ಸಿಎಂ ಆಗು ಅಂದ್ರೆ ಯಾರಾದ್ರೂ ಒಲ್ಲೆ ಅಂತಾರಾ?: ಹೊಸ ಬಾಂಬ್ ಸಿಡಿಸಿದ ಸಚಿವ ದರ್ಶನಾಪುರ..!

Published : Sep 09, 2024, 11:37 AM IST
ಸಿಎಂ ಆಗು ಅಂದ್ರೆ ಯಾರಾದ್ರೂ ಒಲ್ಲೆ ಅಂತಾರಾ?: ಹೊಸ ಬಾಂಬ್ ಸಿಡಿಸಿದ ಸಚಿವ ದರ್ಶನಾಪುರ..!

ಸಾರಾಂಶ

ಹೈಕಮಾಂಡ್ ಬಯಸಿದ್ರೆ ನಾನು ಸಿಎಂ ಆಗುತ್ತೇನೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗು ಅಂದ್ರೆ ನಾನು ಸಿಎಂ ಆಗುತ್ತೇನೆ. ಸಿಎಂ ಆಗು ಅಂದ್ರೆ ಯಾರು ಒಲ್ಲೆ ಅಂತಾರೆ ಅಂತ ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ 

ಯಾದಗಿರಿ(ಸೆ.09):  ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರ ಜೋರಾಗಿ ನಡೆಯುತ್ತಿದೆ. ಏತನ್ಮಧ್ಯೆ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಅಚ್ಚರಿ ಹೇಳಿಕೆಯೊಂದನ್ನ ನೀಡಿದ್ದಾರೆ. 

ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶರಣಬಸಪ್ಪ ದರ್ಶನಾಪುರ ಅವರು, ಹೈಕಮಾಂಡ್ ಬಯಸಿದ್ರೆ ನಾನು ಸಿಎಂ ಆಗುತ್ತೇನೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗು ಅಂದ್ರೆ ನಾನು ಸಿಎಂ ಆಗುತ್ತೇನೆ. ಸಿಎಂ ಆಗು ಅಂದ್ರೆ ಯಾರು ಒಲ್ಲೆ ಅಂತಾರೆ ಅಂತ ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. 

ಜಲಜೀವನ ಮಿಷನ್, ಜಲಧಾರೆ ಪರಿಣಾಮಕಾರಿ ಅನುಷ್ಠಾನಗೊಳಿಸಿ: ಕೇಂದ್ರ ಸಚಿವ ಸೋಮಣ್ಣ

ಆದ್ರೆ ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ.  ಸಿಎಂ ಹುದ್ದೆ ಖಾಲಿಯಾದರೆ ಮಾತನಾಡುತ್ತೇನೆ. ಕಾಂಗ್ರೆಸ್ ಪಕ್ಷದ 136 ಜನ ಶಾಸಕರಿಗೂ ಸಿಎಂ ಆಗುವ ಯೋಗ್ಯತೆ ಇದೆ. ಕಾಂಗ್ರೆಸ್ ನ ಎಲ್ಲಾ 136 ಶಾಸಕರು ಮಂತ್ರಿ ಆಗುವ ಯೋಗ್ಯತೆ ಉಳ್ಳವರಾಗಿದ್ದಾರೆ. ಆದ್ರೆ ಅಲ್ಲಿ  ಅನಿವಾರ್ಯಯತೆಯಿಂದ 33 ಶಾಸಕರಿಗೆ ಸಚಿವ ಸ್ಥಾನ ಕೊಡಲಾಗುತ್ತದೆ. ಸಿಎಂ ಆಗುವರು ಒಬ್ಬರೇ 150 ಜನ ಸಿಎಂ ಆಕಾಂಕ್ಷಿ ಇದ್ರೂ ಒಬ್ಬರೇ ಸಿಎಂ ಆಗುತ್ತಾರೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ