ಬಜರಂಗದಳ ಬ್ಯಾನ್‌ ಮಾಡ್ತೇವೆ ಎಂದು ಕುಣಿತ್ತಿದ್ದ ಕಾಂಗ್ರೆಸ್ ವರಸೆ ಬದಲಿಸಿದೆ: ಓವೈಸಿ ಗರಂ

By Kannadaprabha News  |  First Published May 7, 2023, 10:03 AM IST

ಬಜರಂಗದಳವನ್ನು ಬ್ಯಾನ್‌ ಮಾಡುತ್ತೇವೆ ಎಂದು ಕುಣಿಯುತ್ತಿದ್ದ ಕಾಂಗ್ರೆಸ್‌ ಇದೀಗ ಮತ ಕೈತಪ್ಪುವ ಭೀತಿಯಿಂದ ತಮ್ಮ ವರಸೆಯಿಂದ ಬದಲಿಸಿದೆ. ಬಜರಂಗದಳವನ್ನು ಬ್ಯಾನ್‌ ಮಾಡುವುದಿಲ್ಲ. ಕಂಟ್ರೋಲ್‌ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ ಓವೈಸಿ ಹೇಳಿದರು


ಹುಬ್ಬಳ್ಳಿ (ಮೇ.7) : ಬಜರಂಗದಳವನ್ನು ಬ್ಯಾನ್‌ ಮಾಡುತ್ತೇವೆ ಎಂದು ಕುಣಿಯುತ್ತಿದ್ದ ಕಾಂಗ್ರೆಸ್‌ ಇದೀಗ ಮತ ಕೈತಪ್ಪುವ ಭೀತಿಯಿಂದ ತಮ್ಮ ವರಸೆಯಿಂದ ಬದಲಿಸಿದೆ. ಬಜರಂಗದಳವನ್ನು ಬ್ಯಾನ್‌ ಮಾಡುವುದಿಲ್ಲ. ಕಂಟ್ರೋಲ್‌ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ ಓವೈಸಿ(Asaduddin Owaisi) ಹೇಳಿದರು.

ಇಲ್ಲಿನ ಪೂರ್ವ ಕ್ಷೇತ್ರದ ಎಐಎಂಐಎಂ ಪಕ್ಷದ ಅಭ್ಯರ್ಥಿ ದುರ್ಗಪ್ಪ ಬಿಜವಾಡ ಪರವಾಗಿ ನೇಕಾರನಗರದ ಬಳಿ ನೂರಾನಿ ಪ್ಲಾಟ್‌ನಲ್ಲಿ ಶನಿವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

Tap to resize

Latest Videos

ಮತ ಎಣಿಕೆ: ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿ​ಸಿ ಜಿಲ್ಲಾ​ಧಿ​ಕಾರಿ ಆದೇಶ

ಕಾಂಗ್ರೆಸ್‌ ದೊಡ್ಡ ದೊಡ್ಡ ನಾಯಕರು ಮಾರುದ್ಧ ಭಾಷಣ ಮಾಡುತ್ತಿದ್ದಾರೆ. ಆದರೆ, ಯಾರೊಬ್ಬರೂ ಹಿಜಾಬ್‌ ಬಗ್ಗೆ ಮಾತನಾಡುತ್ತಿಲ್ಲ. ದುರ್ಗಪ್ಪ ಶಾಸಕರಾದರೆ ಪ್ರಮಾಣ ವಚನದ ವೇಳೆ ಹಿಜಾಬ್‌ ಧರಿಸಿದ ಮಹಿಳೆಯದೊಂದಿಗೆ ವಿಧಾನಸೌದಕ್ಕೆ ಹೋಗುತ್ತಾರೆ ಎಂಬುದಕ್ಕೆ ನಾನೇ ಗ್ಯಾರಂಟಿ ಎಂದರು.

ಆರ್‌.ಎಸ್‌.ಎಸ್‌(RSS). ತತ್ವ ಸಿದ್ಧಾಂತಗಳನ್ನು ತನ್ನ ಕಣ ಕಣದಲ್ಲಿ ತುಂಬಿಕೊಂಡಿರುವ ಜಗದೀಶ ಶೆಟ್ಟರ್‌(Jagadish shettar) ಪರವಾಗಿ ಪ್ರಚಾರ ಮಾಡಲು ಆಗಮಿಸಿರುವ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ(Soniya gandhi) ನಡೆ ಅಸಹ್ಯ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೆಟ್ಟರ್‌ ಅವರಿಗೆ ನಿಜವಾಗಿಯೂ ಜಾತ್ಯಾತೀತ ಮನೋಭಾವ ಇದ್ದರೆ, ಅನಗತ್ಯವಾಗಿ ಸ್ಧಳಾಂತರಿಸಿದ ಭೈರಿದೇವರಕೊಪ್ಪದ ದರ್ಗಾವನ್ನು ಮತ್ತೆ ಮೊದಲಿನಂತೆ ಮಾಡಿ ತೋರಿಸಲಿ ಎಂದು ಸವಾಲೆಸೆದರು. ದೇಶದ ಪ್ರಧಾನಿ ಮತ್ತು ವಿರೋಧ ಪಕ್ಷಗಳು ಕೇವಲ ಓಲೈಕೆ ರಾಜಕಾರಣ ಮಾಡುತ್ತಿವೆಯೇ ಹೊರತು, ಜನರ, ದೇಶದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ.

.130 ಕೋಟಿ ಜನರ ಹಿತ ಕಾಯುವುದನ್ನು ಬಿಟ್ಟು, ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಒಂದು ಕೋಮಿಗೆ ಸಂಬಂಧಿಸಿದ ಸಿನೇಮಾದ ನಿರ್ದೇಶನ, ನಿರ್ಮಾಣ ಮತ್ತು ಪ್ರಚಾರದ ಜವಾಬ್ದಾರಿ ಹೊತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜವಾಡ ಮಂತ್ರಿ:

ಎಐಎಂಐಎಂ ಪಕ್ಷದ (AIMIM Party)ಮೂರು ಸದಸ್ಯರನ್ನು ಪಾಲಿಕೆಗೆ ಕಳುಹಿಸಿದಂತೆ ಬಿಜವಾಡ ಅವರನ್ನು ವಿಧಾನಸಭೆಗೆ ಕಳುಹಿಸಿ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದರೆ, ಸರ್ಕಾರ ರಚನೆಯಲ್ಲಿ ಎಐಎಂಐಎಂ ಮಹತ್ವದ ಪಾತ್ರ ವಹಿಸುತ್ತದೆ. ಆಗ ದುರ್ಗಪ್ಪ ಬಿಜವಾಡ ಮಂತ್ರಿಯಾಗಿ ನಿಮ್ಮ ಮನೆ ಮನೆಗೆ ಬಂದು ಸಮಸ್ಯೆ ಆಲಿಸುತ್ತಾರೆ. ಬಡವರನ್ನು, ದೀನ, ದಲಿತರನ್ನು ಸಬಲರನ್ನಾಗಿಸಲು ನಮ್ಮ ಬಳಿ ಬಹಳ ಸಮಯವಿದೆ ಎಂದರು.

ರಾಜ್ಯ ಚುನಾವಣೆಗೆ ಪ್ರಧಾನ ಮಂತ್ರಿ ಬಂದು ಮತಯಾಚನೆ ಮಾಡುವ ಪ್ರಮೇಯ ಬಂದಿದೆ. ಬಜರಂಗ ಬಲಿ ಎಂದು ಕಮಲದ ಬಟನ್‌ ಒತ್ತಿ ಎನ್ನುತ್ತಿದ್ದಾರೆ ಮೋದಿ(Narendra Modi). ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 158 ಅಮಾಯಕರು ಜೈಲು ಪಾಲಾಗಿದ್ದಾರೆ. ಅವರ ಬಿಡುಗಡೆಯ ಸಲುವಾಗಿ ಸುಪ್ರೀಂಕೋರ್ಚ್‌ನ ಹಿರಿಯ ವಕೀಲರ ಜೊತೆ ಮಾತನಾಡಿದ್ದೇನೆ ಎಂದರು.

ಹು-ಧಾ ಪೂರ್ವ ಕ್ಷೇತ್ರದ ಪಕ್ಷದ ಅಭ್ಯರ್ಥಿ ದುರ್ಗಪ್ಪ ಬಿಜವಾಡ ಮಾತನಾಡಿ, ಶಾಸಕ ಪ್ರಸಾದ ಅಬ್ಬಯ್ಯ ಅವರು ಕೋವಿಡ್‌ ಸಂದರ್ಭದಲ್ಲಿ ಜನರಿಗೆ ಯಾವುದೇ ಸಹಾಯ ಮಾಡಿಲ್ಲ. ಚುನಾವಣೆ ಘೋಷಣೆ ಆದ ಬಳಿಕ ಮನೆ ಮನೆಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ. ಹಣ ಹಂಚುತ್ತಿದ್ದಾರೆ. ಮಸೀದಿ ಮಂದಿರಗಳಿಗೆ ಅಬ್ಬಯ್ಯ ಹಣ ನೀಡಲು ಬಂದರೆ ತೆಗೆದುಕೊಳ್ಳಬೇಡಿ. ಅದು ಪಾಪದ ಹಣ. ಅನಿವಾರ್ಯವಾಗಿ ಹಣ ಪಡೆದರೂ ಮತ ನೀಡಬೇಡಿ ಎಂದರು.

ಶಿವಮೊಗ್ಗದ ಶಾಂತಿಗಾಗಿ ನನ್ನ ಸ್ಪರ್ಧೆ: ಆಯನೂರು ಮಂಜುನಾಥ್‌

ಪಾದಯಾತ್ರೆ ಇಂದು...

ಪಕ್ಷ ಸಂಘಟನೆಯ ಉದ್ದೇಶದಿಂದ ಮೇ 7ರಂದು ಬೆಳಗ್ಗೆ 10:30ಕ್ಕೆ ಹಳೇ ಹುಬ್ಬಳ್ಳಿಯ ಹಜರತ್‌ ಅಲಿ ಸಯ್ಯದ ಫತೇಷಾವಲಿ ದರ್ಗಾದಿಂದ ಸಾವಿರಾರು ಬೆಂಬಲಿಗಲೊಂದಿಗೆ ಪಾದಯಾತ್ರೆ ನಡೆಯಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದುರ್ಗದ ಬೈಲ್‌ನಲ್ಲಿ ಅಂತ್ಯಗೊಳ್ಳಲಿದೆ ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ ಓವೈಸಿ ಹೇಳಿದರು.

click me!