ಚುನಾವಣೆ ವೇಳೆ ಯಾವ ಸಾಹುಕಾರ ಹಾಗೂ ಗೌಡನ ಮಾತುಗಳನ್ನು ಕೇಳಬೇಡಿ. ನಮ್ಮ ಪಾರ್ಟಿಯಲ್ಲಿನ ಕೆಲ ಹುಳುಕಿನಿಂದ ಈ ಬಾರಿ ಅಧಿಕಾರ ಕಳೆದುಕೊಂಡಿದ್ದೇವೆ. ಮುಂದಿನ ದಿನದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ನಾನು ಸಿಎಂ ಆದರೆ ಒಂದೇ ಒಂದು ರುಪಾಯಿ ಲಂಚ ಪಡೆಯದೇ ಎಲ್ಲ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡುತ್ತೇನೆ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಮುಧೋಳ(ಸೆ.21): ಅಪ್ಪ-ಮಕ್ಕಳು ದುಡ್ಡು ನೀಡಿ ಮುಖ್ಯಮಂತ್ರಿಯಾಗಲು ಹವಣಿಸಿದರೆ ಜನಬಲದಿಂದ ನಾನು ಮುಖ್ಯಮಂತ್ರಿಯಾಗುವುದು ನಿಶ್ಚಿತ. ಆಗ ಅಧಿಕಾರಿಗಳಿಗೆ ಬೇರೆ ರೀತಿಯಲ್ಲಿಯೇ ಪಾಠ ಕಲಿಸುವ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಗುರುವಾರ ಸಂಜೆ ಶಿವಾಜಿ ಸರ್ಕಲ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಚುನಾವಣೆ ವೇಳೆ ಯಾವ ಸಾಹುಕಾರ ಹಾಗೂ ಗೌಡನ ಮಾತುಗಳನ್ನು ಕೇಳಬೇಡಿ. ನಮ್ಮ ಪಾರ್ಟಿಯಲ್ಲಿನ ಕೆಲ ಹುಳುಕಿನಿಂದ ಈ ಬಾರಿ ಅಧಿಕಾರ ಕಳೆದುಕೊಂಡಿದ್ದೇವೆ. ಮುಂದಿನ ದಿನದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ನಾನು ಸಿಎಂ ಆದರೆ ಒಂದೇ ಒಂದು ರುಪಾಯಿ ಲಂಚ ಪಡೆಯದೇ ಎಲ್ಲ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡುತ್ತೇನೆ. ದೇಶದ ಭದ್ರತೆಗಾಗಿ ಪೊಲೀಸ್ ಇಲಾಖೆಯನ್ನು ಭದ್ರತೆಗೊಳಿಸಲು ಒತ್ತು ನೀಡಬೇಕೆಂದು ಹೇಳುತ್ತಾ ಇದೇ ರೀತಿ ಹಿಂದುಗಳು ನಿರ್ಲಿಪ್ತವಾಗಿದ್ದರೆ, ಮುಂದಿನ ದಿನದಲ್ಲಿ ಹಿಂದುಗಳು ಜೀವನ ನಡೆಸುವುದು ಕಠಿಣವಾಗುತ್ತದೆ ಎಂದು ತಿಳಿಸಿದರು.
undefined
ಮೋದಿ, ಯೋಗಿ ಇರೋವರೆಗೂ ಬಾಲ ಬಿಚ್ಚಂಗಿಲ್ಲ: ಶಾಸಕ ಬಸನಗೌಡ ಯತ್ನಾಳ
ಮುಸ್ಲಿಮರು ಹಿಂದು ಸಮಾಜ ವಿರೋಧಿಗಳಾಗಿದ್ದು, ಭಾರತದಲ್ಲಿ ಪರಿಯಾ ಕಾನೂನು ಜಾರಿಗೊಳಿಸಲು ನಮ್ಮ ಸಂವಿಧಾನವನ್ನು ವಿರೋದಿಸುತ್ತಾರೆ. ಭಾರತದಲ್ಲಿನ ಮುಸ್ಲಿಮರು ಹಿಂದುಗಳ ಸರ್ಕಾರವನ್ನು ಒಪ್ಪಿಕೊಳ್ಳುವುದಿಲ್ಲ. ಎಂದು ಅಂಬೇಡ್ಕರ್ ಅವರು ತಮ್ಮ ಸಂವಿಧಾನದಲ್ಲಿ ಉಲ್ಲೇಖಿಸಿದ್ದಾರೆಂದು ಹೇಳಿದರು.
ಆರು ತಿಂಗಳು ಮಾತ್ರ ಈ ಸರ್ಕಾರ:
ಯಾದಗಿರಿಯಲ್ಲಿ ದಲಿತ ಪಿಎಸ್‌ಐಗೆ ಅಲ್ಲಿನ ಎಂಎಲ್‌ಎ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಮಾನಸಿಕ ಖಿನ್ನತೆಗೊಳ ಗಾದ ಪಿಎಸ್‌ಐ ಅವರು ಆತ್ಮಹತ್ಯೆ ಮಾಡಿಕೊಂಡರು. ಕಾಂಗ್ರೆಸ್ ಸರ್ಕಾರ ವರ್ಗಾವಣೆಗಾಗಿ ಪೊಲೀಸರಿಗೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ, ಅಧಿಕಾರ ಯಾವತ್ತೂ ಶಾಶ್ವತವಲ್ಲ, ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲವೆಂದು ಭವಿಷ್ಯ ನುಡಿದರು. ನಾಗಮಂಗಲದಲ್ಲಿ ಗಣೇಶ ಮೂರ್ತಿಯನ್ನು ಪೊಲೀಸ್ ವಾಹನದಲ್ಲಿ ಕೊಂಡೊಯುತ್ತಾರೆ. ನಿಮಗೆ ನಾಚಿಕೆಯಾಗುವ ದಿಲ್ಲವೇ ಎಂದು ವಾಗ್ದಾಳಿ ನಡೆಸಿದರು. ದೇಶವ ಅನ್ನ ತಿಂದು ಭಾರತದ ಕಾನೂನು ಗೌರವಿಸುವ ಪ್ರತಿಯೊಬ್ಬ ಮುಸ್ಲಿಮನನ್ನು ನಾನು ಗೌರವಿಸುತ್ತೇವೆ. ಮನೆಗೆ ದ್ರೋಹ ಬಗೆಯುವ ಮುಸ್ಲಿಮರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಸೈನಿಕರನ್ನು ಮಾದರಿಯನ್ನಾಗಿಸಿಕೊಳ್ಳಿ:
ದೇಶಕ್ಕೆ ಗಾಂಧೀಜಿ ಒಬ್ಬರಿಂದಲೇ ಸ್ವಾತಂತ್ರ್ಯ ಸಿಕ್ಕಿಲ್ಲ. ಹೊರತಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಯದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಕಿದೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಪ್ರವಾಹ ಉಂಟಾದರೆ 10 ಕೋಟಿ ಪರಿಹಾರ ನಿಧಿ ಕೊಡುತ್ತಾರೆ. ಅಮೀರ್ ಖಾನ್ ನಮ್ಮ ದೇಶದಲ್ಲಿ ಆತಂತ್ರ ಭಯ ಕಾಡುತ್ತಿದೆ ಎಂಬ ಹೇಳಿಕೆ ನೀಡುತ್ತಾರೆ. ಯುವಕರು ಅವರನ್ನು ರೋಲ್ ಮಾಡೆಲ್ ಮಾಡಿಕೊಳ್ಳದೆ ನಮ್ಮ ಸೈನಿಕರು, ಪೊಲೀಸರು, ಕಾರ್ಮಿಕರನ್ನು ರೋಲ್ ಮಾಡೆಲ್ ಆಗಿ ಮಾಡಿಕೊಳ್ಳಬೇಕು ಎಂದರು.
'ಬಿಜೆಪಿ ಕೆಲವರನ್ನು ಒದರಲು ಇಟ್ಟುಕೊಂಡಿದೆ..'; ಯತ್ನಾಳರನ್ನ ನಾಯಿಗೆ ಹೋಲಿಸಿದ ಸಚಿವ ತಿಮ್ಮಾಪುರ!
ಭಾವಿ ಸಿಎಂ ವಿರುದ್ಧ ಕೇಸ್ ಹಾಕಿದ್ದೇನೆ:
ಎರಡೂರು ವರ್ಷಗಳಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಆಗ ಹಿಂದುಪರ ಅಧಿಕಾರಿಗಳಿಗೆ ಹೆಚ್ಚಿನ ಸೌಲಭ್ಯ ನೀಡುತ್ತೇವೆ. ಮುಂದಿನ ಮುಖ್ಯಮಂತ್ರಿಯಾಗುವ ವ್ಯಕ್ತಿಯೊಬ್ಬನ ಬಗ್ಗೆ ಸಿಬಿಐ ಹಾಗೂ ಲೋಕಾಯುಕ್ತದಲ್ಲಿ ಕೇಸ್ ಹಾಕಿದ್ದೇನೆ. ಅದನ್ನು ಎದುರಿಸಲು ಸುಪ್ರೀಂ ಕೋರ್ಟ್ ನಲ್ಲಿ 17 ಜನ ವಕೀಲರನ್ನು ಬುಕ್ ಮಾಡಿಕೊಂಡಿದ್ದಾರೆ ಎಂದರು.
ಯತ್ನಾಳ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲು
ಮುಧೋಳ: ಸೆ.19ರಂದು ನಡೆದ ಮುಧೋಳ ನಗರದ ಜನತಾ ಪ್ಲಾಟಿನಲ್ಲಿ ಸ್ಥಾಪಿಸಲಾದ ಜನತಾ ರಾಜಾ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಶಿವಾಜಿ ಸರ್ಕಲ್‌ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಮುಧೋಳ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ ಎಂದು ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ. ಭಾಷಣದ ವೇಳೆ ಒಂದು ಸಮುದಾಯವನು ಗುರಿಯಾಗಿಸಿಕೊಂಡು ಅವರು ಮಾತನಾಡಿ, ಸೌಹಾರ್ದತೆ ಕದಡುವ ಯತ್ನ ಮಾಡಿದ್ದಾರೆ. ಹೀಗಾಗಿ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.