ದಾವಣಗೆರೆಯ ಬಿಜೆಪಿ ಈಗ ಒಡೆದ ಮನೆಯಾಗಿದೆ. ಲೋಕಸಭಾ ಚುನಾವಣೆಗು ಮುನ್ನ ನಂತರವು ಎರಡು ಬಣಗಳ ಮಧ್ಯೆ ಮುಸುಕಿನ ಗುದ್ದಾಟಗಳು ನಡೆಯುತ್ತಲೇ ಇದೆ. ಈಗ ಮತ್ತೆ ಮುಸುಕಿನ ಗುದ್ದಾಟ ಮುನ್ನಲೆಗೆ ಬಂದಿದ್ದು, ವಾಗ್ದಾಳಿ ನಡೆಸುವುದರ ಜೊತೆ ದೇವಸ್ಥಾನದಲ್ಲಿ ಗಂಟೆ, ಆಣೆ ಪ್ರಮಾಣ ಕೂಡ ಹೆಚ್ಚಾಗಿದೆ.
ದಾವಣಗೆರೆ(ಜು.21): ಲೋಕಸಭಾ ಚುನಾವಣೆ ಮುಕ್ತಾಯವಾದ್ರು ಬಿಜೆಪಿಯಲ್ಲಿ ಮಾತ್ರ ಒಳ ಜಗಳ ಮಾತ್ರ ನಿಲ್ಲುವ ಹಂತಕ್ಕೆ ಕಾಣುತ್ತಿಲ್ಲ. ಬೆಣ್ಣೆ ನಗರಿಯ ಲೋಕಸಭೆಯ ಬಿಜೆಪಿ ಅಭ್ಯರ್ಥಿಯ ಸೋಲಿನ ಹೊಣೆಯನ್ನು ರೇಣುಕಾಚಾರ್ಯ ಟೀಮ್ ಮತ್ತ ಸಿದ್ದೇಶ್ವರ್ ಟೀಮ್ ಒಬ್ಬರ ಮೇಲೆ ಒಬ್ಬರು ಟೀಕೆ ಮಾಡುತ್ತಿದ್ದು, ಈಗ ಧರ್ಮಸ್ಥಳದ ದೇವಸ್ಥಾನದ ಗಂಟೆ ರಾಜಕಾರಣಕ್ಕೆ ಬಂದು ನಿಂತಿದೆ.
ಬೆಣ್ಣೆ ನಗರಿ ದಾವಣಗೆರೆಯ ಬಿಜೆಪಿ ಈಗ ಒಡೆದ ಮನೆಯಾಗಿದೆ. ಲೋಕಸಭಾ ಚುನಾವಣೆಗು ಮುನ್ನ ನಂತರವು ಎರಡು ಬಣಗಳ ಮಧ್ಯೆ ಮುಸುಕಿನ ಗುದ್ದಾಟಗಳು ನಡೆಯುತ್ತಲೇ ಇದೆ. ಈಗ ಮತ್ತೆ ಮುಸುಕಿನ ಗುದ್ದಾಟ ಮುನ್ನಲೆಗೆ ಬಂದಿದ್ದು, ವಾಗ್ದಾಳಿ ನಡೆಸುವುದರ ಜೊತೆ ದೇವಸ್ಥಾನದಲ್ಲಿ ಗಂಟೆ, ಆಣೆ ಪ್ರಮಾಣ ಕೂಡ ಹೆಚ್ಚಾಗಿದೆ. ಅದರಲ್ಲೂ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಸೋಲಿಗೆ ರೇಣು ಟೀಮ್ ಕಾರಣ ಎಂದು ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಆಪ್ತರು ರೇಣುಕಾಚಾರ್ಯ ಟೀಮ್ ಮೇಲೆ ಆರೋಪ ಮಾಡುತ್ತಿದ್ದು ಇದು ದಿನದಿಂದ ದಿನಕ್ಕೆ ವಿಕೋಪಕ್ಕೆ ತಿರುಗಿದೆ.
undefined
ಗ್ಯಾರಂಟಿಯಿಂದ ಬಡವರ ಆರ್ಥಿಕ ಸ್ಥಿತಿ ಹೆಚ್ಚು: ಮಾಜಿ ಸಚಿವ ಎಚ್.ಎಂ. ರೇವಣ್ಣ
ಲಗಾನ್ ಟೀಂ ವಿರುದ್ಧ ಜಿಎಂ ಸಿದ್ದೇಶ್ವರ್ ಟೀಮ್ ವಾಗ್ದಾಳಿ ನಡೆಸಿದ್ದಾರೆ. ಲಗಾನ್ ಟೀಮ್ ಹೆಸರಿಟ್ಟುಕೊಂಡು ಬ್ಲಾಕ್ ಮೇಲ್ ರಾಜಕಾರಣ ಮಾಡುವುದು ಸರಿಯಲ್ಲ. ಲಗಾನ್ ಟೀಂ ಗೆ ತಾಕತ್ತಿದ್ದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮೊಸ ಮಾಡಿಲ್ಲ ಎಂದಾದರೆ ತಮ್ಮ ತಂಡದೊಂದಿಗೆ ಧರ್ಮಸ್ಥಳಕ್ಕೆ ಬಂದು ಘಂಟೆಯೊಡೆಯಲಿ ಎಂದು ಜಿ ಎಂ ಬೆಂಬಲಿಗರ ಟೀಮ್ ಲಗಾನ್ ಟೀಮ್ ಗೆ ಆಹ್ವಾನ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ನಾವು ಗಂಟೆಯೊಡಯಲು ಸಿದ್ದರಿದ್ದೇವೆ, ನೀವು ಪ್ರಾಮಾಣಿಕರಿದ್ದರೆ ಧರ್ಮಸ್ಥಳಕ್ಕೆ ಬಂದು ಘಂಟೆ ಒಡೆಯರಿ ಎಂದರಲ್ಲದೇ, ಧರ್ಮಸ್ಥಳಕ್ಕೆ ಹೋಗಲು ನೀವೇ ದಿನಾಂಕ ನಿಗಧಿ ಮಾಡಿ ನಾವೆಲ್ಲಾ ಸಿದ್ದರಿದ್ದು, ಯಾರು ಪ್ರಾಮಾಣಿಕರು ಎಂಬುದು ಗೊತ್ತಾಗ ಬೇಕಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಯಶವಂತರಾವ್ ಜಾದವ್, ವೀರೇಶ್ ಹನಗವಾಡಿ ಸವಾಲ್ ಹಾಕಿದ್ದಾರೆ.
ಅಷ್ಟೇ ಅಲ್ಲದೆ ಇನ್ನು ರೇಣುಕಾಚಾರ್ಯ ಅವರಂತಾ ಪ್ರಚಾರ ಪ್ರಿಯರು ಯಾರೂ ಇಲ್ಲಾ ಅವರು ಟಿ ಆರ್ ಪಿ ರಾಜಕಾರಣಿ, ಅವಕಾಶವಾದಿ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದ ಹನಗವಾಡಿ ವೀರೇಶ್, ವಿಧಾನಸಭಾ ಚುನಾವಣಾ ಸೋಲಿನ ಬಳಿಕ ಕಾಂಗ್ರೆಸ್ ಮನೆ ಬಾಗಿಲನ್ನ ರೇಣುಕಾಚಾರ್ಯ ತಟ್ಟಿದ್ದು,ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದು ರೇಣುಕಾಚಾರ್ಯ ವಿರುದ್ದ ವಾಗ್ದಾಳಿ ನಡೆಸಿದರೆ
ಇದಕ್ಕೆ ಎಂಪಿ ರೇಣುಕಾಚಾರ್ಯ ಆಂಡ್ ಟೀಮ್ ಸೊಪ್ಪು ಹಾಕುತ್ತಿಲ್ಲ. ನಾವು ನಮ್ಮ ಪ್ರಾಮಾಣಿಕವಾದ ಕೆಲಸ ಮಾಡಿದ್ದೇವೆ .ನಮ್ಮ ಟೀಮ್ ಹಾಗೂ ಕಾರ್ಯಕರ್ತರ ಶ್ರಮದಿಂದ ಇಷ್ಟೊಂದು ಮತಗಳು ಬಿಜೆಪಿ ಗೆ ಬಂದಿದೆ. ಬಿಜೆಪಿ ಅಭ್ಯರ್ಥಿ ಹಾಗು ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಟೀಮ್ ನ ಸ್ವಯಂಕೃತ ಅಪರಾಧದಿಂದ ಬಿಜೆಪಿ ಸೋಲಿಗೆ ಕಾರಣವಾಗಿದೆ.. ಅಲ್ಲದೆ ಹಾಲಿ ಶಾಸಕರಿರುವ ಕ್ಷೇತ್ರ, ಅಭ್ಯರ್ಥಿ ಮಗನೇ ಉಸ್ತುವಾರಿ ವಹಿಸಿಕೊಂಡಿದ್ದ ಜಗಳೂರಿನಲ್ಲಿ ಏಕೆ ಕಾಂಗ್ರೆಸ್ ಗೆ ಅಧಿಕ ಲೀಡ್ ನೀಡಲಾಗಿದೆ ಇದಕ್ಕೆ ಉತ್ತರ ನೀಡಲಿ ಎಂದು ರೇಣುಕಾಚಾರ್ಯ ಅಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಕಮಲ ನಾಯಕನ ವಿರುದ್ಧ ಸ್ವಪಕ್ಷದವರಿಂದಲೇ ವಾಗ್ದಾಳಿ..!
ಇನ್ನು ಮುಂದುವರಿದ ರೇಣುಕಾಚಾರ್ಯ ಚನ್ನಗಿರಿ ಹಾಗು ಹೊನ್ನಾಳಿಯಿಂದ ದಾವಣಗೆರೆ ಗೆ ಪ್ರಮುಖ ಮುಖಂಡರನ್ನು ಕಳಿಸಿ ಪತ್ರಿಕಾಗೋಷ್ಠಿ ನಡೆಸಿ ಉತ್ತರ ನೀಡುವುದಕ್ಕೆ ಮುಂದಾಗಿದ್ದಾರೆ. ರೇಣುಕಾಚಾರ್ಯ ಬೆಂಬಲಿಗರು ಪ್ರತಿಕ್ರಿಯೆ ನೀಡಿ ಜಿಎಂಐಟಿ ಬೆಂಬಲಿಗರು ಬೇಕಾದ್ರೆ ಧರ್ಮಸ್ಥಳಕ್ಕೆ ಬರಲಿ ನಾವು ಒಂದು ಬಸ್ ಮಾಡಿಕೊಂಡು ಬಂದು ಗಂಟೆ ಹೊಡೆಯಲು ರೆಡಿ ಇದ್ದೇವೆ. ಹೊನ್ನಾಳಿ ಹಾಗು ಚನ್ನಗಿರಿ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇವೆ. ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೇಶ್ ಹನಗವಾಡಿ ಮೂರು ವರ್ಷ ಬಿಜೆಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಶಾಮನೂರು ಕುಟುಂಬದ ವಿರುದ್ಧ ಎಷ್ಟು ಸಾರಿ ಮಾತನಾಡಿದ್ದಾರೆ ಎಷ್ಟು ಬಾರಿ ಜಿಲ್ಲೆ ಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಸಿದ್ದೇಶ್ವರ್ ಟೀಮ್ ಹಾಗೂ ಲಗಾನ್ ಟೀಂ ನಡುವಿನ ಕಿತ್ತಾಟ ಸಧ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲಾ. ಈಗ ಸಿದ್ದೇಶ್ವರ್ ಟೀಂ, ಲಗಾನ್ ಟೀಂ ಅನ್ನು ಧರ್ಮಸ್ಥಳಕ್ಕೆ ಆಹ್ವಾನಿಸಿದ್ದು ಲಗಾನ್ ಟೀಂ ಅವರ ಸವಾಲು ಸ್ವೀಕರಿಸಿ ಧರ್ಮಸ್ಥಳಕ್ಕೆ ಹೋಗುತ್ತಾ ಎಂಬುದನ್ನು ಕಾದು ನೋಡ ಬೇಕಿದೆ.