ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ; ಜೆಡಿಎಸ್ ಶಾಸಕ ದೇವಾನಂದ ಚೌಹಾನ್ ಸ್ಪಷ್ಟನೆ

By Ravi Janekal  |  First Published Mar 23, 2023, 4:58 PM IST

ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೆ ಇಲ್ಲ ಈ ಹಿಂದೆ ಆಫರ್ ಗಳು ಬಂದಿದ್ದವು. ಈಗ ಅವೆಲ್ಲ ಮುಗಿದ ಅಧ್ಯಯ ಎಂದ ಡಿಎಸ್ ಶಾಸಕ ದೇವಾನಂದ ಚೌಹಾನ್ 


ವಿಜಯಪುರ (ಮಾ.23) : ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೆ ಇಲ್ಲ. ವಿಜಯಪುರದಲ್ಲಿ ಜೆಡಿಎಸ್ ಶಾಸಕ ದೇವಾನಂದ ಚೌಹಾನ್ ಹೇಳಿಕೆ.

ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನಗೆ ಈ ಹಿಂದೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಂದ ಆಫರ್ ಬಂದಿದ್ದವು. ಆದರೆ ಜೆಡಿಎಸ್ ನಲ್ಲಿ ಮುಂದುವರಿಯಲು ನಿರ್ಧಿರಿಸಿದ್ದೆ. ಈಗ ಆಫರ್‌ಗಳದ್ದು ಮುಗಿದ ಅಧ್ಯಾಯ ಎಂದ ಚೌಹಾನ್(MLA Devananda chauhan). ಕಾಂಗ್ರೆಸ್(Congress) ಗೆ ಹೋಗುವ ಯಾವುದೇ ಮೂಮೆಂಟ್ ಸದ್ಯಕ್ಕಿಲ್ಲ ಎಂದರು.

Latest Videos

undefined

ಹಿಂದೆ ಒಂದು ಹಂತ ಇತ್ತು. ಈಗ ಮುಗಿದು ಹೋಗಿದೆ. ಎಂದಿರುವ ಚೌಹಾಣ್, ಈಗ ಬೇರೆ ಪಕ್ಷಕ್ಕೆ ಹೋಗುವ ವಿಚಾರಗಳಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಚೌಹಾಣ್.

ಕಲಬುರಗಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ: 12 ವರ್ಷ ವನವಾಸದ ಬಳಿಕ ಸ್ವಂತ ಬಲದ ಮೇಲೆ ಅಧಿಕಾರಕ್ಕೆ!

ಹಿಂದೆ ಬಂದ ಆಹ್ವಾನಗಳ ಬಗ್ಗೆ ಈಗ ಮಾತನಾಡುವುದು ಬೇಡ. ಅದೊಂದು ಮುಗಿದ ಅಧ್ಯಾಯ ಎಂದ ಶಾಸಕ. ಸಿಂದಗಿ ಕ್ಷೇತ್ರದಲ್ಲಿ ಅನುಕಂಪದ ಅಲೆ ಇದೆ. ಶಿವಾನಂದ ಪಾಟೀಲ್ ಸೋಮಜಾಳ ನಿಧನ ಬಳಿಕ ಅವರ ಪತ್ನಿ ಪ್ರಚಾರದಲ್ಲಿ ತೊಡಗಿದ್ದಾರೆ. ವಿಜಯಪುರ ಜಿಲ್ಲೆಯ ಮೂರದಿಂದ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋಲುಂಟಾದ ಕ್ಷೇತ್ರಗಳಲ್ಲಿ ಈ ಬಾರಿ‌ ಜೆಡಿಎಸ್ ಗೆಲ್ಲಲಿದೆ. ದೇವರಹಿಪ್ಪರಗಿ, ಇಂಡಿ, ಬಸವನ ಬಾಗೇವಾಡಿ, ನಾಗಠಾಣ‌ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಲಿದೆ. ಹೆಚ್ಚಿನ ಸೀಟುಗಳು ಗೆಲ್ಲಲು ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದ ಶಾಸಕ ದೇವಾನಂದ ಚೌಹಾನ್

ಕಲಬುರಗಿ ಪಾಲಿಕೆ ಮೇಯರ್ ಎಲೆಕ್ಷನ್‌ಗೆ ಬರ್ತಾರಾ ಎಐಸಿಸಿ ಅಧ್ಯಕ್ಷ: ಕಾಂಗ್ರೆಸ್ ಗೆಲ್ಲಬೇಕಾದ್ರೆ ಖರ್ಗೆ ಬರಲೇಬೇಕು!

click me!