ಗ್ಯಾರಂಟಿಯಿಂದ ಬಡವರ ಆರ್ಥಿಕ ಸ್ಥಿತಿ ಹೆಚ್ಚು: ಮಾಜಿ ಸಚಿವ ಎಚ್.ಎಂ. ರೇವಣ್ಣ

By Girish Goudar  |  First Published Jul 21, 2024, 6:56 PM IST

ಸಾಕಷ್ಟು ಜನರಿಗೆ ಗ್ಯಾರೆಂಟಿ ಬಗ್ಗೆ ಮಾಹಿತಿ ಇಲ್ಲ. ಗ್ಯಾರಂಟಿಯಿಂದ ಬಡವರ ಆರ್ಥಿಕ ಸ್ಥಿತಿ ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಯಿಂದ ಬಹಳಷ್ಟು ಜನರಿಗೆ ಉಪಯೋಗ ಆಗಿದೆ ಅಂತಾ ಸ್ವತಃ ವೀರೇಂದ್ರ ಹೆಗಡೆ ಅವರೇ ಹೇಳಿದ್ದಾರೆ. ಐದು ವರ್ಷಗಳ ಕಾಲ ಗ್ಯಾರಂಟಿ ನೀಡಲಾಗುತ್ತೆ: ಮಾಜಿ ಸಚಿವ ಎಚ್. ಎಂ ರೇವಣ್ಣ
 


ದಾವಣಗೆರೆ(ಜು.21): ಪ್ರವಾಹ ವಿಚಾರದಲ್ಲಿ ರಾಜಕೀಯ ಬೇಡ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರು, ಯಾರಿಗೂ ಕೂಡ ಪ್ರವಾಹ ಆಗುತ್ತೆ ಅಂತಾ ಊಹಿಸಲು ಸಾಧ್ಯವಿಲ್ಲ. ಪ್ರವಾಹ ಆಗಿರುವ ಹಿನ್ನಲೆಯಲ್ಲಿ ಪರಿಹಾರ ಕಾರ್ಯ ಕುರಿತು ಕ್ರಮ ಕೈಗೊಳ್ಳಲಾಗಿದೆ. ಮಂಗಳೂರುನಿಂದ ಗುಜರಾತ್ ವರೆಗೂ ಭೂಕುಸಿತ ಆಗಿದೆ. ಕೇಂದ್ರದಿಂದ ರಾಜ್ಯಕ್ಕೆ ಪರಿಹಾರ ಧನ ಬಿಡುಗಡೆ ಆಗಿರಲಿಲ್ಲ. ಇಡೀ ಭಾರತದಲ್ಲಿ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿ ಸುಪ್ರೀಂ ಕೋರ್ಟ್ ಮಧ್ಯಸ್ತಿಯಲ್ಲಿ ಪರಿಹಾರ ತಂದಿದ್ದೇವೆ. ಅತಿವೃಷ್ಟಿ ಆಗಿದೆ ಸಂಬಂಧಪಟ್ಟ ಸಚಿವರು ಸಹ ಭೇಟಿ ನೀಡಿದ್ದಾರೆ. ಈಗ ಅಧಿವೇಶನ ನಡೆಯುತ್ತಿದೆ ಪ್ರವಾಸ ಕೈಗೊಂಡ್ರೆ ಅಧಿವೇಶನದಲ್ಲಿ ಇಲ್ಲ ಅಂತ ಬೊಬ್ಬೆ ಹೊಡೆಯುತ್ತಾರೆ ಎಂದು ವಿಪಕ್ಷದವರ ವಿರುದ್ಧ ಹರಿಹಾಯ್ದಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್. ಎಂ ರೇವಣ್ಣ, ಸಾಕಷ್ಟು ಜನರಿಗೆ ಗ್ಯಾರೆಂಟಿ ಬಗ್ಗೆ ಮಾಹಿತಿ ಇಲ್ಲ. ಗ್ಯಾರಂಟಿಯಿಂದ ಬಡವರ ಆರ್ಥಿಕ ಸ್ಥಿತಿ ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಯಿಂದ ಬಹಳಷ್ಟು ಜನರಿಗೆ ಉಪಯೋಗ ಆಗಿದೆ ಅಂತಾ ಸ್ವತಃ ವೀರೇಂದ್ರ ಹೆಗಡೆ ಅವರೇ ಹೇಳಿದ್ದಾರೆ. ಐದು ವರ್ಷಗಳ ಕಾಲ ಗ್ಯಾರಂಟಿ ನೀಡಲಾಗುತ್ತೆ ಎಂದು ತಿಳಿಸಿದ್ದಾರೆ. 

Tap to resize

Latest Videos

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಕಮಲ ನಾಯಕನ ವಿರುದ್ಧ ಸ್ವಪಕ್ಷದವರಿಂದಲೇ ವಾಗ್ದಾಳಿ..!

ಸರ್ಕಾರ ಕೋಮಾದಲ್ಲಿದೆ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಚ್. ಎಂ ರೇವಣ್ಣ, ಇದು ವಿರೋಧ ಪಕ್ಷದವರು ಹೇಳುವ ಹೇಳಿಕೆಯಾಗಿದೆ. ಜನರು ಸರ್ಕಾರದ ಆಡಳಿತವನ್ನು ಗಮನಿಸಿ ಒಪ್ಪಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ವಿಸ್ತಾರವಾಗಿ ಉತ್ತರ ನೀಡಿದ್ದಾರೆ. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಸಿಕ್ಕಿತು ಅನ್ನೋ ತರ ಬಿಜೆಪಿಯವರಿಗೆ ಆಗಿದೆ. ವಿರೋಧ ಪಕ್ಷದ ಕೆಲಸ ಅವರು ಮಾಡಲಿ ಆಡಳಿತ ಪಕ್ಷವಾಗಿ ನಾವು ಜನಪರ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ. 

ವಾಲ್ಮೀಕಿ ನಿಗಮ ಹಗರಣ ಕೋರ್ಟ್ ನಲ್ಲಿದೆ ಅದ್ರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಈಗಾಗಲೇ ಎಸ್ ಐಟಿ ತನಿಖೆ ನಡೆಸುತ್ತಿದೆ ಆದ್ರೆ ಇಡಿ ಅವ್ರು ಓಡೋಡಿ ಬಂದು ಅರೆಸ್ಟ್ ಮಾಡಿದ್ದಾರೆ. ಬಿಜೆಪಿ ಅಧಿಕಾರ ಅವಧಿಯ 21 ಹಗರಣಗಳು ತನಿಖೆ ಹಂತದಲ್ಲಿವೆ. ಅವರಿಗೆ ಈಗಲೇ ರಿಸಲ್ಟ್ ಬೇಕಾಗಿದೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 

click me!