ಮೋದಿ ಆಡಳಿತದಲ್ಲಿ ಜನ ಸಂಪತ್ ಭರಿತರಾಗಿದ್ದಾರೆ. ಹೀಗಾಗಿ ಜನ ಬೆಲೆ ಏರಿಕೆ ಬಗ್ಗೆ ತಲೆಕೆಡಿಸಿಕೊಳ್ತಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ ವಾಡಿದ್ದಾರೆ.
ವರದಿ: ರವಿ ಶಿವರಾಮ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು(ಮಾ.23): ಪ್ರಧಾನಿ ಮೋದಿ (Narendra Modi) ಆಡಳಿತದಲ್ಲಿ ಜನ ಸಂಪತ್ ಭರಿತರಾಗಿದ್ದಾರೆ. ಹೀಗಾಗಿ ಜನ ಬೆಲೆ ಏರಿಕೆ (Price Hike) ಬಗ್ಗೆ ತಲೆಕೆಡಿಸಿಕೊಳ್ತಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ವ್ಯಂಗ್ಯ ಭರಿತವಾಗಿ ಮಾತಾಡಿದ್ದಾರೆ. ಬೆಲೆ ಏರಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು ಬೆಲೆ ಏರಿಕೆ ಬಗ್ಗೆ ಈಗ ಜನ ಪ್ರತಿಭಟನೆ ಮಾಡ್ತಾ ಇಲ್ಲ. ನಾವು ಸಂಘಟನೆ ಮಾಡಿ ಹೋರಾಟ ಮಾಡಬೇಕಿದೆ ಎಂದ ಅವರು,ಜನ ಸ್ವಯಂ ಪ್ರೇರಣೆಯಿಂದ ಹೋರಾಟ ಮಾಡ್ತಾನೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜನ ಇನ್ನೂ ಎಚ್ಚೆತ್ತುಕೊಳ್ಳದೆ ಇದ್ರೆ ಮುಂದೆನು ದುರಂತ ಕಾದಿದೆಯೊ ಗೊತ್ತಿಲ್ಲ ಆತಂಕ ವ್ಯಕ್ತಪಡಿಸಿದರು. ಜನರಿಗೆ ಬೆಲೆ ಏರಿಕೆ ವಿಚಾರವೇ ಬೇಡವಾಗಿದೆ. ನಮ್ಮದೇನೊ ಕಿರು ದನಿಯಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಬಿಜೆಪಿ ಭಾವನಾತ್ಮಕ ವಿಚಾರದಲ್ಲಿ ರಾಜಕೀಯ: ಮುಸ್ಲಿಂ ವ್ಯಾಪಾರಸ್ಥರಿಗೆ (Muslim Traders) ಅವಕಾಶ ನೀಡದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿಸ ಹೆಚ್ ಡಿ ಕುಮಾರಸ್ವಾಮಿ ಅವರು, ಬಿಜೆಪಿಯವರು (BJP) ಭಾವನಾತ್ಮಕ ವಿಚಾರ ತರ್ತಾರೆ ಎಂದು ನಾನು ಮೂರು ತಿಂಗಳ ಹಿಂದೆಯೆ ಹೇಳಿದ್ದೆ.ಮಂಗಳೂರಲ್ಲಿ ಹುಟ್ಟಿದ ವಿಷಯವನ್ನು ರಾಜ್ಯವ್ಯಾಪಿ ತರಲು ಹೊರಟಿದ್ದಾರೆ. ಇನ್ನು ಒಂದು ವರ್ಷದಲ್ಲಿ ಚುನಾವಣೆ ಅದರೊಳಗೆ ಇನ್ನು ಏನೆಲ್ಲಾ ಮಾಡ್ತಾರೊ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿ ಕೋಮು ಸಂಘರ್ಷದಿಂದ ರಾಜಕೀಯ ಲಾಭ ಪಡೆಯಲು ಹೊರಟಿದೆ ಎಂದು ಆರೋಪಿಸಿದ ಹೆಚ್ ಡಿಕೆ , ಬಿಜೆಪಿ ಮತ್ತು ಅಂಗಸಂಸ್ಥೆ (RSS) ಭಾವನಾತ್ಮಕ ವಿಚಾರಗಳನ್ಮು ಸಾರ್ವಜನಿಕವಾಗಿ ತೆಗೆದುಕೊಂಡು ಹೋಗುತ್ತಿದೆ ಎಂದು ಆರೋಪಿಸಿದರು.
ಅಶಾಂತಿ ವಾತಾವರಣ ನಿರ್ಮಾಣ ಮಾಡ್ತಿರುವ ಬಿಜೆಪಿಗೆ ಅಭಿವೃದ್ಧಿ ಪೂರಕ ಚರ್ಚೆ ಮಾಡಲು ಸರಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉತ್ತರ ಭಾರತದ ಚುನಾವಣಾ ವಿಚಾರವನ್ನು ಕರ್ನಾಟಕಕ್ಕೆ ಪರಿಚಯಿಸುವ ಕೆಲಸ ಮಾಡ್ತಿದ್ದಾರೆ. ಮುಂದೆ ಏನೆನಾಗುತ್ತೋ ನನಗಂತೂ ಗೊತ್ತಿಲ್ಲ ಎಂದ ಕುಮಾರಸ್ವಾಮಿ , ಕರ್ನಾಟಕದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎಂದು ಅಳವಡಿಸಿಕೊಂಡಿದ್ದೇವೆ. ಇಂದು ಅದಕ್ಕೆ ಬೆಂಕಿ ಕೊಳ್ಳಿ ಇಡುವ ಕೆಲಸ ಆರಂಭವಾಗಿದೆ. ಕುವೆಂಪು (Kuvempu) ಹೇಳಿದ್ದ ಸರ್ವ ಜನಾಂಗದ ಶಾಂತಿಯ ತೋಟ ಸರ್ವನಾಶ ಮಾಡಿದ್ದಾರೆ. ಕೋಮು ಸಂಘರ್ಷಕ್ಕೆ ಇದೆಲ್ಲವನ್ನೂ ಬಿಜೆಪಿ ಮಾಡುತ್ತಿದೆ ಎಂದರು.
Zomato Instant ಸೇವೆ ಪ್ರಕಟಿಸಿದ ಬೆನ್ನಲ್ಲೇ, ಟೀಕೆಗೊಳಗಾದ ಸಂಸ್ಥಾಪಕ ಗೋಯಲ್
ಮುಸ್ಲಿಂ ವ್ಯಾಪಾರಸ್ತರಿಗೆ ಅವಕಾಶ ನಿರಾಕರಣೆ ಸದನದಲ್ಲಿ ಸದ್ದು: ಮುಸ್ಲಿಂ ವ್ಯಾಪಾರಸ್ತರಿಗೆ ಜಾತ್ರೆಗಳಲ್ಲಿ ಅಂಗಡಿ ಹಾಕಲು ಅವಕಾಶ ನೀಡದ ವಿಚಾರವನ್ನು ಕಾಂಗ್ರೆಸ್ ಶಾಸಕರಾದ ಯುಟಿ ಖಾದರ್ , ರಿಜ್ವಾನ್ ಅರ್ಷದ್, ಶಾಸಕ ಜಮೀರ್ ಪ್ರಸ್ತಾಪ ಮಾಡಿದ್ರು. ಈ ವೇಳೆ ಕೆಲ ಹೊತ್ತು ಬಿಸಿ ಬಿಸಿ ಚರ್ಚೆ ಆಯಿತು. ಆಡಳಿತ ಪಕ್ಷ ಮತ್ತು ವಿಪಕ್ಷಗಳು ಪರಸ್ಪರ ಆರೋಪ ಮಾಡಿಕೊಂಡರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಖಾದರ್ ನಮ್ಮ ರಾಜ್ಯದ ಅಭಿವೃದ್ಧಿ ಆಗಬೇಕಾದ್ರೆ ಸಾಮರಸ್ಯ, ಸಹೋದರತೆ ಇರಬೇಕು. ಕೆಲ ಕ್ರೂರ ಮನಸ್ಸುಗಳು ಸಮಸ್ಯೆ ಸೃಷ್ಟಿಸ್ತಿದ್ದಾರೆ.
ಬೀದಿ ಬದಿ ವ್ಯಾಪಾರಿಗಳು ಇಂತದ್ದೇ ಧರ್ಮ ಅಂತ ಅಲ್ಲದೆ ಜೀವನ ಸಾಗಿಸ್ತಿರ್ತಾರೆ. ಆದರೆ ಕೆಲವು ಕಡೆ ಧಾರ್ಮಿಕ ಕೇಂದ್ರದಲ್ಲಿ ಮುಸ್ಲಿಂ ಧರ್ಮದವರು ವ್ಯಾಪಾರ ಮಾಡದಂತೆ ಆಗ್ರಹಿಸ್ತಿದ್ದಾರೆ. ಅವರು ಕೆಟ್ಟ ಮನಸ್ಸಿನವರು, ಕ್ರೂರಿಗಳು, ಹೇಡಿಗಳು ಎಂದು ಖಾದರ್ ಆಕ್ರೋಶ ಹೊರಹಾಕಿದ್ರು. ಈ ವೇಳೆ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.ಹೇಡಿಗಳು ಅಂತ ಯಾರನ್ನ ಕರೀತಿದ್ದಿರಾ ಹೇಳಿ ಎಂದು ಪಟ್ಟು ಹಿಡಿದರು. ಬಳಿಕ ಯಾವುದೇ ಧರ್ಮದ ಹೆಸರೂ ಪ್ರಸ್ತಾಪ ಮಾಡಿಲ್ಲ ಅಂತ ಖಾದರ್ ಸದನಕ್ಕೆ ಸ್ಪಷ್ಟನೆ ನೀಡಿದರು.
Bhima River Bank Murder Case ನ್ಯಾಯಾಲಯಕ್ಕೆ ಹಾಜರಾದ ಪ್ರಮುಖ ಆರೋಪಿಗೆ ಬಿಗಿ ಭದ್ರತೆ!
ಕಾಂಗ್ರೆಸ್ ಸರ್ಕಾರ ತಂದ ಕಾಯ್ದೆ. ಸಿದ್ದರಾಮಯ್ಯ ಕಾಲೆಳೆದ ಮಾಧುಸ್ವಾಮಿ: ಈ ವಿಚಾರದ ಬಗ್ಗೆ ಸರ್ಕಾರದ ಪರ ಉತ್ತರ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ಸರ್ಕಾರದ ಪ್ರೋತ್ಸಾಹದಿಂದ ಈ ಘಟನೆ ನಡೆಯುತ್ತಿದೆ ಎಂದು ಯಾರು ಭಾವಿಸಬಾರದು ಎಂದು ಮಾಧುಸ್ವಾಮಿ ಹೇಳಿದರು. ಆಕಸ್ಮಿಕವಾಗಿ ನಡೆದ ಘಟನೆಗೆಲ್ಲಾ ಸರ್ಕಾರವನ್ನು ಜವಾಬ್ದಾರಿ ಮಾಡಬಾರದು ಎಂದ ಅವರು, 2012ರಲ್ಲಿ ರೂಲ್ಸ್ ಮಾಡುವಾಗ ಸಂಸ್ಥೆ ಜಮೀನು , ಸಮೀಪದ ಜಮೀನು, ಕಟ್ಟಡ ಅಥವಾ ನಿವೇಶನ ಸೇರಿದಂತೆ ಯಾವುದೇ ಸ್ವತ್ತನ್ನ ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ.2002 ಹಿಂದೂ ಧಾರ್ಮಿಕ ಸಂಸ್ಥೆ, ಧರ್ಮದತ್ತಿ ನಿಯಮದಲ್ಲಿ ರೂಲ್ಸ್ ಮಾಡಿದ್ದಾರೆ.ಯಾವುದೇ ಧರ್ಮದವರಿಗೆ ಗುತ್ತಿಗೆ ಕೊಡುವಂತಿಲ್ಲ ಅಂತಿದೆ ಎಂದು ಮಾಧುಸ್ವಾಮಿ ಸದನಕ್ಕೆ ತಿಳಿಸಿದ್ರು. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಈ ಕಾನೂನು ಮಾಡಿದ್ದು.ಈಗ ನೀವೇ ಪ್ರಶ್ನೆ ಮಾಡ್ತಿದ್ದೀರ ಸಿದ್ದರಾಮಯ್ಯ ಅವರೇ ಎಂದು ಮಾಧುಸ್ವಾಮಿ ಸಿದ್ದರಾಮಯ್ಯರ ಬಾಯಿ ಮುಚ್ಚಿಸಿದರು.