ಜನಸಾಮಾನ್ಯರ ಹಿತಕ್ಕಾಗಿ ಗ್ಯಾರಂಟಿ ಯೋಜನೆ ಜಾರಿ: ಸಚಿವ ಎಚ್.ಕೆ.ಪಾಟೀಲ್‌

By Kannadaprabha NewsFirst Published Mar 13, 2024, 5:43 AM IST
Highlights

ಜನಸಾಮಾನ್ಯರ ಹಿತಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದೆ. ಭ್ರಷ್ಟ ವ್ಯವಸ್ಥೆ ನಿವಾರಣೆ ಮಾಡಿ ನೇರವಾಗಿ ಯಾವುದೆ ತೊಂದರೆ ಇಲ್ಲದೆ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲಾಗುತ್ತಿದೆ.

ಡಂಬಳ (ಮಾ.13): ಜನಸಾಮಾನ್ಯರ ಹಿತಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದೆ. ಭ್ರಷ್ಟ ವ್ಯವಸ್ಥೆ ನಿವಾರಣೆ ಮಾಡಿ ನೇರವಾಗಿ ಯಾವುದೆ ತೊಂದರೆ ಇಲ್ಲದೆ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಗ್ಯಾರಂಟಿ ಯೋಜನೆ ಅನುಷ್ಠಾನ ಜತೆಗೆ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಡಾ.ಎಚ್.ಕೆ.ಪಾಟೀಲ್‌ ಹೇಳಿದರು. ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತವು ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯು ಶೇ. 93ರಷ್ಟು ಜನರಿಗೆ ತಲುಪಿದ್ದು. ಗೃಹಲಕ್ಷ್ಮಿ ಯೋಜನೆ ಶೇ.99ರಷ್ಟು ಫಲಾನುಭವಿಗೆ ಮುಟ್ಟಿಸಿದೆ. ಗೃಹಜ್ಯೋತಿ ಯೋಜನೆಯು ಶೇ. 100ರಷ್ಟಾಗಿದೆ. ಶಕ್ತಿ ಯೋಜನೆಯಿಂದ 2023 ಜೂನ್ 11ರಿಂದ ಈವರೆಗೆ 3 ಕೋಟಿ 78ಲಕ್ಷ ಮಹಿಳೆಯರು ಲಾಭ ಪಡೆದಿದ್ದಾರೆ. ಯುವನಿಧಿಗೆ ಹೆಸರು ನೋಂದಾಯಿಸಿಕೊಂಡವರಿಗೆ ಶೀಘ್ರ ತಲುಪಿಸಿದೆ. ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ಗದಗ ಜಿಲ್ಲೆ ಮುಂದಿದೆ. ಈ ಯೋಜನೆಗಳ ಮೂಲಕ ರಾಜ್ಯದಲ್ಲಿ 1ಕೋಟಿ 10ಲಕ್ಷ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಗ್ಯಾರಂಟಿ ಯೋಜನೆಗೋಸ್ಕರ ಈವರೆಗೂ ₹38ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಈ ಬಾರಿ ಬಜೆಟ್‍ನಲ್ಲಿ ₹ 58ಸಾವಿರ ಕೋಟಿ ಮೀಸಲಿರಿಸಲಾಗಿದೆ. ವಿರೋಧ ಪಕ್ಷದವರು ಸಹಿಸದೆ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಅದನ್ನು ತಾವು ಕೇಳಬಾರದು. ಜಾಲವಾಡಗಿ ಏತ ನೀರಾವರಿ ಯೋಜನೆಗೆ ₹197ಕೋಟಿ ಅನುದಾನ ನೀಡಿದೆ ಎಂದರು.

ಜೆಡಿಎಸ್ ಎಲ್ಲಿದೆ? ಬಿಜೆಪಿ ಸ್ಪೋಕ್ಸ್ ಪರ್ಸನ್ ಆದ ಕುಮಾರಸ್ವಾಮಿ: ಡಿ.ಕೆ.ಶಿವಕುಮಾರ್

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.,ಮಾತನಾಡಿ, ಗದಗ ಜಿಲ್ಲೆಯಲ್ಲಿ ಶೇ. 99ರಷ್ಟು ಅರ್ಹ ಫಲಾನುಭವಿಗಳು ಪಂಚ ಗ್ಯಾರಂಟಿ ಯೋಜನೆ ಪಡೆದುಕೊಂಡಿದ್ದಾರೆ. ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಸಮಾವೇಶ ಮಾಡಲಾಗುತ್ತಿದೆ ಎಂದರು. ಗ್ರಾಪಂ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಉಪಾಧ್ಯಕ್ಷೆ ಲಕ್ಷ್ಮವ್ವ ಕಾಶಭೋವಿ, ಸುಜಾತಾ ದೊಡ್ಡಮನಿ, ತಾರಾಮಣಿ ಜಿ.ಎಚ್, ಧನಂಜಯ ಎಂ, ಡಿ.ಡಿ. ಮೋರನಾಳ, ಮಿಥುನಗೌಡ ಜಿ. ಪಾಟೀಲ, ವೀರಯ್ಯ ಸೋಮನಕಟ್ಟಿಮಠ, ವಿ.ಆರ್.ಗುಡಿಸಾಗರ, ಗೋಣಿಬಸಪ್ಪ ಕೊರ್ಲಹಳ್ಳಿ, ಶೋಭಾ ಮೇಟಿ, ನಾಗರಾಜ ಹೊಂಬಳಗಟ್ಟಿ ಸೇರಿದಂತೆ ಸಾವಿರಾರು ಮಹಿಳೆಯರು ಇದ್ದರು. ಡಾ. ವೆಂಕಟೇಶ ನಾಯ್ಕ್ ಸ್ವಾಗತಿಸಿದರು. ರಮೇಶ ಕೊರ್ಲಹಳ್ಳಿ ನಿರೂಪಿಸಿದರು. ವಿಶ್ವನಾಥ ಹೊಸಮನಿ ವಂದಿಸಿದರು.

click me!