Karnataka politics : ಕರ್ನಾಟಕ ಸಿಎಂ ಬದಲಾವಣೆ ಆಗುತ್ತಾ..? : ವಿಜಯೇಂದ್ರ ಸ್ಪಷ್ಟನೆ

By Kannadaprabha News  |  First Published Jan 4, 2022, 8:06 AM IST
  • ಕರ್ನಾಟಕ ಸಿಎಂ ಬದಲಾವಣೆ ಆಗುತ್ತಾ..? : ವಿಜಯೇಂದ್ರ ಸ್ಪಷ್ಟನೆ
  •  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಕುರಿತಂತೆ ಕಾಂಗ್ರೆಸ್‌ನವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ 

 ಸಿಂಧನೂರು (ರಾಯಚೂರು): (ಜ.04) :  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai)  ಬದಲಾವಣೆ ಕುರಿತಂತೆ ಕಾಂಗ್ರೆಸ್‌ನವರು (congress) ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ (BJP) ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (Vijayendra)  ಆರೋಪಿಸಿದರು.  ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amith Shah)  ಹಾಗೂ ಬಿಜೆಪಿ (BJP) ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ (Arun Singh) ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆ.ಎಸ್‌.ಈಶ್ವರಪ್ಪ ಪ್ರಸ್ತುತ ಸಿಎಂ ಬದಲಾವಣೆ ಕುರಿತು ಹೇಳಿಲ್ಲ. ವಿನಾ ಕಾರಣ ಸುಳ್ಳು ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದರು.

ಮಸ್ಕಿ ಉಪ ಚುನಾವಣೆ (By Election) ಸಂದರ್ಭದಲ್ಲಿ ಬಹಳಷ್ಟು ನಿರೀಕ್ಷೆ ಇತ್ತು. ಆದರೆ ಮತದಾರರ ನಿರೀಕ್ಷೆ ಊಹಿಸಲು ಆಗಲಿಲ್ಲ. ಈಚೆಗೆ ನಡೆದ ವಿಧಾನ ಪರಿಷತ್‌ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದೆ. ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ವಿಧಾನಸಭೆ ಚುನಾವಣೆ (Election) ಎದುರಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದರು.

Tap to resize

Latest Videos

ಮೇಕೆದಾಟು ಯೋಜನೆ ಆರಂಭಿಸಬೇಕೆಂದು ಮೇಕೆದಾಟಿನಿಂದ ಬೆಂಗಳೂರುವರೆಗೆ (Bengaluru) ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ (DK Shivakumar) ಪಾದಯಾತ್ರೆ ವಿಚಾರ ರಾಜಕೀಯ (Politics) ಪ್ರೇರಿತವಾದದ್ದು. ಮೇಕೆದಾಟು ಯೋಜನೆ ಕುರಿತು ಸುಪ್ರೀಂಕೋರ್ಟ್‌ನಲ್ಲಿ (Supreme Court) ಪ್ರಕರಣ ನಡೆಯುತ್ತಿದ್ದು, ಅದರ ತೀರ್ಪು ಹೊರಬಂದ ನಂತರ ರಾಜ್ಯ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು. ಈ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

click me!