದಂತೆ ಪ್ರಚಾರದ ಸಂದರ್ಭದಲ್ಲಿ ನೋಡಿರುವೆ. ವಿಜಯಪುರ ಜನತೆಗೆ ಕಾಂಗ್ರೆಸ್‌ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಈ ಬಾರಿ ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡ ಅಬ್ದುಲ್ ಅಮೀದ ಮುಶ್ರೀಫ್, ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಹ್ಮದ್ ರಫೀಕ್ ಟಪಾಲ್, ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಶಬ್ಬೀರ್‌ ಜಾಗೀರದಾರ ಮತ್ತಿತರರು ಇದ್ದರು.

click me!