ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದಾದರೆ ಬೆಂಬಲ ನೀಡುವುದರಲ್ಲಿ ನಾನೇ ಮೊದಲಿಗ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದರು.
ನಾಗಮಂಗಲ (ಡಿ.20): ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದಾದರೆ ಬೆಂಬಲ ನೀಡುವುದರಲ್ಲಿ ನಾನೇ ಮೊದಲಿಗ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದರು. ಪಟ್ಟಣದ ಟಿ.ಬಿ.ಬಡಾವಣೆಯ ತಮ್ಮ ಗೃಹಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ಬಾರಿ ನಾನು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರಿಂದ ವಿಶ್ರಾಂತಿಯಲ್ಲಿದ್ದು ಸಕ್ರೀಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುವುದು ಮುಖ್ಯ. ಜೆಡಿಎಸ್‌ನೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿದೆ. ಅಂತಿಮವಾಗಿ ಬಿಜೆಪಿ ಮತ್ತು ಜೆಡಿಎಸ್ ವರಿಷ್ಠರು ಯಾರನ್ನೇ ಅಭ್ಯರ್ಥಿ ಮಾಡಿದರೂ ಪಕ್ಷದ ತೀರ್ಮಾನದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು. ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನನ್ನನ್ನು ಪರಿಗಣಿಸಬಹುದು ಎಂಬ ಆಶಾಭಾವನೆಯಲ್ಲಿದ್ದೇನೆ. ಆಗಾದ್ಯೂ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾದರೆ ಖಂಡಿತವಾಗಿಯೂ ಮೊದಲ ಬೆಂಬಲ ನನ್ನದೇ ಆಗಿರುತ್ತದೆ ಎಂದರು.
ಕನ್ನಡಿಗರು ಪ್ರಧಾನಿ ಆಗ್ತಾರೆ ಅಂದ್ರೆ ಬೇಡ ಅಂತೀರಾ?: ಸಚಿವ ಪ್ರಿಯಾಂಕ ಖರ್ಗೆ
ನಾನು ಮತ್ತು ಎಚ್.ಡಿ.ಕುಮಾರಸ್ವಾಮಿ ಚೆನ್ನಾಗಿದ್ದೇವೆ. ಎಚ್ಡಿಕೆ ಪುತ್ರ ಸ್ಪರ್ಧಿಸಿದರೆ ನನ್ನ ತಕರಾರಿಲ್ಲ. ಆದರೆ, ಕಳೆದ ಬಾರಿ ನನಗೆ ಕೇವಲ 6 ತಿಂಗಳಿಗೆ ಸಂಸದನಾಗಿದ್ದೇನೆ. ನನ್ನನ್ನು ಸಾಲಗಾರನನ್ನಾಗಿ ಮಾಡಲಾಗಿದೆ. ಎಚ್ಡಿಕೆ ದೊಡ್ಡ ಮನಸ್ಸು ಮಾಡಿ ನನಗೆ ಅವಕಾಶ ನೀಡಲಿ ಎಂದು ಕೋರಿದರು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಕೇವಲ ಮುಂದಿನ ಲೋಕಸಭಾ ಚುನಾವಣೆಗಷ್ಟೇ ಸೀಮಿತವಾಗಬಾರದು. ತಾಪಂ, ಜಿಪಂ, ಗ್ರಾಪಂ ಮತ್ತು ಸ್ಥಳೀಯ ಚುನಾವಣೆಗಳೂ ಸೇರಿದಂತೆ ಮುಂದಿನ 2028 ವಿಧಾನಸಭಾ ಚುನಾವಣೆಯಲ್ಲೂ ಈ ಮೈತ್ರಿ ಮುಂದುವರೆಬೇಕು. ಆಗ ಮಾತ್ರ ಮೈತ್ರಿಗೆ ನಿಜವಾದ ಅರ್ಥ ಸಿಗುತ್ತದೆ ಎಂದರು.
ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ ನಾನಲ್ಲ: ಮಾಜಿ ಸಿಎಂ ಬೊಮ್ಮಾಯಿ
ಕಳೆದ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮುಂಚಿತವಾಗಿ ನಾನು ಕ್ಷೇತ್ರ ಪ್ರವಾಸ ಆರಂಭಿಸಿ ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ಮಾಡಿದೆ. ಹಲವು ಕಾರಣಗಳಿಂದ ಕಳೆದ ಚುನಾವಣೆಯಲ್ಲಿ ನನ್ನ ಧರ್ಮಪತ್ನಿ ಸೋತಿದ್ದಾರೆ. ಆದರೂ ಕ್ಷೇತ್ರದಲ್ಲಿದ್ದು ಇನ್ನು ನಾಲ್ಕೂವರೆ ವರ್ಷ ಜನರ ಸೇವೆ ಆರಂಭಿಸುತ್ತೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಸದಸ್ಯ ಹೇಮರಾಜ್, ಮುಖಂಡರಾದ ಬಿ.ವಿ.ಸತ್ಯನ್, ಬಿದರಕೆರೆ ಮಂಜೇಗೌಡ, ಪಾಳ್ಯ ರಘು ಸೋಮಶೇಖರ್, ತೊಳಲಿ ಕೃಷ್ಣಮೂರ್ತಿ, ಶೇಖ್‌ಅಹ್ಮದ್, ಸಿ.ಜೆ. ಕುಮಾರ್ ಇದ್ದರು.