
ಬೆಂಗಳೂರು (ಜ.16): ಒಂದೆಡೆ ರಾಜ್ಯಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಬಂದಿದ್ದು ಎಲ್ಲೆಡೆ ಸುದ್ದಿಯಾಗಬೇಕು ಎಂದು ರಾಜ್ಯ ಕಾಂಗ್ರೆಸ್ ಬಯಸಿತ್ತು. ಆದರೆ, ಆಗಿದ್ದೇ ಬೇರೆ. ಅರಮನೆ ಮೈದಾನದಲ್ಲಿ ನಡೆದ 'ನಾ ನಾಯಕಿ' ಸಮಾವೇಶದಲ್ಲಿ ಪ್ರಿಯಾಂಕಾ ವಾದ್ರಾ ಬಂದು ಮಾತಾನಾಡಿದ್ದು ಸುದ್ದಿಯೇನೋ ಆಯಿತು. ಆದರೆ, ಇದರ ನಡುವೆ ಸಿದ್ಧರಾಮಯ್ಯ ಅವರ ಕೆಲವೇ ಸೆಕೆಂಡ್‌ನ ವಿಡಿಯೋ ಸಖತ್ ವೈರಲ್ ಆಗಿದೆ. ಇಡೀ ಸಮಾವೇಶದ ಕಾರ್ಯಕ್ರಮದ ವೇದಿಕೆಯಲ್ಲಿ ಪುರುಷ ನಾಯಕರಿಗೆ ಅವಕಾಶವಿರಲಿಲ್ಲ. ವೇದಿಕೆಯ ಎಲ್ಲಾ ಕಡೆ ಸಂಪೂರ್ಣ ಕಾಂಗ್ರೆಸ್ ನಾಯಕಿಯರೇ ತುಂಬಿ ಹೋಗಿದ್ದರು. ಸಮಾವೇಶದ ಆರಂಭದಲ್ಲಿ ಜ್ಯೋತಿ ಬೆಳಗಿಸುವ ಕಾರ್ಯಕ್ರಮಕ್ಕೆ ಪುರುಷರನ್ನೂ ವೇದಿಕೆಗೆ ಆಹ್ವಾನ ಮಾಡಲಾಗಿತ್ತು. ಜ್ಯೋತಿ ಬೆಳಗಿಸಿ ವೇದಿಕೆಯಿಂದ ಕೆಳಗಿಳಿಯುವ ಹೊತ್ತಿನಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಿರೂಪಕಿಯ ಹಿಂದಿನಿಂದ ಪಾಸ್ ಆಗುತ್ತಿದ್ದರು. ಈ ಹಂತದಲ್ಲಿ ಅವರು ನಿರೂಪಕಿಯನ್ನು ದಿಟ್ಟಿಸಿ ನೋಡಿದ ರೀತಿ ಟ್ರೋಲ್ ಪೇಜ್‌ಗಳಲ್ಲಿ ಹಾಗೂ ಸಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ನಿರ್ಗಮಿಸುವ ಹೊತ್ತಿನಲ್ಲಿ ಸಿದ್ಧರಾಮಯ್ಯ, 'ಯಾರಪ್ಪಾ ಇವಳು ನಿರೂಪಕಿ..' ಎನ್ನುವ ರೀತಿಯಲ್ಲಿ ಆಕೆಯನ್ನ ದಿಟ್ಟಿಸಿ ಮೇಲಿಂದ ಕೆಳಗಡೆ ದಿಟ್ಟಿಸಿ ನೋಡಿದರು. ಯಾಕಾಗಿ ಸಿದ್ಧರಾಮಯ್ಯ ಈ ರೀತಿ ಮಾಡಿದರು ಅನ್ನೋದು ಗೊತ್ತಿಲ್ಲ. ಇದನ್ನು ಅವರೇ ಸ್ಪಷ್ಟ ಮಾಡಿದರೆ ಗೊತ್ತಾಗಬಹುದು. ಕಾಂಗ್ರೆಸ್ ನಾಯಕಿಯೊಬ್ಬರ ಹೆಸರು ಹೇಳಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ನಿರೂಪಕಿ ಹೇಳುವ ಹೊತ್ತಿನಲ್ಲಿ ಸಿದ್ಧರಾಮಯ್ಯ ನಿರೂಪಕಿಯಿಂದ ಹಿಂಭಾಗದಿಂದ ಪಾಸ್ ಆಗುತ್ತಾರೆ. ಈ ವೇಳೆ ಆಕೆಯನ್ನೇ ದಿಟ್ಟಿಸಿ ನೋಡುತ್ತಾರೆ. ಕಾರ್ಯಕ್ರಮದ ಆರಂಭದಿಂದಲೂ ನಿರೂಪಕಿ ವಿವರಗಳನ್ನು ನೀಡುತ್ತಿದ್ದ ಕಾರಣ, ಅವರು ಯಾರೆಂದು ಸಿದ್ಧರಾಮಯ್ಯ ಅವರಿಗೂ ಗೊತ್ತಿತ್ತು. ಬಹುಶಃ ಅವರನ್ನು ಸರಿಯಾಗಿ ಕಾಣುವ ಉದ್ದೇಶದಿಂದ ಹಾಗೆ ನೋಡಿರಬಹುದು ಎನ್ನುವುದು ಸದ್ಯದ ಅಂದಾಜು.
ಕಾಂಗ್ರೆಸ್‌ನಿಂದ ನಾರಿ ಶಕ್ತಿ ಪ್ರದರ್ಶನ, ಪ್ರಿಯಾಂಕಾ ವಾದ್ರಾ ನೇತೃತ್ವದಲ್ಲಿ ಚುನಾವಣಾ ಕಹಳೆ
ಈ ನಡುವೆ ಸಿದ್ದರಾಮಯ್ಯ ಅವರದು 'ಮೆನ್ ವಿಲ್ ಬಿ ಮೆನ್' (ಪ್ರಸಿದ್ಧ ಮದ್ಯದ ಬ್ರ್ಯಾಂಡ್‌ನ ಜಾಹೀರಾತು) ಮೂಮೆಂಟ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಕೆಲವರು 'ದಿ ಬಾಯ್ಸ್' ಮೂಮೆಂಟ್ ಎಂದು ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ನಾ ನಾಯಕಿ ಕಾರ್ಯಕ್ರಮ: ಪ್ರಿಯಾಂಕಾ ಗಾಂಧಿ ಆಕರ್ಷಕ ಫೋಟೋ ವೈರಲ್
ಇನ್ನು ನಿರೂಪಕಿಗೂ ಕೂಡ ಸಿದ್ಧರಾಮಯ್ಯ ಅವರು ತಮ್ಮನ್ನು ನೋಡಿದ್ದು ಗೊತ್ತಾಗುತ್ತದೆ. ಅವರು ಏನಾದರೂ ತಪ್ಪಾಯಿತೇ ಎನ್ನುವಂತೆ ಅವರತ್ತ ನೋಡುತ್ತಾರೆ. ಸಿದ್ಧರಾಮಯ್ಯ ಮಾತ್ರ, 'ಏನಮ್ಮಾ ನೀನು..' ಅನ್ನೋ ಥರ ಸನ್ನೆ ಮಾಡಿ ಮುಂದೆ ಸಾಗುತ್ತಾರೆ. ಈ ವಿಡಿಯೋವಿಗ ಕೆಲ ದಿನಗಳ ಕಾಲ ಟ್ರೆಂಡಿಂಗ್‌ನಲ್ಲಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.