ಯಾರೋ ಒಬ್ಬರು ಕನ್ನಡಿಗರು ಪ್ರಧಾನಿ ಆಗ್ತಾರೆ ಅಂದ್ರೆ ಬೇಡ ಅಂತೀರಾ? ಆದರೆ ಒಳ್ಳೆಯದು. ಈಗ ನಮ್ಮ ಮುಂದೆ ಇರುವ ಪ್ರಾಕ್ಟಿಕಲ್ ಸವಾಲುಗಳು ಏನು ಎನ್ನುವುದು ಗಮನಿಸಬೇಕು ಎಂದು ಪ್ರಧಾನಿ ಅಭ್ಯರ್ಥಿಯಾಗಿ AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಲಬುರಗಿ (ಡಿ.20): ಯಾರೋ ಒಬ್ಬರು ಕನ್ನಡಿಗರು ಪ್ರಧಾನಿ ಆಗ್ತಾರೆ ಅಂದ್ರೆ ಬೇಡ ಅಂತೀರಾ ? ಆದರೆ ಒಳ್ಳೆಯದು. ಈಗ ನಮ್ಮ ಮುಂದೆ ಇರುವ ಪ್ರಾಕ್ಟಿಕಲ್ ಸವಾಲುಗಳು ಏನು ಎನ್ನುವುದು ಗಮನಿಸಬೇಕು ಎಂದು ಪ್ರಧಾನಿ ಅಭ್ಯರ್ಥಿಯಾಗಿ AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ AICC ಅಧ್ಯಕ್ಷರು ಈ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.ನಮ್ಮ ಮುಂದೆ ಈಗಿರುವ ಸವಾಲು ಆದಷ್ಟು ಹೆಚ್ಚಿನ ಸಂಸದರನ್ನ ಆಯ್ಕೆ ಮಾಡಿ ದೆಹಲಿಗೆ ಕಳಿಸುವುದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮೆಜಾರಿಟಿ ತರಲು ಏನೇನು ಮಾಡಬೇಕು ಮಾಡುತ್ತೆವೆ ಎಂದು ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಯಾರೋ ಒಬ್ಬರು ಕನ್ನಡಿಗರು ಪ್ರಧಾನಿ ಆಗ್ತಾರೆ ಅಂದ್ರೆ ಬೇಡ ಅಂತೀರಾ ? ಆದರೆ ಒಳ್ಳೆಯದು. ಈಗ ನಮ್ಮ ಮುಂದೆ ಇರುವ ಪ್ರಾಕ್ಟಿಕಲ್ ಸವಾಲುಗಳು ಏನು ಎನ್ನುವುದು ಗಮನಿಸಬೇಕು. ಸುಮ್ಮನೆ ಹಗಲುಗನಸು ಕಾಣೋದಲ್ಲ. ನಾವು ಮೊದಲು ಕಾಂಗ್ರೆಸ್ ನಿಂದ 200- 250 ಸ್ಥಾನ ಗೆಲ್ಲಬೇಕು. ಮೈತ್ರಿ ಕೂಟ ಜೊತೆ ಒಗ್ಗೂಡಿ ಹೆಚ್ಚಿನ ಸ್ಥಾನ ಗೆಲ್ಲಬೇಕು. ಇವೆಲ್ಲವೂ ಮುಗಿದ ಮೇಲೆ ಮುಂದಿನ ಪ್ರಶ್ನೆಗಳು ಎಂದು ಪ್ರಿಯಾಂಕ ಖರ್ಗೆ ತಿಳಿಸಿದರು.
ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ ನಾನಲ್ಲ: ಮಾಜಿ ಸಿಎಂ ಬೊಮ್ಮಾಯಿ
ಇಂಡಿಯಾಕ್ಕೆ ಖರ್ಗೆ ಪ್ರಧಾನಿ ಅಭ್ಯರ್ಥಿ?: 2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ವಿಪಕ್ಷಗಳ ‘ಇಂಡಿಯಾ’ ಕೂಟ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಂತಹ ಘಟಾನುಘಟಿಯನ್ನು ಎದುರಿಸಲು ಖರ್ಗೆ ಅವರಂಥ ಹಿರಿಯ ನಾಯಕನೇ ಸೂಕ್ತ ಎಂಬ ನಿಲುವು ಇಂಡಿಯಾ ಕೂಟದಲ್ಲಿ ವ್ಯಕ್ತವಾಗಿದೆ. ಇಂಡಿಯಾ ಕೂಟದ ಸಭೆಯಲ್ಲಿ ಒಕ್ಕೂಟದಿಂದ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೂಚಿಸಿದ್ದಾರೆ.
ಎಂಥ ವಿಚಾರಕ್ಕೆ ಪ್ರತಿಭಟಿಸಬೇಕೆಂದೂ ಬಿಜೆಪಿಗೆ ಗೊತ್ತಿಲ್ಲ: ಸಚಿವ ಪರಮೇಶ್ವರ್
ಆದರೆ ಇದಕ್ಕೆ ಕಾದು ನೋಡುವ ತಂತ್ರ ಅನುಸರಿಸಲು ಮುಂದಾಗಿರುವ ಖರ್ಗೆ, ‘ಮೊದಲು ಚುನಾವಣೆಯಲ್ಲಿ ಗೆಲ್ಲೋಣ. ಮುಂದೆ ನೋಡೋಣ’ ಎಂದು ಹೇಳಿದ್ದಾರೆ. ಹೀಗಾಗಿ ಪ್ರಧಾನಿ ಅಭ್ಯರ್ಥಿ ಕುರಿತಾಗಿ ಸಭೆಯಲ್ಲಿ ಯಾವುದೇ ಅಂತಿಮ ನಿರ್ಣಯ ಹೊರಬಿದ್ದಿಲ್ಲ. ಆದರೂ ಸಹ ಇಂಡಿಯಾ ಕೂಟದಲ್ಲಿ ಇದೇ ಮೊದಲ ಬಾರಿ ಖರ್ಗೆ ಅವರ ಹೆಸರು ಪ್ರಧಾನಿ ಅಭ್ಯರ್ಥಿ ಹುದ್ದೆಗೆ ಪ್ರಸ್ತಾಪ ಆಗಿದ್ದು ಗಮನಾರ್ಹ. ಇನ್ನೂ ಹಲವು ಸಭೆಗಳನ್ನು ಇಂಡಿಯಾ ಕೂಟ ನಡೆಸಲಿದ್ದು, ಖರ್ಗೆ ಅವರ ಮನವೊಲಿಸುವ ಯತ್ನ ನಡೆಯಬಹುದು ಎಂದು ಹೇಳಲಾಗಿದೆ.