* ಎಲ್ಲಾ ವದಂತಿಗಳಿಗೆ ಬಿಜೆಪಿ ಶಾಸಕ ತೆರೆ ಎಳೆದ ಬಿಜೆಪಿ ಶಾಸಕ
* ಬಿಜೆಪಿ ಬಿಡಲ್ಲ..ಕಾಂಗ್ರೆಸ್ ಸೇರಲ್ಲ ಎಂದ ಎ.ಎಸ್.ಪಾಟೀಲ ನಡಹಳ್ಳಿ
* ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸ್ಪಷ್ಟನೆ
ವಿಜಯಪುರ, (ಜು. 25): ನಾನು ಕಾಂಗ್ರೆಸ್ ಸೇರುವುದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಬಿಜೆಪಿಯಲ್ಲೇ ಇದ್ದು ಪಕ್ಷದ ಬಲವರ್ಧನೆಗೆ ತೊಡಗಿಸಿಕೊಳ್ಳುತ್ತೇನೆ ಎಂದು ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸ್ಪಷ್ಟಪಡಿಸಿದರು.
ಇಂದು (ಜು.25) ಇಲ್ಲಿನ ಶ್ರೀ ರಾಘವೇಂದ್ರ ಮಂಗಲ ನಡೆದ ಮಂಡಲ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಹಿಂದೆ ಕಾಂಗ್ರೆಸ್ ನಲ್ಲಿದ್ದೆ. ಅಲ್ಲಿನ ವಾತಾವರಣ ಕಂಡು ಆ ಪಕ್ಷ ತೊರೆದು ಬಿಜೆಪಿಗೆ ಬಂದಿದ್ದೇನೆ. ಇಲ್ಲಿ ಅಭಿವೃದ್ಧಿಗೆ ಪೂರಕವಾದ ಉತ್ತಮ ವಾತಾವರಣ ಇದೆ. ಈ ಮತಕ್ಷೇತ್ರದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಹಿರಿಯರ ಬಗ್ಗೆ ಅಪಾರ ಅಭಿಮಾನ ಇದೆ. ಅವರು ಹೇಳುವ ಕೆಲಸವನ್ನು ಚಾಚು ತಪ್ಪದೆ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಬರುವವರಿಗೆ ಸ್ವಾಗತ : ಡಿಕೆಶಿಯಿಂದ ಆಹ್ವಾನ
ಮೊದಲ ಬಾರಿಗೆ ಇಲ್ಲಿ ಬಿಜೆಪಿಗೆ ಶಾಸಕ ಸ್ಥಾನ ದೊರೆತಿದೆ. ನಾನು ಮಾಡುತ್ತಿರುವ ಅಭಿವೃದ್ಧಿ ಕೆಲಸಕ್ಕೆ ಜನತೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷ ಕೈಗೊಳ್ಳುವ ಎಲ್ಲ ಕಾರ್ಯಗಳಲ್ಲಿ ಮಂಡಲದ ಅಧ್ಯಕ್ಷರಿಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂದರು.
ಶಾಸಕರು ಕಾಂಗ್ರೆಸ್ ಸೇರುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದೀಗ ಬಿಜೆಪಿ ಮುಖಂಡರು, ಕಾರ್ಯಕರ್ತರ ಎದುರೇ ಶಾಸಕರು ಸ್ಪಷ್ಟನೆ ಕೊಟ್ಟಿದ್ದು, ಹೆಚ್ಚು ಮಹತ್ವ ಪಡೆದುಕೊಂಡಿದೆ.