ಹೈಕಮಾಂಡ್‌ ಹೇಳಿದರೆ ವರುಣದಿಂದಲೇ ಸ್ಪರ್ಧೆ: ಸಿದ್ದರಾಮಯ್ಯ

By Govindaraj S  |  First Published Dec 9, 2022, 12:34 PM IST

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೈಕಮಾಂಡ್‌ ಹೇಳಿದರೆ ವರುಣ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 


ಮೈಸೂರು (ಡಿ.09): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೈಕಮಾಂಡ್‌ ಹೇಳಿದರೆ ವರುಣ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹದಿನಾರು ಮೋಳೆ ಗ್ರಾಮದಲ್ಲಿ ಗುರುವಾರ ಉಪ್ಪಾರ ಸಮೂದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವರುಣದಿಂದಲೇ ಸ್ಪರ್ಧಿಸಬೇಕು ಎಂದ ಸಭಿಕರ ಆಗ್ರಹಕ್ಕೆ ಪ್ರತಿಕ್ರಿಯಿಸಿ, ನಾನು ಯಾವತ್ತೂ ವರುಣ ಕ್ಷೇತ್ರದ ಜನರನ್ನು ಮರೆಯುವುದಿಲ್ಲ. 

ಮೊದಲ ಬಾರಿ ಇಲ್ಲಿಂದ ಗೆದ್ದಾಗ ಪ್ರತಿಪಕ್ಷ ನಾಯಕನಾದೆ. ಎರಡನೇ ಬಾರಿ ಗೆದ್ದಾಗ ಮುಖ್ಯಮಂತ್ರಿಯಾದೆ. ಡಿ. ದೇವರಾಜ ಅರಸು ಅವರ ನಂತರ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿದ್ದು ನಾನೇ ಎಂದರು. ಮುಖ್ಯಮಂತ್ರಿ ಆಗುವುದು ಅಷ್ಟುಸುಲಭದ ಮಾತಲ್ಲ. ನಾನು ಸಿಎಂ ಆಗಿದ್ದಾಗ ರಾಜ್ಯದ ಜನಸಂಖ್ಯೆ ಆರೂವರೆ ಕೋಟಿ ಇತ್ತು. ಈಗ ಏಳು ಕೋಟಿಯಾಗಿದೆ. ನೀವು ಇಲ್ಲಿಂದಲೇ ಸ್ಪರ್ಧಿಸಿ ಎಂದು ಕರೆಯುತ್ತಿದ್ದೀರಿ. ನಾನು ಹಾಲಿ ಶಾಸಕನಾಗಿರುವ ಬಾದಾಮಿ ಜನರು ಮತ್ತೆ ನಿಲ್ಲುವಂತೆ ಒತ್ತಾಯಿಸುತ್ತಿದ್ದಾರೆ. ಕೋಲಾರ ಕ್ಷೇತ್ರದಿಂದಲೂ ಆಹ್ವಾನ ಬಂದಿದೆ. 

Tap to resize

Latest Videos

ಹಳ್ಳಿ ಹಕ್ಕಿ ಮತ್ತೆ ಕಾಂಗ್ರೆಸ್‌ನತ್ತ?: ಖರ್ಗೆ ಬಳಿಕ ಸಿದ್ದು ಭೇಟಿ

ಹೀಗಾಗಿ ನಾನು ಕೆಪಿಸಿಸಿಗೆ ಟಿಕೆಟ್‌ಗೆ ಅರ್ಜಿ ಸಲ್ಸಿಸುವಾಗ ಹೈಕಮಾಂಡ್‌ ಸೂಚಿಸಿದ ಕಡೆ ಸ್ಪರ್ಧೆ ಎಂದು ಬರೆದಿದ್ದೇನೆ. ಹೈಕಮಾಂಡ್‌ ಹೇಳಿದರೆ ವರುಣದಿಂದಲೇ ಸ್ಪರ್ಧಿಸುತ್ತೇನೆ ಎಂದು ಸಮಾಧಾನಪಡಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌, ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಡಾ.ಡಿ. ತಿಮ್ಮಯ್ಯ, ಮುಖಂಡರಾದ ಕೆ.ಮರೀಗೌಡ, ಬಿ.ಎಂ. ರಾಮು, ಗುರುಪಾದಸ್ವಾಮಿ, ಎಸ್‌.ಸಿ. ಬಸವರಾಜು, ಸುನಿಲ್‌ ಬೋಸ್‌, ಲತಾ ಸಿದ್ದಶೆಟ್ಟಿಮೊದಲಾದವರು ಇದ್ದರು.

ಕರ್ನಾಟಕದ ಮೇಲೆ ಗುಜರಾತ್‌ ಪರಿಣಾಮ ಬೀರಲ್ಲ: ಒಂದು ರಾಜ್ಯದ ಚುನಾವಣಾ ಫಲಿತಾಂಶ ಗಾಳಿ ಇನ್ನೊಂದು ರಾಜ್ಯಕ್ಕೆ ಬೀಸಲ್ಲ. ಗುಜರಾತ್‌ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಗುಜರಾತ್‌ನಲ್ಲಿ ಆಪ್‌ ಪಕ್ಷ ಬಹಳ ಹಣ ಖರ್ಚು ಮಾಡಿತ್ತು. ಕಾಂಗ್ರೆಸ್‌ ಮತ ವಿಭಜನೆಗಾಗಿ ಬಿಜೆಪಿಯೇ ಆಪ್‌ಗೆ ಫಂಡ್‌ ಮಾಡಿತ್ತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಗುಜರಾತ್‌ನಲ್ಲಿ ಬಿಜೆಪಿಗೆ ಬಹುಮತ ಸಿಗುತ್ತೆ ಎಂಬ ನಿರೀಕ್ಷೆ ಇತ್ತು. ಆಪ್‌ ಸ್ಪರ್ಧೆ ಮಾಡಿ ಕಾಂಗ್ರೆಸ್‌ ಮತ ತಿಂದರು. ಆಪ್‌ ಪಡೆದ ಮತಗಳೆಲ್ಲ ಕಾಂಗ್ರೆಸ್‌ನದ್ದು. ಗುಜರಾತ್‌ ಅನ್ನು ಕರ್ನಾಟಕಕ್ಕೆ ಹೋಲಿಸಬೇಡಿ. ಇಲ್ಲಿಯ ಬಿಜೆಪಿ ಸರ್ಕಾರ ಅತಿ ಭ್ರಷ್ಟಸರ್ಕಾರ. ಕಾಂಗ್ರೆಸ್‌ ಸಂಘಟನೆ ಇಲ್ಲಿ ಶಕ್ತಿಯುತವಾಗಿದೆ. ಕರ್ನಾಟಕ ಬಿಜೆಪಿಗೆ ತಾನು ಸೋಲುತ್ತೇನೆಂಬ ಅರಿವಿದೆ ಎಂದ ಅವರು, ಗುಜರಾತ್‌ ರೀತಿಯೇ ಜೆಡಿಎಸ್‌ ಜೊತೆ ಇಲ್ಲಿ ಬಿಜೆಪಿ ತಂತ್ರಗಾರಿಕೆ ಮಾಡಬಹುದು. 

ಚಾಮರಾಜಪೇಟೆಗೆ ನಾನು ಮಗ, ಸಿದ್ದು ಅಳಿಯ: ಶಾಸಕ ಜಮೀರ್‌ ಅಹ್ಮದ್‌

ಆದರೆ ಅದು ಇಲ್ಲಿ ನಡೆಯಲ್ಲ. ಕರ್ನಾಟಕದ ಆಡಳಿತ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಗುಜರಾತ್‌ನಲ್ಲಿ ಶೇ.40 ಸರ್ಕಾರ ಇತ್ತು ಅಂತ ಯಾರಾದರೂ ಹೇಳಿದ್ರಾ? ಅಷ್ಟುದುಡ್ಡು ಖರ್ಚು ಮಾಡಿದರೂ ಆಪ್‌ 6 ಸ್ಥಾನವಷ್ಟೇ ಪಡೆದಿದೆ. ಆಪ್‌ನಿಂದಾಗಿಯೇ ಕಾಂಗ್ರೆಸ್‌ ಮತ ವಿಭಜನೆ ಆಗಿದೆ ಎಂದು ಅವರು ಹೇಳಿದರು. ಹೋಯ್ತು ಮೋದಿ ಹವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

click me!