Karnataka Assembly election: ಕೋಲಾರದಿಂದಲೇ ಸ್ಪರ್ಧಿಸುತ್ತೇನೆ: ಸಿದ್ದರಾಮಯ್ಯ ಅಧಿಕೃತ ಘೋಷಣೆ

By Sathish Kumar KHFirst Published Jan 9, 2023, 3:14 PM IST
Highlights

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ. ಆದರೆ, ನಾವು ಕೆಲವು ಪ್ರಕ್ರಿಯೆಗಳನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. 

ಕೋಲಾರ (ಜ.09): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ. ಆದರೆ, ನಾವು ಕೆಲವು ಪ್ರಕ್ರಿಯೆಗಳನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. 

ಕೋಲಾರದ ಸಭೆಯಲ್ಲಿ ಮಾತಣಾಡಿದ ಅವರು, ನನ್ಮ ಸ್ನೇಹದಿಂದ ಅವರು ಮಾತನಾಡಿಲ್ಲ ಅಂತ ಕಾಣುತ್ತೆ. ಎಲ್ಲರೂ ನನ್ನನ್ನ ಕೋಲಾರ ವಿಧಾನಸಭಾ ಕ್ಷೇತ್ರದಿಂದ ನಿಲ್ಲಬೇಕು ಒತ್ತಾಯ ಮಾಡಿದ್ದಾರೆ.  ಮುನಿಯಪ್ಪ‌ ಆದಿಯಾಗಿ ಎಲ್ಲರೂ ಒತ್ತಾಯ ಮಾಡಿದ್ದಾರೆ. ಜನರ ಆಶೀರ್ವಾದ ಇಲ್ಲದೇ ಇದ್ದರೆ ರಾಜಕೀಯದಲ್ಲಿ ಮುಂದುವರೆಯುವುದು ಅಸಾಧ್ಯ. ಹಿಂದೆ ಕೋಲಾರ ಬಂದಾಗ, ದೇವಾಲಯ, ಚರ್ಚ್, ಮಸೀದಿ ಭೇಟಿ ಮಾಡಿದ್ದೆ. ಅಲ್ಲಿ ಗುರುಗಳಿಗೆ ನಮಸ್ಕರಿಸಿದ್ದೆ. ಕೆಲ ಊರುಗಳಿಗೂ ಹೋಗಿದ್ದೆ. ಅಲ್ಲಿ ಎಲ್ಲರೂ ನೀವು ಬರಬೇಕು ಅಂತ ಒತ್ತಾಯ ಮಾಡಿದ್ದರು. ಹೀಗಾಗಿ ಇಲ್ಲಿಯೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.

ಬಾದಾಮಿ ಹೆಲಿಕಾಪ್ಟರ್‌ ಕೊಡಿಸಲು ಮುಂದಾಗಿದ್ದಾರೆ: 
ಐದು ಬಾರಿ ಚಾಮುಂಡೇಶ್ವರಿ, ಎರಡು ಬಾರಿ ವರುಣ, ಒಂದು ಬಾದಾಮಿ ಕ್ಷೇತ್ರದಿಂದ ಗೆದ್ದಿದ್ದೇನೆ. ಈಗಲೂ ಬಾದಾಮಿ ಕ್ಷೇತ್ರದ ಶಾಸಕ. ಕೆಲವರು ಅಪಪ್ರಚಾರ ಮಾಡ್ತಿದ್ದಾರೆ. ಸಿದ್ದರಾಮಯ್ಯ ಗೆ ಕ್ಷೇತ್ರ ಇಲ್ಲ ಹುಡುಕಾಡ್ತಿದ್ದಾರೆ ಅಂತ ಹೇಳುತ್ತಿದದಾರೆ. ನನಗೆ ಈಗಲೂ ವರುಣಾದಿಂದ ನಿಲ್ಲಬೇಕು ಅಂತ ಒತ್ತಾಯ ಮಾಡ್ತಿದ್ದಾರೆ. ಬಾದಾಮಿ ಕ್ಷೇತ್ರ ದೂರ ಆಯ್ತು ಅಂದಾಗ ಅಲ್ಲಿನ ಜನ ನಿಮಗೆ ಒಂದು ಹೆಲಿಕಾಪ್ಟರ್ ತೆಗೆದುಕೊಡ್ತೀವಿ ಅಂತ ಹೇಳಿದ್ದರು. ಆದರೆ ಮುನಿಯಪ್ಪ‌ ಹೇಳಿದಂತೆ ನಾನು ಕ್ಷೇತ್ರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದರು.

ಸಿದ್ದರಾಮಯ್ಯ ಬ್ಯಾಲೆನ್ಸ್‌ ಕಳೆದುಕೊಂಡು ಏನೇನೋ ಮಾತನಾಡ್ತಿದ್ದಾರೆ: ಕೇಂದ್ರ ಸಚಿವ ಜೋಶಿ

ಕೋಲಾರದಲ್ಲಿ ಎಲ್ಲರೂ ಬೆಂಬಲ ಕೊಡ್ತಿದ್ದಾರೆ:
ಕೋಲಾರದ ವಿಧಾನಸಭಾ ಕ್ಷೇತ್ರದ ಜನ ಹಾಗೂ ಮುಖಂಡರು. ಶ್ರೀನಿವಾಸಗೌಡ ಜೆಡಿಎಸ್ ಎಂಎಲ್ಎ ಆಗಿದ್ದವರು. ಅವರು ಕೂಡ ಹೇಳ್ತಿದ್ದಾರೆ ನೀವು ಬಂದು ಕೋಲಾರದಲ್ಲಿ ನಿಂತರೆ ನಾನು ನಿಲ್ಲಲ್ಲ ಬೆಂಬಲ ಕೊಡ್ತೀನಿ ಅಂದಿದಾರೆ. ಮುನಿಯಪ್ಪ‌ ಅವರು ಏಳು ಬಾರಿ ಗೆದ್ದವರು. ರಮೇಶ್ ಕುಮಾರ್ ನನಗಿಂತ ಸೀನಿಯರ್. ನಜೀರ್ ಅಹಮದ್, ಸುದರ್ಶನ್, ಕೃಷ್ಣ ಬೈರೇಗೌಡ ಕೂಡ ಹೇಳ್ತಿದ್ದಾರೆ. ನೀವು ಬಂದು ಇಲ್ಲಿಗೆ ಬಂದು ನಿಂತುಕೊಳ್ಳಿ ಎಲ್ಲರೂ ಹೇಳ್ತಿದ್ದಾರೆ. ನೀವೆಲ್ಲಾ ಒಕ್ಕೊರಲಿನಿಂದ ಹೇಳ್ತಿದ್ದೀರಾ, ನಿಮ್ಮ ಪ್ರೀತಿಯನ್ನ ನಾನು ತಿರಸ್ಕಾರ ಮಾಡಲು ಸಾಧ್ಯವಿಲ್ಲ. ಇಷ್ಟೆಲ್ಲಾ ಹೇಳಿದ ಮೇಲೆ ನಾನು ಕೋಲಾರದಿಂದ ಮುಂದಿನ ಚುನಾವಣೆಯ ಅಭ್ಯರ್ಥಿ ಆಗಲು ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದರು. 

ಕೋಲಾರ ಜಿಲ್ಲೆ ಅಭಿವೃದ್ಧಿಗೆ ಬದ್ಧನಾಗಿದ್ದೇನೆ:
ಇದನ್ನ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾನು ಇಲ್ಲಿ ನಿಲ್ಲುವ ತೀರ್ಮಾನ ಮಾಡಿದ್ದೇನೆ. ಆದರೆ ಪ್ರೊಸೀಜರ್ ಫಾಲೋ ಮಾಡಬೇಕು. ಹಾಗಾಗಿ ಹೈಕಮಾಂಡ್ ಏನ್ ಹೇಳುತ್ತೆ ಅದರಂತೆ ನಡದುಕೊಳ್ಳಬೇಕು. ತಪ್ಪು ಸಂದೇಶ ಹೋಗಬಾರದು.  ಸಿದ್ದರಾಮಯ್ಯ ಗೆದ್ದರೆ ಇಲ್ಲಿಗೆ ಬರುವುದಿಲ್ಲ ಅಂತ ಬಂದು ಹೇಳ್ತಾರೆ. ಆದರೆ ವಾರಕ್ಕೊಮ್ಮೆ ನಾನು ಖಂಡಿತ ಬರುತ್ತೇನೆ. ನನ್ನನ್ನ ಮೀಟ್‌‌ ಮಾಡೋಕೆ ಯಾರ ನಾಯಕರ ಜೊತೆಗೆ ಬರಬೇಕಾದ ಅವಶ್ಯಕತೆ ಇಲ್ಲ. ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಡುತ್ತೇನೆ. ಕೋಲಾರ ಜನ ಮತ್ತು ಮುಖಂಡರ ಸಹಕಾರದಿಂದ ನಾನು ಶಾಸಕನಾಗುವ ವಿಶ್ವಾಸವಿದೆ.  

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಬಿಜೆಪಿ ಟೆಂಡರ್‌ ರದ್ದು: ಡಿಕೆಶಿ

ಎರಡು ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣ: 
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕಾಗಿ ಬಂದರೆ ನೀರಾವರಿ ಯೋಜನೆಗಳ ಜಾರಿಗೆ ಬದ್ದ.  ಎತ್ತಿನ ಹೊಳೆ ಯೋಜನೆಯನ್ನು ಮುಂದಿನ ಎರಡು ವರ್ಷದಲ್ಲಿ ಮುಗಿಸುತ್ತೇವೆ. ಕೆಸಿ ವ್ಯಾಲಿ ಯೋಜನೆ‌ ಜಾರಿಗೆ ತಂದಿದ್ದು ನಾವು. 13 ಸಾವಿರ ಕೊಟಿ ರೂ.ಗಳ ಎತ್ತಿನಹೊಳೆ ಯೋಜನೆಯನ್ನು ತಂದಿದ್ದು ನಾವು. ಆದರೆ ಮುಂದಿನ ಸರ್ಕಾರ ಯೋಜನೆ ಮುಂದುವರೆಸಿಲ್ಲ. ನಾವು ಅಧಿಕಾರಕ್ಕೆ ಬಂದ 2 ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆಯನ್ನು ಸಂಪೂರ್ಣವಾಗಿ ಮುಗಿಸುತ್ತೇವೆ. ಕೋಲಾರ ಜಿಲ್ಲೆಯನ್ನು ನಾವು ಯಾವಾಗಲೂ ಸಿಲ್ಕ್ ಮಿಲ್ಕ್ ಎಂದು‌ ಕರೆಯುತ್ತಿದ್ದೇವು. ಈ ಭಾಗದಲ್ಲಿ ಯಾವುದೇ ದೊಡ್ಡ ನದಿಗಳಿಲ್ಲ. ನಾವು ಅಧಿಕಾರಕ್ಕೆ ಬಂದ ತಕ್ಷಣ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಮಂಜೂರು ಮಾಡಿ ಕೊಡುತ್ತೇವೆ. ನುಡಿದಂತೆ ನಡೆದ ಸರ್ಕಾರ ನಮ್ಮದು. ನಾವು ಕೊಟ್ಟಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ತಿಳಿಸಿದರು.

click me!