Vidhan Parishat Election: ಬಿಜೆಪಿ ಗೆಲ್ಲಿಸಿದರೆ ಅಭಿವೃದ್ಧಿಗೆ ಇನ್ನಷ್ಟು ವೇಗ: ಆನಂದ್‌ ಸಿಂಗ್‌

By Kannadaprabha News  |  First Published Nov 29, 2021, 2:49 PM IST

*  ವಿಜಯನಗರ ಕ್ಷೇತ್ರಕ್ಕೆ ಸರ್ಕಾರ ಕೇಳಿದ್ದನೆಲ್ಲಾ ಕೊಟ್ಟಿದೆ
*  ಮಾತಿಗೆ ತಪ್ಪಲಾರದ ವ್ಯಕ್ತಿ ಯಡಿಯೂರಪ್ಪ
*  ಯಡಿಯೂರಪ್ಪನವರ ಋುಣ ತೀರಿಸಬೇಕಾದರೆ ಬಿಜೆಪಿಗೆ ಮತ ಹಾಕಿ 
 


ಹೊಸಪೇಟೆ(ನ.29):  ರಾಜ್ಯದ ಬಿಜೆಪಿ ಸರ್ಕಾರ ನಮಗೆ ವಿಜಯನಗರ(Vijayanagara) ಜಿಲ್ಲೆ ರೂಪದಲ್ಲಿ ದೊಡ್ಡ ಕೊಡುಗೆ ಕೊಟ್ಟಿದೆ. ಈ ಋುಣ ತೀರಿಸಲು ವಿಧಾನ ಪರಿಷತ್‌ ಚುನಾವಣೆ(Vidhan Parishat Election) ಬಂದಿದೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ವೈ.ಎಂ. ಸತೀಶ್‌ರನ್ನು ಮೇಲ್ಮನೆಗೆ ಆಯ್ಕೆ ಮಾಡಿ ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್‌ ಸಿಂಗ್‌(Anand Singh) ಮನವಿ ಮಾಡಿದರು.

ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದ ಚುನಾವಣಾ ಪ್ರಚಾರ(Election Campaign) ಸಭೆಗೆ ಚಾಲನೆ ನೀಡಿ ಮಾತನಾಡಿ, ವಿಜಯನಗರ ಕ್ಷೇತ್ರಕ್ಕೆ ಸರ್ಕಾರ ಕೇಳಿದ್ದನೆಲ್ಲಾ ಕೊಟ್ಟಿದೆ. ಆ ಪಂಪಾ ವಿರೂಪಾಕ್ಷೇಶ್ವರನ ಆಶೀರ್ವಾದ ಹಾಗೂ ಈ ನೆಲದ ಪ್ರಭಾವದಿಂದ ನಮಗೆ ಜಿಲ್ಲೆಯಾಗಿದೆ. ಜಿಲ್ಲೆಯಿಂದ ಈ ಭಾಗದಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿದೆ. ಮೆಡಿಕಲ್‌, ಎಂಜಿನಿಯರಿಂಗ್‌ ಕಾಲೇಜುಗಳು, ಕಾರ್ಖಾನೆಗಳು, ವಿದ್ಯಾಸಂಸ್ಥೆಗಳು ಬರಲಿವೆ. ಹಾಗಾಗಿ ಎಂಎಲ್ಸಿ ಎಲೆಕ್ಷನ್‌ನಲ್ಲಿ ಬಿಜೆಪಿಯನ್ನು(BJP) ಗೆಲ್ಲಿಸೋಣ ಎಂದರು.

Tap to resize

Latest Videos

undefined

MLC Election: ಕಟೀಲ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಸಲೀಂ ಅಹ್ಮದ್‌

500 ಕೋಟಿ:

ಪಾಪಿನಾಯಕನಹಳ್ಳಿ ಏತ ನೀರಾವರಿಗೆ 500 ಕೋಟಿ ಕೊಡಲು ಸರ್ಕಾರ ಒಪ್ಪಿದೆ. ಈಗಾಗಲೇ .250 ಕೋಟಿ ಬಿಡುಗಡೆ ಮಾಡಿದ್ದು, ಕಾಮಗಾರಿ ನಡೆದಿದೆ. ಇನ್ನೂ .250 ಕೋಟಿಗೆ ಈ ಎಲೆಕ್ಷನ್‌ ಮುಗಿದ ಬಳಿಕ ಡಿಪಿಆರ್‌ ತಯಾರಿಸಿ ಹಣಕಾಸು ಇಲಾಖೆಗೆ ಸಲ್ಲಿಸಲಾಗುವುದು. ವಿಜಯನಗರ ಜಿಲ್ಲೆ ಬೇರೆ ಜಿಲ್ಲೆಯಂತೇ ಅಲ್ಲ. ಬರುವ ಜನವರಿಯಿಂದ ಯಾರೂ ಬಳ್ಳಾರಿಗೆ ಹೋಗದಂತೆ ಎಲ್ಲ ಕಚೇರಿಗಳು ಆರಂಭಗೊಳ್ಳಲಿವೆ. ಆಗಿನ ಸಿಎಂ ಯಡಿಯೂರಪ್ಪ ಜಿಲ್ಲೆ ಕೊಟ್ಟಿದ್ದಾರೆ. ಈಗಿನ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಜಿಲ್ಲೆ ಅಭಿವೃದ್ಧಿಗೆ ಅನುದಾನ ಕೊಡುತ್ತಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರು ಕೂಡ ನೇರ ಜನರ ಸಂಪರ್ಕದಲ್ಲಿರುತ್ತಾರೆ. ಮನೆಗಳು ಬಂದಿಲ್ಲ ಎಂಬ ಸಮಸ್ಯೆ ಇದೆ. ಸಚಿವ ಸಂಪುಟದಲ್ಲಿ ಚರ್ಚೆಯಾಗಿದ್ದು, ಹಣಕಾಸಿನ ಸ್ಥಿತಿಗತಿ ಅವಲೋಕಿಸಿ ಎಲೆಕ್ಷನ್‌ ಮುಗಿದ ಬಳಿಕ ಫಲಾನುಭವಿಗಳಿಗೆ ಮನೆ ಮಂಜೂರಾತಿ ನೀಡುವ ಕಾರ್ಯವೂ ನಡೆಯಲಿದೆ ಎಂದರು.

ಕಾಂಗ್ರೆಸ್‌ನವರು(Congress) ಬರೀ ಪೊಳ್ಳು ಭರವಸೆಗಳನ್ನು ನೀಡುತ್ತಾರೆ. ಆದರೆ, ಬಿಜೆಪಿಯವರು ಕೆಲಸ ಮಾಡಿ ತೋರಿಸುತ್ತಾರೆ. ನಾನು ರಾಜಕೀಯ(Politics) ರಣತಂತ್ರಕ್ಕಾಗಿ ಆ ಪಕ್ಷಕ್ಕೆ ಕೆಲ ತಿಂಗಳದ ಮಟ್ಟಿಗೆ ಹೋಗಿದ್ದೆ. ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ನೀಡಲಾಗುತ್ತದೆ. ವಿಜಯನಗರದಿಂದಲೇ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಅಂದರೆ ನಾನು ಎಂಎಲ್‌ಎ(MLA) ಸ್ಥಾನಕ್ಕೆ ರಾಜೀನಾಮೆ(Resign) ನೀಡಿದ ಬಳಿಕವೇ ಉಳಿದವರು ರಾಜೀನಾಮೆ ನೀಡಿದರು. ಬಳಿಕ ರಾಜ್ಯದಲ್ಲಿ(Karnataka) ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿತು. ಈಗ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸ್ಥಾನ ಕಡಿಮೆ ಇದೆ. ವಿಜಯನಗರ ಜಿಲ್ಲೆಯವರು ಹೆಚ್ಚಿನ ಮತಗಳನ್ನು ನೀಡಿ, ಎಂ.ವೈ. ಸತೀಶ್‌ರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಿ ಕಳುಹಿಸಬೇಕು ಎಂದು ಕೋರಿದರು.

ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌, ಅಭ್ಯರ್ಥಿ ಎಂ.ವೈ. ಸತೀಶ್‌ ಮಾತನಾಡಿದರು. ಮುಖಂಡರಾದ ಹನುಮಂತಪ್ಪ, ಅಶೋಕ್‌ ಜೀರೆ, ದಮ್ಮೂರ ಶೇಖರ್‌, ಸಿದ್ದೇಶ್‌ ಯಾದವ್‌, ಅಯ್ಯಾಳಿ ತಿಮ್ಮಪ್ಪ, ಸಾಲಿಸಿದ್ದಯ್ಯಸ್ವಾಮಿ, ವ್ಯಾಸನಕೆರೆ ಶ್ರೀನಿವಾಸ್‌, ಗುಜ್ಜಲ ಶ್ರೀನಿವಾಸ್‌, ಕೋರಿ ಫಕ್ಕೀರಪ್ಪ, ಅನ್ನದಾನರೆಡ್ಡಿ, ಬಸವರಾಜ ನಾಲತ್ವಾಡ, ಪ್ರಿಯಾಂಕಾ ಜೈನ್‌, ಶಂಕರ ಮೇಟಿ, ಅಪ್ಪಾರಾವ್‌ ಸಾನಬಾಳ್‌ ಮತ್ತಿತರರಿದ್ದರು. ಗಾದಿಗನೂರು, ಪಾಪಿನಾಯಕನಹಳ್ಳಿ, ಕಲ್ಲಹಳ್ಳಿ, ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿಯ 82 ಸದಸ್ಯರು ಸಭೆಯಲ್ಲಿದ್ದರು.

Karnataka Politics: ಬಿಜೆಪಿಯಲ್ಲಿ ಶಿಸ್ತಿದ್ದರೆ ತೋರಿಸಲಿ: ಡಿ.ಕೆ.ಶಿವಕುಮಾರ

ಜನವರಿಯೊಳಗೆ ಬಳ್ಳಾರಿ ಅಲೆದಾಟ ತಪ್ಪಿಸುವೆ: ಸಚಿವ

ಹರಪನಹಳ್ಳಿ(Harapanahalli): ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಕೆಲಸ, ಕಾರ್ಯಗಳಿಗೆ ಸಾರ್ವಜನಿಕರು ಬಳ್ಳಾರಿಗೆ ಹೋಗುವುದನ್ನು ಜನವರಿಯೊಳಗೆ ತಪ್ಪಿಸುತ್ತೇನೆ ಎಂದು ಆನಂದ್‌ ಸಿಂಗ್‌ ಭರವಸೆ ನೀಡಿದರು.

ಭಾನುವಾರ ತಾಲೂಕಿನ ಕಮ್ಮತ್ತಹಳ್ಳಿಯಲ್ಲಿ ವಿಧಾನ ಪರಿಷತ್‌ ಚುನಾವಣಾ ಹಿನ್ನೆಲೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಹೊಸಪೇಟೆಯಲ್ಲಿ(Hosapete) 80 ಎಕರೆ ಜಾಗದಲ್ಲಿ ಒಂದೇ ಕಡೆ ಎಲ್ಲ ಜಿಲ್ಲಾ ಮಟ್ಟದ ಕಚೇರಿಗಳು ಇರುವ ಹಾಗೆ ಮಾಡುತ್ತೇವೆ. ಜಾಗದ ನೀಲನಕ್ಷೆ ತಯಾರಾಗುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ವೇಗವಾಗಿ ಪ್ರಗತಿಯಲ್ಲಿವೆ ಎಂದರು. ವಿಜಯನಗರ ಜಿಲ್ಲೆಯ ಪ್ರತಿಯೊಂದು ತಾಲೂಕುಗಳಲ್ಲಿ 18 ಅಡಿಯ ವಿಜಯನಗರದ ವಿಜಯಸ್ತಂಭ ಸ್ಥಾಪನೆ ಮಾಡುತ್ತೇನೆ. ಇಲ್ಲಿಯೂ ಜಾಗ ಹುಡುಕಿ ಎಂದು ಅವರು ಶಾಸಕರಿಗೆ ತಿಳಿಸಿದರು.

ಎದೆಗಾರಿಕೆಯ ಗಂಡು:

56 ಇಂಚಿನ ಎದೆಗಾರಿಕೆಯ ಗಂಡು ಬಿ.ಎಸ್‌. ಯಡಿಯೂರಪ್ಪನವರು(BS Yediyurappa). ವಿಜಯನಗರ ಜಿಲ್ಲೆ ರಚನೆ ಕುರಿತು ಮನವಿ ಪತ್ರ ತೆಗೆದುಕೊಂಡು ಹೋದಾಗ ಅಲ್ಲಿದ್ದ ಅಧಿಕಾರಿಗಳು ನೂತನ ಜಿಲ್ಲಾ ರಚನೆಗೆ ಕೆಲವರ ವಿರೋಧವಿದೆ, ಅದಕ್ಕೆ ಬೇಡ ಎಂದಿದ್ದರು. ಆದರೆ ಯಡಿಯೂರಪ್ಪ ಅವರು ಅದ್ಯಾವುದಕ್ಕೂ ಕಿವಿಗೊಡದೆ ಪತ್ರಕ್ಕೆ ಸಹಿ ಹಾಕಿದರು ಎಂದರು. ಮಾತಿಗೆ ತಪ್ಪಲಾರದ ವ್ಯಕ್ತಿ ಯಡಿಯೂರಪ್ಪನವರು. ಅಂತಹ ಯಡಿಯೂರಪ್ಪನವರ ಋುಣ ತೀರಿಸಬೇಕಾದರೆ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಎಂದು ಕೋರಿದರು.
 

click me!