ಬಿಜೆಪಿಗೆ ಅಧಿಕಾರ ನೀಡಿದರೆ ಆರೆಸ್ಸೆಸ್‌ ಸಂವಿಧಾನ ಜಾರಿಗೆ ತರ್ತಾರೆ: ಮುಖ್ಯಮಂತ್ರಿ ಚಂದ್ರು

By Kannadaprabha NewsFirst Published Mar 18, 2024, 7:23 AM IST
Highlights

ಬಿಜೆಪಿಗರು ಸರ್ವಾಧಿಕಾರಿ ಧೋರಣೆ ಹೊಂದಿದ್ದು, ಸ್ವಾಯತ್ತತೆ ಹತ್ತಿಕ್ಕುವ ಪಕ್ಷವಾಗಿದೆ. ಈ ಬಾರಿ ಬಿಜೆಪಿಗೆ ಅಧಿಕಾರ ನೀಡಿದರೆ ಅಂಬೇಡ್ಕರ್ ಸಂವಿಧಾನದ ಬದಲು ಆರ್‌ಎಸ್‌ಎಸ್ ಸಂವಿಧಾನ ಜಾರಿಗೆ ತರುತ್ತಾರೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆರೋಪಿಸಿದರು. 

ಕಾರವಾರ (ಮಾ.18): ಬಿಜೆಪಿಗರು ಸರ್ವಾಧಿಕಾರಿ ಧೋರಣೆ ಹೊಂದಿದ್ದು, ಸ್ವಾಯತ್ತತೆ ಹತ್ತಿಕ್ಕುವ ಪಕ್ಷವಾಗಿದೆ. ಈ ಬಾರಿ ಬಿಜೆಪಿಗೆ ಅಧಿಕಾರ ನೀಡಿದರೆ ಅಂಬೇಡ್ಕರ್ ಸಂವಿಧಾನದ ಬದಲು ಆರ್‌ಎಸ್‌ಎಸ್ ಸಂವಿಧಾನ ಜಾರಿಗೆ ತರುತ್ತಾರೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಬದಲಿಸುವ ಹೇಳಿಕೆಯನ್ನು ಉತ್ತರ ಕನ್ನಡದ ಸಂಸದ ಅನಂತಕುಮಾರ್‌ ಹೆಗಡೆ ನೀಡಿದರೂ ಪಕ್ಷದಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೆ ಟಿಕೆಟ್ ನೀಡಿದರೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಉದ್ದೇಶವೂ ಡಾ.ಅಂಬೇಡ್ಕರ್ ಅವರ ಸಂವಿಧಾನ ಬದಲಿಸಿ ಆರೆಸ್ಸೆಸ್‌ ಸಂವಿಧಾನ ಜಾರಿಗೆ ತರುವುದಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಕರ್ನಾಟಕದಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿಲ್ಲ. ಎಲ್ಲ ಅಭ್ಯರ್ಥಿಗಳನ್ನು ಮೈತ್ರಿ ಪಕ್ಷಗಳು ನಿಲ್ಲಿಸಿವೆ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ತತ್ವ ಸಿದ್ಧಾಂತ ಬೇರೆ ಬೇರೆಯಾಗಿದ್ದರೂ ದೇಶಕ್ಕಾಗಿ ಅವರೊಂದಿಗೆ ಕೈಜೋಡಿಸಬೇಕಿದೆ. ಬಿಜೆಪಿ ಸೋಲಿಸಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ತೆರಳಬೇಕೇ ಬೇಡವೇ ಎನ್ನುವ ಬಗ್ಗೆ ದೆಹಲಿಮಟ್ಟದಲ್ಲಿ ಅಂತಿಮ ತೀರ್ಮಾನವಾಗಿಲ್ಲ. ಈ ಬಗ್ಗೆ ವಾರದಲ್ಲಿ ತೀರ್ಮಾನ ಆಗುತ್ತದೆ. ಒಂದು ವೇಳೆ ಪ್ರಚಾರಕ್ಕೆ ಹೋಗಬೇಕಾದರೆ ನಮ್ಮ ಪಕ್ಷದ ಬಾವುಟ, ಚಿಹ್ನೆಯೊಂದಿಗೆ ತೆರಳುತ್ತೇವೆ ಎಂದರು.

ವರಿಷ್ಠರು ಸೂಚನೆ ನೀಡಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ಜಗದೀಶ್ ಶೆಟ್ಟರ್‌

ನಾರಾ ಪ್ರತಾಪ್ ರೆಡ್ಡಿಗೆ ಆಪ್‌ ಬೆಂಬಲ: ವಿಧಾನಪರಿಷತ್‌ನ ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ್ ರೆಡ್ಡಿ ಅವರಿಗೆ ಆಮ್‌ ಆದ್ಮಿ ಪಾರ್ಟಿ ಬೆಂಬಲ ನೀಡಲು ನಿರ್ಧರಿಸಿದೆ ಎಂದು ಆಪ್‌ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸದಿರಲು ನಿರ್ಧರಿಸಲಾಗಿದ್ದು, ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಈ ಚುನಾವಣೆಯಲ್ಲಿ‌ ನಮ್ಮ ಅಭ್ಯರ್ಥಿ ಇಲ್ಲ. ಹಾಗಾಗಿ ಪಕ್ಷೇತರ ಅಭ್ಯರ್ಥಿ ಎನ್‌. ಪ್ರತಾಪ್ ರೆಡ್ಡಿ ಅವರಿಗೆ ಬೆಂಬಲ‌‌ ನೀಡುತ್ತಿದ್ದೇವೆ. ಅವರು ಕಳೆದ ಚುನಾವಣೆಯಲ್ಲಿ ಕುಲಗೆಟ್ಟ ಮತಗಳ ಕಾರಣದಿಂದ ಅಲ್ಪ‌ಮತಗಳ ಅಂತರದಿಂದ ಸೋತಿದ್ದರು. 

ಈ ಬಾರಿ 7 ಜಿಲ್ಲೆಯಲ್ಲಿ ಬೆಂಬಲ ಇದೆ. ಅವರ ಪರವಾಗಿ ಈಗಾಗಲೇ ಮೂರು ಜಿಲ್ಲೆಗಳಲ್ಲಿ ಮತಯಾಚನೆ ಮಾಡಿದ್ದು, ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತದಾರರನ್ನು ಭೇಟಿ‌ ಆಗಿದ್ದೇವೆ. ಗೆಲ್ಲುವ ವಿಶ್ವಾಸವಿದೆ ಎಂದರು. ಈಶಾನ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ನಾರಾ ಪ್ರತಾಪ್ ರೆಡ್ಡಿ ಮಾತನಾಡಿ, ಇದೇ ಮೊದಲ ಬಾರಿಗೆ ಪದವೀಧರರ ಕ್ಷೇತ್ರದಲ್ಲಿ ಅತಿಹೆಚ್ಚಿನ ಮತದಾರರು ನೋಂದಣಿ ಮಾಡಿಸಿದ್ದು, ಅಖಂಡ ಬಳ್ಳಾರಿಯಲ್ಲಿ‌ 42 ಸಾವಿರ ನೋಂದಣಿ ಆಗಿದೆ. 18 ಸಾವಿರದಷ್ಟು ವಿಜಯನಗರದಲ್ಲಿ‌ ನೋಂದಣಿಯಾಗಿದೆ. ನಾಮಪತ್ರ ಸಲ್ಲಿಸುವ ಕೊನೆಯ ದಿನದವರಿಗೂ ನೋಂದಣಿ‌ ಮಾಡಿಸಬಹುದು ಎಂದರು.

ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವುದು ಕಾಂಗ್ರೆಸ್ ಸರ್ಕಾರ: ಸಚಿವ ಸಂತೋಷ್‌ ಲಾಡ್

ಬಿಜೆಪಿಗರು ಸರ್ವಾಧಿಕಾರಿ ಧೋರಣೆ ಹೊಂದಿದ್ದು, ಸ್ವಾಯತ್ತತೆ ಹತ್ತಿಕ್ಕುವ ಪಕ್ಷವಾಗಿದೆ. ಈ ಬಾರಿ ಬಿಜೆಪಿಗೆ ಅಧಿಕಾರ ನೀಡಿದರೆ ಅಂಬೇಡ್ಕರ್ ಸಂವಿಧಾನದ ಬದಲು ಆರ್‌ಎಸ್‌ಎಸ್ ಸಂವಿಧಾನ ಜಾರಿಗೆ ತರುತ್ತಾರೆ.
-ಮುಖ್ಯಮಂತ್ರಿ ಚಂದ್ರು, ಆಪ್‌ ರಾಜ್ಯಾಧ್ಯಕ್ಷ

click me!