
ಮಂಡ್ಯ (ಸೆ.02): ‘ನಾನು ಜೆಡಿಎಸ್ ಬಿಡುವುದಿಲ್ಲ, ನನಗೆ ಯಾರ ಬಗ್ಗೆಯೂ ಅಸಮಾಧಾನವಿಲ್ಲ. ಪಕ್ಷ ಕರೆ ನೀಡಿರುವ ಕಾವೇರಿ ಹೋರಾಟ ನನ್ನ ನೇತೃತ್ವದಲ್ಲೇ ನಡೆಯಲಿದೆ’ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ. ಕಾವೇರಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಜೆಡಿಎಸ್‌ನಲ್ಲಿ ಸಕ್ರಿಯವಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಕುಪೇಂದ್ರ ರೆಡ್ಡಿ ಹಾಗೂ ನಾನು ಜೊತೆಯಲ್ಲಿ ಕೊಡಗಿನಲ್ಲಿ ಕಾವೇರಿಗೆ ಪೂಜೆ ಸಲ್ಲಿಸಿ ಬಂದಿದ್ದೇವೆ. ಯಾವುದೇ ರಾಜಕೀಯ ಬೆಳವಣಿಗೆಗಳು ನಡೆದಿಲ್ಲ.
ಯಾವುದೇ ಊಹಾಪೋಹಗಳ ಕುರಿತು ಮಾತನಾಡುವುದು ಬೇಡ ಎಂದರು. ಸದ್ಯ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ನನ್ನ ಜಿಲ್ಲೆಗೆ ಯಾವುದೇ ಹಂತದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ. ಜೆಡಿಎಸ್‌ನಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಕರೆ ತರಲಾಗುವುದು. ಸಂಸದರೂ ಸೇರಿದಂತೆ ಎಲ್ಲರೂ ಪಕ್ಷಾತೀತವಾಗಿ ಈ ಹೋರಾಟದಲ್ಲಿ ಪಾಲ್ಗೊಂಡು ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ರಾಕಿ ಕಟ್ಟಿದ ಬಾಲಕಿ, ಬಾತ್‌ರೂಂಗೆ ಹೋಗಿ ಅತ್ತ ಬಾಲಕ: ಶಿಕ್ಷಕರು-ಪೋಷಕರ ನಡುವೆ ವಾಗ್ವಾದ
ಫ್ರೆಂಚ್ ರಾಕ್ಸ್ ಲಯನ್ಸ್ ಸಂಸ್ಥೆಯೂ 17ವರ್ಷದಿಂದ ಸಮಾಜ ಸೇವೆ: ಫ್ರೆಂಚ್ ರಾಕ್ಸ್ ಲಯನ್ಸ್ ಸಂಸ್ಥೆಯೂ 17 ವರ್ಷದಿಂದ ತಾಲೂಕಿನಲ್ಲಿ ಹಲವರು ಸಮಾಜ ಸೇವೆ ಕಾರ್ಯ ನಡೆಸಿಕೊಂಡು ಬರುತ್ತಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ತಾಲೂಕಿನ ಕೆನ್ನಾಳು ಗೇಟ್ ಬಳಿಯ ಸಂಪ್ರದಾಯ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ರಾತ್ರಿ ನಡೆದ ಫ್ರೆಂಚ್ ರಾಕ್ಸ್ ಲಯನ್ಸ್ ಕ್ಲಬ್ ನ 2023-24ನೇ ಸಾಲಿನ ಅಧ್ಯಕ್ಷರಾಗಿ ಟಿ.ಪಿ.ರೇವಣ್ಣ ಅವರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಯನ್ ಕೆ.ದೇವೇಗೌಡ ಕಳಕಳಿಯಿಂದಾಗಿ ಫ್ರೆಂಚ್ ರಾಕ್ಸ್ ಲಯನ್ಸ್ ಸಂಸ್ಥೆ ಆರಂಭಗೊಂಡಿತ್ತು. ಲಯನ್ಸ್ ಸಂಸ್ಥೆ ಸದಸ್ಯನಾಗಿ ಸಂಸ್ಥೆ ಜತೆಗೆಯಲ್ಲಿ ಹಲವಾರು ಸೇವಾ ಕಾರ್ಯ ನಡೆಸಿದ್ದೇವೆ. ಲಯನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುವ ಸದಸ್ಯರು ನಿಸ್ವಾರ್ಥ ಮನಸ್ಸಿನಿಂದ ಸೇವೆ ಸಲ್ಲಿದ್ದಾರೆ. ಸಂಸ್ಥೆ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ಟಿ.ಪಿ.ರೇವಣ್ಣ ಮತ್ತು ತಂಡದವರು ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಸಹಕಾರ ಪಡೆದುಕೊಂಡು ಮತ್ತಷ್ಟುಸೇವಾಕಾರ್ಯ ನಡೆಸಿ ಜನತೆಗೆ ಅನುಕೂಲಮಾಡಿಕೊಡಿ ಎಂದು ತಿಳಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಲಯನ್ಸ್ ಸಂಸ್ಥೆಗಳು ಪ್ರಪಂಚದ ಹಲವಾರ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದೆ ಎನ್ನುವುದನ್ನು ತಿಳಿದಿದ್ದೇನೆ. ಆದರೆ, ನಾನೆಂದು ಲಯನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡಿಲ್ಲ. ಇದೀಗ ನಾನು ಸಹ ಫ್ರೆಂಚ್‌ರಾಕ್ಸ್ ಲಯನ್ಸ್ ಸಂಸ್ಥೆಯ ಸದಸ್ಯನಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಎಲ್ಲಾ ಸೇವಾಕಾರ್ಯಗಳಿಗೂ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಲಯನ್ ಜಿಲ್ಲಾ ಮಾಜಿ ರಾಜ್ಯಪಾಲ ಕೆ.ದೇವೇಗೌಡ ಮಾತನಾಡಿ, 2004ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೇವಲ 3 ಲಯನ್ಸ್ ಸಂಸ್ಥೆಗಳು ಇದ್ದವು. ಇದೀಗ 40 ಲಯನ್ಸ್ ಸಂಸ್ಥೆಗಳು ಸ್ಥಾಪನೆಗೊಂಡಿವೆ. ಆರಂಭದಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಭಾಗದವರನ್ನು ಇಂಗ್ಲಿಷ್ ಬರಲ್ಲ ಎಂದು ಬೆಂಗಳೂರುನವರು ಅಣಕಿಸಿಕೊಳ್ಳುತ್ತಿದ್ದರು. ಇದೀಗ ನಮ್ಮ ಜಿಲ್ಲೆಯಲ್ಲಿ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ. ಮೂರು ರಾಜ್ಯಗಳಲ್ಲಿ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನಪಡೆದುಕೊಂಡಿದೆ ಎಂದು ಬಣ್ಣಿಸಿದರು.
ಶಿಕ್ಷಣ ಸಚಿವರೇ ಇತ್ತ ನೋಡಿ: 153 ಮಕ್ಕಳಿರುವ ಶಾಲೆಗೆ ಒಬ್ಬನೇ ಶಿಕ್ಷಕ..!
ಸಂಸ್ಥೆ ನೂತನ ಅಧ್ಯಕ್ಷ ಟಿ.ಪಿ.ರೇವಣ್ಣ ಐದು ಮಂದಿ ಮಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ತರಣೆ ಮಾಡಿದರು. ಟಿ.ಪಿ.ರೇವಣ್ಣ ಅಧ್ಯಕ್ಷರಾಗಿ, ಮಾಣಿಕ್ಯನಹಳ್ಳಿ ಅಶೋಕ್ ಕಾರ್ಯದರ್ಶಿಯಾಗಿ, ಆರ್.ದಿಲೀಪ್ ಕುಮಾರ್ ಖಜಾಂಚಿಯಾಗಿ, ಟಿ.ಪಿ.ಕರೀಗೌಡ, ಎಚ್.ಸಿ.ಮಹೇಶ್, ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಜಿಲ್ಲೆಯ 2ನೇ ರಾಜ್ಯಪಾಲ ಕೆ.ಎಲ್.ರಾಶೇಖರ್ ನೂತನ ತಂಡಕ್ಕೆ ಪ್ರತಿಜ್ಞಾಧಿ ಬೋಧಿಸಿದರು. ಎಸ್.ಮತಿದೇವ್ ಕುಮಾರ್ ನೂತನ ಸದಸ್ಯರಿಗೆ ಪ್ರತಿಜ್ಞಾಧಿ ಬೋಧಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.