ಕರ್ನಾಟಕದಲ್ಲಿ ಪ್ರಧಾನಿ ಮೋದಿ ಮ್ಯಾಜಿಕ್ ನಡೆಯಲ್ಲ: ಸತೀಶ್ ಜಾರಕಿಹೊಳಿ

By Govindaraj S  |  First Published Jan 16, 2023, 11:33 PM IST

ಹಿಂದೂ ಪದದ ಬಗ್ಗೆ ವಿವಾದಿತ ಹೇಳಿಕೆ ನೀಡಿ ಬಳಿಕ ವಿಷಾದ ವ್ಯಕ್ತಪಡಿಸಿ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ವಾಪಸ್ ಪಡೆದಿದ್ದರು. ಇದಾದ ಬೆನ್ನಲ್ಲೇ ಯಮಕನಮರಡಿ ಕ್ಷೇತ್ರದಲ್ಲಿ ನಾ ಹಿಂದೂ, ಜಾಗೋ ಹಿಂದೂ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಸತೀಶ್ ಜಾರಕಿಹೊಳಿ ವಿರುದ್ಧ ಮುಗಿಬಿದ್ದಿದ್ದವು. 


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಜ.16): ಹಿಂದೂ ಪದದ ಬಗ್ಗೆ ವಿವಾದಿತ ಹೇಳಿಕೆ ನೀಡಿ ಬಳಿಕ ವಿಷಾದ ವ್ಯಕ್ತಪಡಿಸಿ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ವಾಪಸ್ ಪಡೆದಿದ್ದರು. ಇದಾದ ಬೆನ್ನಲ್ಲೇ ಯಮಕನಮರಡಿ ಕ್ಷೇತ್ರದಲ್ಲಿ ನಾ ಹಿಂದೂ, ಜಾಗೋ ಹಿಂದೂ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಸತೀಶ್ ಜಾರಕಿಹೊಳಿ ವಿರುದ್ಧ ಮುಗಿಬಿದ್ದಿದ್ದವು. ಚುನಾವಣೆ ಹೊಸ್ತಿಲಲ್ಲೇ ಹಿಂದುತ್ವ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದ ಬಿಜೆಪಿಗೆ ಸಮಾವೇಶದ ಮೂಲಕವೇ ಸತೀಶ್ ಜಾರಕಿಹೊಳಿ ಟಕ್ಕರ್ ನೀಡುತ್ತಿರೋದು ಗೊತ್ತಿರುವ ವಿಚಾರ. ಇತ್ತೀಚೆಗೆ ಯಮಕನಮರಡಿ ಕ್ಷೇತ್ರದ ಬಹುಜನ ಮತದಾರರ ಸಂಘದ ವತಿಯಿಂದ ಸ್ವರಾಜ್ಯ ಸಂಕಲ್ಪ ಸಮಾವೇಶ ನಡೆಸಲಾಗಿತ್ತು. 

Tap to resize

Latest Videos

ಸಮಾವೇಶದ ಮೂಲಕ ಸತೀಶ್ ಜಾರಕಿಹೊಳಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ. ಹಿಂದೂ ಪದದ ವಿವಾದಿತ ಹೇಳಿಕೆ ಬಗ್ಗೆ ಸತೀಶ್ ಜಾರಕಿಹೊಳಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, ' ಹೌದು ನಿಜ' ಎಂದಿದ್ದಾರೆ. 'ನಾವು ಏನು ಹೇಳಿದೀವಿ ಯಾರಿಗೆ ಇನ್ನೂ ಗೊತ್ತಿಲ್ಲ. ಟ್ರೇಲರ್ ರೀತಿ ಅದನ್ನೇ ಓಡಿಸಿ ಓಡಿಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡುತ್ತಾರೆ. ಅದನ್ನ ಕಂಟ್ರೋಲ್ ಮಾಡೋದು ನಮ್ಮ ಡ್ಯೂಟಿ. ಇದು ರಾಜಕೀಯದಲ್ಲಿ ನಡೆಯುವ ವ್ಯವಸ್ಥೆ. ನಾವು ಸುಮ್ಮನೇ ಕುಳಿತರೇ ಜನ ನಮ್ಮನ್ನ ತಪ್ಪು ತಿಳಿದುಕೊಳ್ಳುತ್ತಾರೆ' ಎಂದು ತಿಳಿಸಿದ್ದಾರೆ.

Shivamogga: ಜ.28ಕ್ಕೆ ಹೊಳ​ಲೂ​ರ​ಲ್ಲಿ ಸಚಿವ ಅ​ಶೋ​ಕ್‌ ಗ್ರಾಮ ವಾಸ್ತವ್ಯ

ಕರ್ನಾಟಕದಲ್ಲಿ ಮೋದಿ ಮ್ಯಾಜಿಕ್ ನಡೆಯಲ್ಲ: ಹುಬ್ಬಳ್ಳಿಗೆ ಪ್ರಧಾನಿ ಮೋದಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, 'ಚುನಾವಣೆ ಬರ್ತಿದೆ ಎಲ್ಲ ಕಡೆ ಓಡಾಡೋದು. ಜನರ ತಪ್ಪು ದಾರಿಗೆ ಎಳೆಯುವುದು. ಒಂದು ಕಡೆ ಒಂದು ಇನ್ನೊಂದು ಕಡೆ ಮತ್ತೊಂದು ಹೇಳೋದು. ಏನಾದರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬುದು ಅವರ ಉದ್ದೇಶ. ಆದ್ರೆ ಕರ್ನಾಟಕದಲ್ಲಿ ಪ್ರಬುದ್ಧ ಮತದಾರರಿದ್ದಾರೆ. ಅವರೇ ಏನೇ ಮಾಡಿದರೂ ಅವರ ಮ್ಯಾಜಿಕ್ ನಡೆಯಲ್ಲ' ಎಂದು ಹೇಳಿದ್ದಾರೆ.

'ಎಲ್ಲಾ ವಿಚಾರ ಮಾಡಿಯೇ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ': ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಪ್ರಜಾಧ್ವನಿ ಸಮಾವೇಶದಲ್ಲಿ ಕಾಂಗ್ರೆಸ್ ಘೋಷಿಸಿತ್ತು. ಹೀಗೆ ಮಾಡಿದ್ರೆ 9 ಸಾವಿರ ಕೋಟಿ ಸಾಲ ಮಾಡಬೇಕಾಗುತ್ತೆ ಎಂಬ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿಕೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, '200 ಯೂನಿಟ್ ಉಚಿತ ವಿದ್ಯುತ್ ನೀಡುವ ಬಗ್ಗೆ ಎಲ್ಲ ಚರ್ಚೆ ಮಾಡಿಯೇ ಮಾಡಿದ್ದು. ಅವರು ಹೇಳಿದ ಅಂಕಿ ಅಂಶ ಹೆಚ್ಚು ಕಡಿಮೆ ಸರಿ ಇದೆ. 9 ಸಾವಿರ ಕೋಟಿ ರೂಪಾಯಿ ನಾವು ಹೆಚ್ಚುವರಿಯಾಗಿ ಇಲಾಖೆಗೆ ಕೊಡಬೇಕು. 

ಹೇಗೆ ಅದನ್ನ ಕೊಡಬೇಕು ಅಂತಾ ವಿಚಾರ ಮಾಡಿಯೇ ಘೋಷಣೆ ಮಾಡಿದ್ದೇವೆ. ಸಿದ್ದರಾಮಯ್ಯ ಸರ್ಕಾರ ಬಂದಾಗ ಬಿಜೆಪಿ ಮಾಡಿದ ಸಾಲವನ್ನು ತೀರಿಸಿದ್ದೇವೆ. ಸಾಲ ಮನ್ನಾ ಮಾಡಿದ್ದೇವೆ. 1 ಕೋಟಿ 25 ಲಕ್ಷ ಜನರಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಅದಕ್ಕೆ ವರ್ಷಕ್ಕೆ 9 ಸಾವಿರ ಕೋಟಿ ಕೊಡೋದೇನು ದೊಡ್ಡದಲ್ಲ. ಸಾಲ ಮಾಡಲ್ಲ ಆದಾಯ ಹೆಚ್ಚಳ ಮಾಡ್ತೀವಿ. ಬಿಜೆಪಿ ಸರ್ಕಾರ ಬಂದ ಮೇಲೆ ಹೆಚ್ಚಿನ ಸಾಲ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಬರಬೇಕಾದ ಸಾವಿರಾರು ಕೋಟಿ ಹಣ ಬಂದಿಲ್ಲ. ಅದನ್ನ ಕೇಳಲು ಇವರ ಬಳಿ ಧೈರ್ಯವೂ ಇಲ್ಲ' ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಬಲವಂತಕ್ಕೆ ಕೋಲಾರದಿಂದ ಸ್ಪರ್ಧಿಸಲು ಬರುತ್ತಿದ್ದಾರೆ: ಸಿ.ಎಂ.ಇಬ್ರಾಹಿಂ

ಗಿಫ್ಟ್ ಪಾಲಿಟಿಕ್ಸ್: ಪಕ್ಷದ ವತಿಯಿಂದ ಕೊಡ್ತಿಲ್ಲ ಎಂದ ಸತೀಶ್: ಇನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, 'ಪಕ್ಷದ ವತಿಯಿಂದ ನಾವೇನೂ ಕೊಡ್ತಿಲ್ಲ. ಅದರಲ್ಲೇನು ಕೆಪಿಸಿಸಿ ಅಂತಾ ಬರೆದಿದ್ದಾರೆಯಾ? ಅವರು ವೈಯಕ್ತಿಕವಾಗಿ ಕೊಡುತ್ತಿದ್ದಾರೆ ಎಂದರು. ಅವರು ಸಹ ಪಕ್ಷದ ಸಿಂಬಾಲ್ ಮೇಲೆ ಡಬ್ಬಿಗಳು ಹಾರಾಡಿದ್ದಾವೆ. ಈಗ ಏನೂ ಮಾಡಲಿಕ್ಕೆ ಬರಲ್ಲ ಚುನಾವಣೆ ಘೋಷಣೆ ಆದ್ರೆ ನಿಯಂತ್ರಣ ಮಾಡಬಹುದು. ಅದು ಅವರ ವೈಯಕ್ತಿಕ ವಿಚಾರ. ಸಂಜಯ್ ಪಾಟೀಲ್ ಸಹ ಘೋಷಣೆ ಮಾಡಿದ್ದಾರೆ. ಬೇರೆ ಕ್ಷೇತ್ರದಲ್ಲಿಯೂ ಕೊಡುತ್ತಿದ್ದಾರೆ. ಅದು ಮತದಾರರ ಮೇಲೆ ಅವಲಂಬನೆ. ಏನೇ ಕೊಟ್ಟರೂ ಯಾರು ಒಳ್ಳೆಯವರಿದ್ದಾರೆ ಅವರಿಗೆ ಮತ ನೀಡ್ತಾರೆ. ನಾವು ನಮ್ಮ ಕ್ಷೇತ್ರದಲ್ಲಿ ಆ ರೀತಿ ಕೆಲಸ ಮಾಡಲ್ಲ' ಎಂದರು.

click me!