Karnataka Politics : ಆಹ್ವಾನ ಸಿಕ್ರೆ ಕಾಂಗ್ರೆಸ್‌ ಜೊತೆ ಸೇರುವೆ : ಜೆಡಿಎಸ್‌ ಶಾಸಕ

Kannadaprabha News   | Asianet News
Published : Jan 04, 2022, 07:52 AM IST
Karnataka Politics :  ಆಹ್ವಾನ ಸಿಕ್ರೆ  ಕಾಂಗ್ರೆಸ್‌ ಜೊತೆ ಸೇರುವೆ : ಜೆಡಿಎಸ್‌ ಶಾಸಕ

ಸಾರಾಂಶ

ಕಾಂಗ್ರೆಸ್‌ನಿಂದ ಆಹ್ವಾನ ಬಂದರೆ ನಾನೂ ಮೇಕೆದಾಟು  ನಾನು ಭಾಗವಹಿಸುತ್ತೇನೆ ಕಾಂಗ್ರೆಸ್‌ ಸೇರಲು ಸಿದ್ಧರಾಗಿರುವ ಜೆಡಿಎಸ್‌ ಶಾಸಕ

ಕೋಲಾರ (ಡಿ.04): ಮೇಕೆದಾಟು (Mekedatu)  ಯೋಜನೆ ಕಾಂಗ್ರೆಸ್‌ (Congress)  ಅವಧಿಯಲ್ಲೇ ಆರಂಭವಾಗಿದೆ. ಕಾಂಗ್ರೆಸ್‌ನಿಂದ ಆಹ್ವಾನ ಬಂದರೆ ನಾನೂ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸುತ್ತೇನೆ ಎಂದು ಕಾಂಗ್ರೆಸ್‌ ಸೇರಲು ಸಿದ್ಧರಾಗಿರುವ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸ ಗೌಡ (Shrinivas Gowda) ಹೇಳಿದರು. ಡಿ.ಕೆ ಶಿವಕುಮಾರ್‌ (DK Shivakumar) ಮೇಕೆದಾಟು ಯೋಜನೆ ಹೋರಾಟ ಕೈಗೆತ್ತಿಕೊಳ್ಳುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಮೇಕೆದಾಟು ಮೂಲಕ ಕೋಲಾರ (Kolar) ಜಿಲ್ಲೆಗೂ ನೀರು ಹರಿಸಲು ಒತ್ತಾಯ ಮಾಡುತ್ತೇವೆ ಎಂದರು.

ಕಾಂಗ್ರೆಸ್‌-ಜೆಡಿಎಸ್‌  (Congress) ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ನವರು ಎಚ್‌.ಡಿ.ಕುಮಾರಸ್ವಾಮಿಯವರಿಗೆ (HD Kumaraswamy)  ಅಧಿಕಾರ ನಡೆಸಲು ಸಂಪೂರ್ಣ ಅವಕಾಶ ಕೊಟ್ಟಿದ್ದರು. ಆದರೆ ಕುಣಿಯಲಾರದವರು ನೆಲಡೊಂಕು ಎಂದು ಸಬೂಬು ಹೇಳುವ ರೀತಿ ಅಧಿಕಾರ ನಡೆಸಲಾಗದೆ ಇದೀಗ ಅವರು ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀನಿವಾಸ ಗೌಡ ಹರಿಹಾಯ್ದರು.

ಮುಂದಿನ ವಿಧಾನಸಭಾ ಚುನಾವಣೆಗಾಗಿ (Assembly Election  ಖುದ್ದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೇ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ, ದೇವೇಗೌಡರಿಗೆ ಅವರ ಮಕ್ಕಳ ಮೇಲೆ ನಂಬಿಕೆ ಕಳೆದುಹೋದಂತಿದೆ, ಪರಿಷತ್‌ ಚುನಾವಣೆಯಲ್ಲಿ 2 ಸ್ಥಾನ ಗೆದ್ದ ರೀತಿಯಲ್ಲೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ (JDS) ಒಂದರಿಂದ ಮೂರು ಸ್ಥಾನ ಗೆಲ್ಲಲಿದೆ ಎಂದು ವ್ಯಂಗ್ಯವಾಡಿದ ಶ್ರೀನಿವಾಸ ಗೌಡ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅವಕಾಶ ಕೊಟ್ಟರೆ ಕಣಕ್ಕಿಳಿಯುತ್ತೇನೆ. ಇಲ್ಲವಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.

ಗುಲಾಮನಂತೆ ಇರಲು ಆಗಲಿಲ್ಲ :  

ವಿಧಾನ ಪರಿಷತ್‌  ಸದಸ್ಯ (MLC)  ಇಂಚರ ಗೋವಿಂದ ರಾಜು ಋುಣದಲ್ಲಿ ನಾನು ಇಲ್ಲ. ಬದಲಿಗೆ ಅವರೇ ನನ್ನ ಋುಣದಲ್ಲಿದ್ದು, ಅದನ್ನು ಅವರು ಮರೆತಿದ್ದಾರೆ ಎಂದು ಶಾಸಕ ಕೆ.ಶ್ರೀನಿವಾಸಗೌಡ (MLC K Shrinivas Gowda) ತಿರುಗೇಟು ನೀಡಿದರು.   ಇಫ್ಕೋ ಟೋಕಿಯೋದಿಂದ (Tokyo) ಉನ್ನತ ಶಿಕ್ಷಣ ಪಡೆಯುತ್ತಿರುವ ನಾಲ್ಕು ವಿದ್ಯಾರ್ಥಿಗಳಿಗೆ 2,84,400 ರು.ಗಳ ಚೆಕ್‌ ವಿತರಿಸಿ ಮಾತನಾಡಿದ ಅವರು, ಶಾಸಕ ಶ್ರೀನಿವಾಸಗೌಡ ಸತ್ತ ಹಾವು ಇದ್ದಂದೆ ಎಂದು ಗೋವಿಂದರಾಜು ಟೀಕಿಸಿದ್ದಕ್ಕೆ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

ಗೋವಿಂದರಾಜು ಸಸ್ಪೆಂಡ್‌ ಆಗಿದ್ದರು

ಗೋವಿಂದರಾಜು ಶಿರಸಿಯ (sirsi) ಕೆಎಸ್‌ಆರ್‌ಟಿಸಿ (KSRTC)  ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಮರಗಳ ಸಾಗಣೆಯ ಆರೋಪದಲ್ಲಿ ಅಮಾನತು ಗೊಂಡಿದ್ದರು. ಆಗ ನಾನು ಶಾಸಕನಾಗಿದ್ದೆ. ಗೋವಿಂದರಾಜು ರವರ ಅಣ್ಣ ಬಲ ರಾಮಪ್ಪ ನನ್ನ ಬಳಿ ಬಂದಾಗ ಆಗಿನ ಸಚಿವ ಪಿಜಿಆರ್‌ ಸಿಂಧ್ಯ ಅವರ ಬಳಿ ಕರೆದುಕೊಂಡು ಹೋಗಿ ಅರೋಪದಿಂದ ಮುಕ್ತಗೊಳಿಸಿದ್ದೆ. ಇದು ಅವರಿಗೆ ಜ್ಞಾಪಕವಿಲ್ಲವೇ, ಗೋವಿಂದರಾಜು ರಾಜಕಾರಣ (Politics)  ಪ್ರವೇಶಿಸಲು ನಾನೇ ಕಾರಣ. ಅದೆಲ್ಲವನ್ನೂ ಅವರು ಮರೆತಿದ್ದಾರೆ ಎಂದರು.

ನಾನು ಕಾಂಗ್ರೆಸ್‌ನಲ್ಲಿದ್ದಾಗ (Congress) ಸಚಿವನಾಗಿದ್ದೆ (Minister), ಜನತಾದಳವು (JDS) ಕೇವಲ ಅಪ್ಪ-ಮಕ್ಕಳ ಸ್ವತ್ತು ಅಗಿದೆ. ಗುಲಾಮನಂತೆ ಉಸಿರು ಗಟ್ಟಿನ ವಾತಾವರಣದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಕ್ಷವನ್ನು ಬಿಟ್ಟು ನನಗೆ ಗೌರವ ನೀಡುವಂತ ಕಾಂಗ್ರೆಸ್‌ಗೆ (Congress) ಮರಳಿದ್ದೇನೆ. ಗೋವಿಂದರಾಜು ಜೆಡಿಎಸ್‌ನಲ್ಲಿ (JDS) ಗುರುತಿಸಿಕೊಂಡು ಅಪ್ಪ-ಮಕ್ಕಳನ್ನು ಒಲೈಸಿ ಕೊಂಡು ಸ್ಥಾನಮಾನ ಪಡೆದಿರುವ ಹುಮ್ಮಸ್ಸಿನಲ್ಲಿ ಮೆಚ್ಚುಗೆ ಗಿಟ್ಟಿಸಲು ನನ್ನ ಬಗ್ಗೆ ಮಾತನಾಡಿದ್ದಾರೆ. ಅವೆಲ್ಲವೂ ಇರಲಿ, ಹಂತ-ಹಂತವಾಗಿ ಅಪ್ಪ-ಮಕ್ಕಳ ಬಗ್ಗೆ ಅವರಿಗೇ ಅರ್ಥವಾಗುತ್ತದೆ ಎಂದು ಕಿಚಾಯಿಸಿದರು.

ಯರಗೋಳ್‌ ನನ್ನ ಕನಸಿನ ಕೂಸು

ಯರಗೋಳ್‌ ಯೋಜನೆ ಕಾಮಗಾರಿಯಲ್ಲಿ ಪೈಪ್‌ ಲೈನ್‌ (Pipe Line)  ಜೋಡಣೆ ಕಾಮಗಾರಿಗೆ ಇನ್ನು ಸುಮಾರು 3 - 4 ತಿಂಗಳು ಬೇಕಾಗುತ್ತದೆ. ಡ್ಯಾಮ್‌ನಲ್ಲಿ (Dam) ನೀರು ಭರ್ತಿಯಾಗಿದೆ. ಯರಗೋಳ್‌ ನನ್ನ ಕನಸಿನ ಕೂಸು ಆಗಿದ್ದು ಬಂಗಾರಪೇಟೆ, ಕೋಲಾರ (Kolar), ಮಾಲೂರಿಗೆ ಕುಡಿಯುವ ನೀರು (Drinking Water) ಪೂರೈಕೆ ಆಗುವುದನ್ನು ಕಣ್ಣಾರೆ ನೋಡಬೇಕೆನ್ನುವುದು ನನ್ನ ಆಸೆ ಎಂದರು.

ಇಪ್ಕೋ ಸೇವಾ ಸಂಸ್ಥೆಯಿಂದ ಕಳೆದ ಸುಮಾರು 25 ವರ್ಷಗಳಿಂದ ಅರೋಗ್ಯ ಮತ್ತು ಶಿಕ್ಷಣಕ್ಕೆ (education) ನೂರಾರು ಕೋಟಿ ರೂ ನೆರವು ನೀಡುತ್ತಾ ಬಂದಿರುವೆ. ನಾನು ಅಧಿಕಾರದಲ್ಲಿ ಇರುವಷ್ಟುಕಾಲವು ಮುಂದುವರೆಸುತ್ತೇನೆ ಇದರಿಂದ ಸಾವಿರಾರು ಮಂದಿಗೆ ನೆರವು ಸಿಕ್ಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಟಿಎಪಿಸಿಎಂ.ಎಸ್‌ ಅಧ್ಯಕ್ಷ ನಾಗನಾಳ ಸೋಮಣ್ಣ, ಮುಖಂಡರಾದ ಖಾಜಿಕಲ್ಲಹಳ್ಳಿ ಮುನಿರಾಜು, ಟಮಕ ವೆಂಕಟೇಶ್‌, ಅಂಚೆ ಅಶ್ವಥ್‌, ಕಲ್ಲಂಡೂರು ಕೃಷ್ಣಪ್ಪ, ಕೃಷ್ಣೆಗೌಡ, ಮಾಜಿ ನಗರಸಭೆ ಸದಸ್ಯ ಚನ್ನವೀರಯ್ಯ ಮುಂತಾದವರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್