Uttara Kannada Elections 2024: ರಾಜಕೀಯ ಸಂಬಂಧಿತ ಯಾವುದೇ ಪ್ರಶ್ನೆಗೆ ಉತ್ತರಿಸದೆ ತೆರಳಿದ ಅನಂತ್ ಕುಮಾರ್

By Suvarna News  |  First Published May 7, 2024, 8:34 AM IST

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್ ನಿಂದ ಅಂಜಲಿ ನಿಂಬಾಳ್ಕರ್‌ ಸ್ಪರ್ಧಿಸುತ್ತಿದ್ದಾರೆ.


ಶಿರಸಿ (ಮೇ.7): ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್ ನಿಂದ ಅಂಜಲಿ ನಿಂಬಾಳ್ಕರ್‌ ಸ್ಪರ್ಧಿಸುತ್ತಿದ್ದಾರೆ. ಉತ್ತರ ಕನ್ನಡದಲ್ಲಿ ಸಂಜೆ 5 ಗಂಟೆಯವರೆಗೆ 70.61% ಮತದಾನವಾಗಿದೆ. ಮಧ್ಯಾಹ್ನ 3 ಗಂಟೆವರೆಗೆ  ಶೇ.55.98ರಷ್ಟು ಮತದಾನವಾಗಿತ್ತು.  ಮಧ್ಯಾಹ್ನ 1ಗಂಟೆ ವರೆಗೆ  ಶೇ.43.31 ಮತದಾನವಾಗಿತ್ತು. ಬೆಳಗ್ಗೆ 11 ಗಂಟೆವರೆಗೆ ಶೇ. 27.65 ರಷ್ಟು  ಮತದಾನವಾಗಿತ್ತು. ಬೆಳಗ್ಗೆ 9 ಗಂಟೆವರೆಗೆ ಶೇ. 11.7 ರಷ್ಟು ಮತದಾನವಾಗಿತ್ತು.

ಶಿರಸಿ ಕೆಎಚ್‌ಬಿ ಕಾಲೋನಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತದಾನ ಕೇಂದ್ರ ಸಂಸದ ಅನಂತ ಕುಮಾರ್ ಹೆಗಡೆ ಪತ್ನಿ ಶ್ರೀರೂಪ ಜತೆ ಬಂದು ಮತದಾನ ಮಾಡಿದರು.  ಬಳಿಕ ಮಾತನಾಡಿದ ಹೆಗಡೆ ಮತದಾನ ಮಾಡುವುದು ದೇಶದ ಜನರ ಕರ್ತವ್ಯ. ಹಾಗಾಗಿ ನಾನು ಒಬ್ಬ ಪ್ರಜೆ ಆಗಿ ಮತದಾನ ಮಾಡಿದ್ದೇನೆ ಎಂದರು. ಟಿಕೆಟ್ ಕೈ ತಪ್ಪಿದ ಬಳಿಕ ಸೈಲೆಂಟ್ ಆಗಿರುವ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದರು. ಮೋದಿ ಬಂದಾಗ ನೀವು ಯಾಕೆ ಕಾಣಿಸಿಕೊಳ್ಳಿಲ್ಲ? ಕಾಗೇರಿಗೆ ಯಾಕೆ ಬೆಂಬಲಿಸಿಲ್ಲ? ಎಂಬ ಪ್ರಶ್ನೆಗೆ ಧನ್ಯವಾದ ಎಂದು ಹೇಳಿದರು. ರಾಜಕೀಯ ಸಂಬಂಧಿತ ಯಾವುದೇ ಪ್ರಶ್ನೆಗೆ ಉತ್ತರಿಸದೆ  ತೆರಳಿದರು.

Latest Videos

undefined

ಉತ್ತರಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತದಾನ ಮಾಡಿದರು. ಪತ್ನಿ ಹಾಗೂ ಮೂವರು ಪುತ್ರಿಯರ ಜತೆ ಬಂದು ಶಿರಸಿ ತಾಲೂಕಿನ ಬರೂರ ಹೋಬಳಿಯ ಕುಳವೆ ಗ್ರಾಮದ ಜನತಾ ವಿದ್ಯಾಲಯದಲ್ಲಿ ಮತದಾನ ಮಾಡಿದರು. ಪತ್ನಿ ಭಾರತಿ, ಪುತ್ರಿಯರಾದ ಜಯಲಕ್ಷ್ಮಿ ,ರಾಜಲಕ್ಷ್ಮೀ, ಶ್ರೀಲಕ್ಷ್ಮಿ  ಜತೆ ಮತದಾನ ಮಾಡಿದ್ದು,  ಪುತ್ರಿ ಶ್ರೀಲಕ್ಷ್ಮಿಗೆ ಇದು ಮೊದಲ ಮತದಾನವಾಗಿದೆ. ಮಾಧ್ಯಮದ ಜತೆ ಮಾತನಾಡಿದ ಕಾಗೇರಿ ದಾಖಲೆಯ ಅಂತರದಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. 

ಕ್ಷೇತ್ರದಲ್ಲಿ ಒಟ್ಟು 1977 ಮತಗಟ್ಟೆಗಳಿದ್ದು, 6939 ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ. ಹಿರಿಯ ನಾಗರಿಕರನ್ನು ಮತಗಟ್ಟೆಗಳಿಗೆ ಕರೆತರಲು 684 ವಾಹನ ವ್ಯವಸ್ಥೆ ಮಾಡಲಾಗಿದೆ. ಸುಸೂತ್ರ, ಪಾರದರ್ಶಕ ಮತದಾನ ನಡೆಯಲು ನೆಟ್ವರ್ಕ್ ಇರುವ ಎಲ್ಲ 1015 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. 21 ಮತಗಟ್ಟೆಗಳಿಗೆ ವಿಡಿಯೋಗ್ರಾಫರ್‌ಗಳನ್ನು ನಿಯೋಜಿಸಲಾಗಿದೆ.

India General Elections 2024 Live: ರಾಜ್ಯದಲ್ಲಿ ಕೊನೇ ಹಂತದ ಮತದಾನ, ಹಕ್ಕು ಚಲಾಯಿಸಿದ ಮೋದಿ ...

ಒಟ್ಟು ಮತದಾರರು: 16,41,156
ಪುರುಷ ಮತದಾರರು :8,23,604
ಮಹಿಳಾ ಮತದಾರರು : 8,17,536
ಮೊದಲ ಬಾರಿ ಮತದಾನ: 42,404

click me!