ಮಾಜಿ ಸಿದ್ದರಾಮಯ್ಯ ಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತಾರಂತೆ ಅನ್ನೋ ಚರ್ಚೆ ಜಿಲ್ಲೆಯಲ್ಲಿ ಜೋರಾಗಿದೆ. ಸದ್ಯ ಬಾದಾಮಿ ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯ ಹೋಗಿ ಬರೋದಕ್ಕೆ ದೂರ ಆಗುತ್ತೆ.
ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್ ಕೋಲಾರ
ಕೋಲಾರ (ಮಾ.23): ಮಾಜಿ ಸಿದ್ದರಾಮಯ್ಯ (Siddaramaiah) ಬರುವ ವಿಧಾನಸಭಾ ಚುನಾವಣೆಯಲ್ಲಿ (Election) ಕೋಲಾರ (Kolar) ಕ್ಷೇತ್ರದಿಂದ ಸ್ಪರ್ಧಿಸುತ್ತಾರಂತೆ ಅನ್ನೋ ಚರ್ಚೆ ಜಿಲ್ಲೆಯಲ್ಲಿ ಜೋರಾಗಿದೆ. ಸದ್ಯ ಬಾದಾಮಿ ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯ ಹೋಗಿ ಬರೋದಕ್ಕೆ ದೂರ ಆಗುತ್ತೆ, ಈಗಾಗ ಬೆಂಗಳೂರಿಗೆ ಸಮೀಪವಿರುವ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸಿದ್ದು ಸ್ಪರ್ಧಿಸುತ್ತಾರೆ.
ಚುನಾವಣೆ ಪ್ರಚಾರಕ್ಕೆ ಬೇರೆ ಬೇರೆ ಕಡೆಗಳಲ್ಲಿ ಪ್ರವಾಸ ಮಾಡೋದಕ್ಕೂ ಅನುಕೂಲವಾಗಿದೆ ಅಂತ ಜಿಲ್ಲೆಯಲ್ಲಿ ಭಾರಿ ಚರ್ಚೆ ಆರಂಭವಾಗಿದ್ದು, ಇದಕ್ಕೆ ಸಿದ್ದರಾಮಯ್ಯ ಸಹ ಒಪ್ಪಿಗೆ ನೀಡಿದ್ದಾರೆ ಅಂತ ಜಿಲ್ಲೆಯ ಕಾಂಗ್ರೆಸ್ (Congress) ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಇನ್ನು ಈ ಕುರಿತು ಮಾಜಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವರು ಆಗಿರುವ ಕೆ ಎಚ್ ಮುನಿಯಪ್ಪ (KH Muniyappa) ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಈ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ನಾವು ಸ್ವಾಗತ ಮಾಡ್ತೇವೆ, ರಾಜ್ಯದ 224 ಕ್ಷೇತ್ರಗಳಲ್ಲಿ 36 ಕ್ಷೇತ್ರ ಮಿಸಲು ಕ್ಷೇತ್ರವಾಗಿದೆ.ಇದನ್ನು ಬಿಟ್ಟು ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು ಎಂದು ಹೇಳಿದರು.
ಮುಂದಿನ ಸಿಎಂ ಕುರಿತು ಚರ್ಚೆ: ಮುನಿಯಪ್ಪ ನಿವಾಸದಲ್ಲಿ ಮೂಲ ಕಾಂಗ್ರೆಸ್ಸಿಗರ ಸಭೆ
ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಪಕ್ಕಾ: ಪಂಚರಾಜ್ಯಗಳ ಚುನಾವಣೆ ಆದ ಬಳಿಕ ಪೆಟ್ರೋಲ್ ಉತ್ಪನ್ನಗಳನ್ನು ಬಿಜೆಪಿ ಸರ್ಕಾರ ಹೆಚ್ಚಿಸಿದೆ. ಜನರ ಅಭಿವೃದ್ದಿ ಬಗ್ಗೆ ಮೋದಿ (PM Narendra Modi) ಸರ್ಕಾರಕ್ಕೆ ಕಳಕಳಿ ಇಲ್ಲ, ಕೇವಲ ರಾಜ್ಯಭಾರ ಮಾಡಲು ಹೊರಟ್ಟಿದ್ದಾರೆ ಬಿಟ್ರೆ ರಾಷ್ಟ್ರದ ಅಭಿವೃದ್ದಿ ಅವರಿಗೆ ಬೇಕಾಗಿಲ್ಲ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವಲ್ಲಿ ಬಿಜೆಪಿ (BJP) ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರವೇ ಮುಂದೆ ಅಧಿಕಾರಕ್ಕೆ ಬರಲಿದೆ. ಅದಕ್ಕಾಗಿ ನಾವೆಲ್ಲ ಶ್ರಮಿಸುತ್ತಿದ್ದೇವೆ, ಜಿಲ್ಲೆಯಿಂದಲೂ ಹೆಚ್ಚು ಕೊಡುಗೆ ನೀಡುತ್ತೇವೆ. ಮುಂದೆ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿಲ್ಲ, ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡುತ್ತಿರುವೆ, ಹೈಕಮಾಂಡ್ ತೀರ್ಮಾನವನ್ನು ಕಾದು ನೋಡೋಣ ಎಂದು ಹೇಳಿದರು.
ಸಂಸದರಿಗೆ ಮಾಜಿ ಸಂಸದರಿಂದ ಟಾಂಗ್: ಇನ್ನು ಕೋಲಾರದ ಕ್ಲಾಕ್ ಟವರ್‌ನಲ್ಲಿ ರಾಷ್ಟ್ರ ಧ್ವಜ ಹಾರಿಸುವ ವಿಚಾರದಲ್ಲಿ ಅಲ್ಪ ಸಂಖ್ಯಾತರ ವಿರುದ್ದ ಷಡ್ಯಂತ್ರ ಮಾಡುವುದು ಸರಿಯಲ್ಲ. ಧ್ವಜ ಹಾರಿಸೋದಕ್ಕೆ ಯಾರ ವಿರೋಧವೂ ಇರಲಿಲ್ಲ. ಅದಕ್ಕಾಗಿ ಕಾನೂನು ಇದೆ, ಯಾರೂ ಕೂಡ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಕಾನೂನಿನ ಹಿತಿಮಿತಿಯಲ್ಲಿ ಎಲ್ಲರೂ ಇರಬೇಕು, ಯಾರನ್ನೂ ಭಯಪಡಿಸುವ ಪ್ರಯತ್ನ ಮಾಡಬಾರದು ಎಂದು ಕೋಲಾರ ಸಂಸದ ಮುನಿಸ್ವಾಮಿಗೆ ಟಾಂಗ್ ನೀಡಿದರು.
ಏಪ್ರಿಲ್‌ನಿಂದ ಪಡಿತರ ಗೋಧಿ ಸಿಗಲ್ಲ: ಕೇಂದ್ರದ 5 ಕೆ ಜಿ ಅಕ್ಕಿಗೂ ಕೊಕ್ಕೆ!
ಬಿಜೆಪಿ ರಾಜಕೀಯ ಲಾಭಕ್ಕೆ ಹಿಜಾಬ್ ವಿವಾದ ಸೃಷ್ಟಿ: ಮುಂಬರುವ ಚುನಾವಣೆಗಳ ಲಾಭಕ್ಕಾಗಿ ಬಿಜೆಪಿ ಪಕ್ಷವು ಹಿಜಾಬ್ ಪರದೆಯನ್ನು ಅಜೆಂಡಾವಾಗಿ ರೂಪಿಸಿ ಕೊಂಡು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗುವಂತೆ ಗೊಂದಲ ಸೃಷ್ಟಿಸಿರುವುದು ದುರಂತದ ಸಂಗತಿ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ವಿಷಾದಿಸಿದರು. ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ರಾಜ್ಯದಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶದಿಂದ ಆತಂಕ ಉಂಟಾಗಿರುವ ಬಿಜೆಪಿ ಪಕ್ಷವು ಆರ್.ಎಸ್.ಎಸ್.(RSS) ಮತ್ತು ಭಜರಂಗದಳಗಳೆಂಬ ಮನುವಾದಿ ಸಂಘಟನೆಗಳು ನೀಡಿರುವ ಸೂಚನೆಯಂತೆ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಮೂಲಕ ಕೋಮುವಾದವನ್ನು ಸೃಷ್ಟಿಸುತ್ತಿದೆ ಎಂದು ದೂರಿದರು.
ರಾಜಕೀಯ ಲಾಭಕ್ಕೆ ಹುನ್ನಾರ: ರಾಯಚೂರು ಜಿಲ್ಲೆಯ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ (Dr BR Ambedkar) ಅವರ ಭಾವಚಿತ್ರ ಇಟ್ಟಿರುವುದನ್ನು ಅಕ್ಷೇಪಿಸಿ ತೆಗೆಸಿರುವ ಪ್ರಕರಣವು ತುಂಬಾ ನೋವಿನ ಸಂಗತಿಯಾಗಿದೆ. ದೇಶಕ್ಕೆ ಸಂವಿಧಾನವನ್ನು ರಚಿಸಿ ಕೊಟ್ಟಶಿಲ್ಪಿಗೆ ಮಾಡಿದ ಅವಮಾನವಾಗಿದೆ. ಈ ಎಲ್ಲಾ ಪ್ರಕರಣಗಳ ಹಿಂದೆ ಮನುವಾದಿ ಬಿಜೆಪಿ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಹುನ್ನಾರವಾಗಿದ್ದು ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಚುನಾವಣೆಗಳಲ್ಲಿ ಮತದಾರರ ದಿಕ್ಕು ತಪ್ಪಿಸಿ ಲಾಭ ಪಡೆಯುವುದಾಗಿದೆ. ಜನತೆ ಈ ವಿಚಾರವಾಗಿ ಎಚ್ಚತ್ತು ಕೊಳ್ಳ ಬೇಕಾಗಿದೆ ಎಂದರು.