Karnataka Cabinet: ಸಚಿವ ಸ್ಥಾನ ನನಗೆ ಖಚಿತ ಎಂದ ಮುಖಂಡ : ಬಿಜೆಪಿ ಪಾಳೆಯದಲ್ಲಿ ಸಂಚಲನ

By Kannadaprabha NewsFirst Published Jan 4, 2022, 1:18 PM IST
Highlights
  • ಮಂತ್ರಿ ಸ್ಥಾನ ನನ್ನನ್ನು ಬಿಟ್ಟು, ಇನ್ಯಾರಿಗೆ ಸಚಿವ ಸ್ಥಾನ ಕೊಡುತ್ತಾರೆ ಹೇಳಿ
  •  ಬಿಜೆಪಿ ಪಾಳೆಯದಲ್ಲಿ ಸಂಚಲನ ಮೂಡಿಸಿದ ಶಾಸಕರ ಹೇಳಿಕೆ 

 ದಾವಣಗೆರೆ (ಜ.04) : ದಾವಣಗೆರೆ (Davanagere)  ಜಿಲ್ಲಾ ಮಂತ್ರಿ ಸ್ಥಾನ ನನ್ನನ್ನು ಬಿಟ್ಟು, ಇನ್ಯಾರಿಗೆ ಕೊಡುತ್ತಾರೆ ಹೇಳಿ ಎನ್ನುವ ಮೂಲಕ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್‌.ಎ.ರವೀಂದ್ರನಾಥ್‌ (SA Ravindranath) ಸಂಚಲನ ಮೂಡಿಸಿದ್ದಾರೆ.  ನಗರದಲ್ಲಿ ಸೋಮವಾರ 15ರಿಂದ 18 ವರ್ಷದ ವಯೋಮಾನದವರಿಗೆ ಕೋವಿಡ್‌ ಲಸಿಕೆ (Covid Vaccination) ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಂಪುಟ ವಿಸ್ತರಣೆಯಾದರೆ ದಾವಣಗೆರೆಗೆ (Davanagere) ಪ್ರಾತಿನಿಧ್ಯ ನೀಡುವುದಾದರೆ, ನನಗೇ ಮಂತ್ರಿ ಸ್ಥಾನವನ್ನು ನೀಡಬೇಕು. ನನ್ನ ಬಿಟ್ಟು ಬೇರೆ ಯಾರಿಗೂ ಸಚಿವ ಸ್ಥಾನ ನೀಡಲು ಬರುವುದಿಲ್ಲ ಎಂದು ಹೇಳಿದರು.

ನನಗೆ ಸಚಿವ ಸ್ಥಾನ ನೀಡಲಿ, ನೀಡದಿರಲಿ ಬಿಜೆಪಿ (BJP) ಕಾರ್ಯಕರ್ತನಾಗಿರುತ್ತೇನೆ. ಆಕಸ್ಮಾತ್‌ ಸಚಿವ ಸಂಪುಟ ವಿಸ್ತರಣೆಯಾದಲ್ಲಿ (Cabinet expansion), ದಾವಣಗೆರೆ ಜಿಲ್ಲೆಗೂ ಪ್ರಾತಿನಿಧ್ಯ ನೀಡುವು ದಾದರೆ ನನಗೇ ಸಚಿವ ಸ್ಥಾನ ನೀಡಬೇಕು. ಬೇರೆಯವರಿಗೆ ನೀಡುವುದಕ್ಕೆ ಬರುವುದಿಲ್ಲ ಎಂದು ಹೇಳಿದರು.

Latest Videos

ಅನಾರೋಗ್ಯದ ಕಾರಣದಿಂದ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುತ್ತಾರೆಂಬ ಚರ್ಚೆಯೇ ಇಲ್ಲಿ ಅಪ್ರಸ್ತುತ. ಬಸವರಾಜ ಬೊಮ್ಮಾಯಿ ಅವರೇ ಸಿಎಂ (Karnataka CM) ಆಗಿ ಮುಂದುವರಿಯಲಿದ್ದಾರೆ. ಬೊಮ್ಮಾಯಿ ಸಿಎಂ ಅವಧಿ ಪೂರೈಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ (BS Yediyurappa), ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಸಮಕಾಲೀನರಾದ, ಜನಸಂಘದಿಂದಲೂ ಗುರುತಿಸಿಕೊಂಡಿರುವ ಸಂಘ ಪರಿವಾರದ ಶಿಸ್ತಿನ ಸಿಪಾಯಿ ಅಂತಲೇ ಗುರುತಿಸಲ್ಪಟ್ಟ, ರೈತ ಹೋರಾಟಗಾರರೂ ಆದ ಉತ್ತರ ಶಾಸಕ ಎಸ್‌.ಎ.ರವೀಂದ್ರನಾಥ್‌ ತಾವು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂಬ ಮಾತುಗಳನ್ನು ಆಡುತ್ತಿದ್ದಂತೆಯೇ ಜಿಲ್ಲೆಯ ಬಿಜೆಪಿ ಪಾಳೆಯದಲ್ಲಿ ಸಂಚಲನ ಮೂಡಿದೆ. ಸದ್ಯಕ್ಕೆ ಸಂಪುಟ ವಿಸ್ತರಣೆಯಾದರೆ, ಜಿಲ್ಲೆಗೊಂದು ಸಚಿವ ಸ್ಥಾನವಂತೂ ನಿಶ್ಚಿತ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.

ಹೊಸ ಮುಖಗಳಿಗೆ ಅವಕಾಶ ನೀಡಲಿ :  ಬಿಜೆಪಿ ಸರ್ಕಾರದಲ್ಲಿ ಎರಡು- ಮೂರು ಬಾರಿ ಸಚಿವರಾಗಿದ್ದವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಲಿ, ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಿ ಎಂದು ಮಾಜಿ ಸಚಿವ ರೇಣುಕಾಚಾರ್ಯ(MP Renukacharya) ಹೇಳಿದ್ದಾರೆ. 

ಗುಜರಾತ್‌(Gujarat) ಮಾದರಿಯಲ್ಲಿ ಸಂಪುಟ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕಾರ್ಯಕಾರಿಣಿ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಕುರಿತು ನಾವು ಪಕ್ಷದ ವರಿಷ್ಠರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು. ಇದೇ ವೇಳೆ ನನಗೆ ಸಚಿವನಾಗುವ(Minister) ಆಸೆ ಇಲ್ಲ. ಅದರ ಬಗ್ಗೆ ಅಪೇಕ್ಷಯೂ ಇಲ್ಲ. ನನಗೆ ಶಾಸಕ ಸ್ಥಾನದಲ್ಲಿ ತೃಪ್ತಿ ಇದೆ. ಬಿಜೆಪಿಯನ್ನು(BJP) ಗೆಲ್ಲಿಸಿಕೊಂಡು ಬರುವ ಕೆಲಸವನ್ನು ಹಿರಿಯರು ಮಾಡಬೇಕು. ಅಧಿಕಾರ ಅನುಭವಿಸಿದ ನಾಯಕರು ಸಚಿವ ಸ್ಥಾನ ತ್ಯಾಗ ಮಾಡಲಿ ಎಂದು ತಿಳಿಸಿದರು. ನನಗೇ ಸಚಿವ ಸ್ಥಾನ ಕೊಡಬೇಕೆಂದಿಲ್ಲ. ಯಾರಿಗೆ ಬೇಕಾದರೂ ಸಚಿವ ಸ್ಥಾನ ನೀಡಲಿ. ಹೊಸ ಮುಖಗಳಿಗೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು ಎಂದು ಅವರು ಹೇಳಿದರು.

ರಾಜೀನಾಮೆ ಕೇಳಿದ್ರೆ ಕೊಡಲು ಸಿದ್ಧ; ಈಶ್ವರಪ್ಪ

ಪಕ್ಷವು ರಾಜೀನಾಮೆ ಕೇಳಿದರೆ ಧಾರಾಳವಾಗಿ ಬಿಟ್ಟುಕೊಡಲು ತಯಾರಾಗಿದ್ದೇವೆ. ನನ್ನನ್ನು ತೆಗೆಯೋದಿದ್ದರೆ ನಾನು ಸಹ ತಯಾರಿದ್ದೇನೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ತಿಳಿಸಿದ್ದಾರೆ. 
ಹಿರಿಯರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನದಿಂದ ಕೆಳಗಿಳಿದು ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ. ಅಧಿಕಾರ ಎಷ್ಟರ ಮಟ್ಟಿಗೆ ಒಳ್ಳೇದು ಕೆಟ್ಟದು ಎಂಬುದು ನಮಗೆ ಗೊತ್ತಿದೆ ಎಂದರು. ಇನ್ನು ಶಿವಮೊಗ್ಗದಲ್ಲಿ(Shivamogga) ಮುಂದಿನ ಹಿಂದುಳಿದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅಲ್ಲಿ ನಾವು ಮುಂದಿನ ಚುನಾವಣೆಗಳ(Election) ಬಗ್ಗೆ ಸಂಘಟನೆ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ, ಕಾರ್ಯಕಾರಣಿ ಸಭೆಯಲ್ಲಿ ಮೊದಲ ವಿಕೆಟ್ ಪತನ

ಬಿಜೆಪಿ ಕಾರ್ಯಕಾರಿಣಿಯ (BJP Executive Meeting) 2ನೇ ದಿನ ಸಭೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಹೌದು...ಕಾರ್ಯಕಾರಿಣಿಯಲ್ಲಿ ಬಿಸಿಯೇರಿದ ರಾಜಕೀಯ ಚರ್ಚೆಗಳೂ ನಡುವೆ ಅರವಿಂದ್ ಬೆಲ್ಲದ್ (Aravind Bellad) ರೂಪದಲ್ಲಿ ಮೊದಲ ವಿಕೆಟ್ ಬಿದ್ದಿದೆ.  ಶಾಸಕ ಅರವಿಂದ್ ಬೆಲ್ಲದ್ (Arvind Bellad) ಹುಬ್ಬಳ್ಳಿ - ಧಾರವಾಡ(Hubballi Dharwad) ಮಹಾನಗರ ಘಟಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಕಾರ್ಯಕಾರಿಣಿಯಲ್ಲಿಯೇ ಅರವಿಂದ್ ಬೆಲ್ಲದ್ ರಾಜೀನಾಮೆ ಘೋಷಿಸಿದ್ದು, ಮಹಾನಗರ ಘಟಕ ಅಧ್ಯಕ್ಷ ಸ್ಥಾನದಿಂದ ವಿಮುಕ್ತಿ ಮಾಡಿ ಎಂದು ಶಾಸಕ ಅರವಿಂದ ಬೆಲ್ಲದ್ ಮನವಿ ಮಾಡಿಕೊಂಡಿದ್ದಾರೆ.

click me!