ಗುಂಡ್ಲುಪೇಟೆ(ಸೆ.09): ಪುರಸಭೆ ನೂತನ ಅಧ್ಯಕ್ಷ ಕಿರಣ್ ಗೌಡ ಅತಿ ಕಿರಿಯ ವಯಸ್ಸಿಗೆ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಪುರಸಭೆಗೆ ಮೀಸಲು ಬಂದ ಬಳಿಕ ಬಿಸಿಎಂ (ಬಿ) ಮೀಸಲಿನಲ್ಲಿ ಒಕ್ಕಲಿಗ ಸಮಾಜದ ಮೊದಲ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಸದಸ್ಯರಾಗಿ ಕಾಂಗ್ರೆಸ್‌ನಿಂದ ಪುರಸಭೆ ಚುಕ್ಕಾಣಿ ಹಿಡಿದಿದ್ದಾರೆ. ೩೬ ವರ್ಷ ವಯಸ್ಸಿಗೆ ಪುರಸಭೆಗೆ ಕಿರಣ್ ಗೌಡ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಸದಸ್ಯರಾದ ಕಿರಣ್ ಗೌಡ ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಾಗಿದ್ದಾರೆ. ಇದು ಪುರಸಭೆ ಇತಿಹಾಸದಲ್ಲಿ ಪ್ರಥಮ.
೨೦೧೯ರ ಪುರಸಭೆ ಚುನಾವಣೆಗೂ ಮುನ್ನ ಇಲ್ಲಿನ ಪುರಸಭೆಗೆ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ)ಗೆ ಮೀಸಲಾದ ಕಾರಣ ಕಿರಣ್ ಗೌಡ ಅತೀ ಹೆಚ್ಚು ಹಣ ಖರ್ಚು ಮಾಡಿ ಗೆದ್ದರು. ಆದರೆ ಪುರಸಭೆ ಅಧ್ಯಕ್ಷ ಸ್ಥಾನದ ಮೀಸಲು ಬದಲಾದ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.
ಚಾಮರಾಜನಗರ: ಚಾಲನೆ ವೇಳೆ ಚಾಲಕನಿಗೆ ಮೂರ್ಛೆ, ವಿದ್ಯುತ್ ಕಂಬಕ್ಕೆ ಕೆಎಸ್‌ಆರ್‌ಟಸಿ ಬಸ್ ಡಿಕ್ಕಿ ..!
ಆದರೀಗ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ೨ನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಮತ್ತೆ ಬಿಸಿಎಂ (ಬಿ)ಗೆ ಬಂತು. ಬಿಜೆಪಿ ಪುರಸಭೆಯಲ್ಲಿ ಸ್ಪಷ್ಟ ಬಹುಮತವಿತ್ತು. ಬಿಜೆಪಿ ಸದಸ್ಯರಲ್ಲಿ ಇಬ್ಬರು ಬಿಜೆಪಿಗೆ ದೂರವಾದ ಹಿನ್ನೆಲೆ ಪುರಸಭೆಯಲ್ಲಿ ಪಕ್ಷೇತರ ಸದಸ್ಯರ ಬೆಂಬಲ ಪಡೆದು ಪುರಸಭೆ ಅಧ್ಯಕ್ಷ ಸ್ಥಾನ ಮೊದಲ ಅವಧಿಗೆ ಸಿಗಲ್ಲ ಎಂಬುದನ್ನು ಮನಗಂಡ ಕಿರಣ್ ಗೌಡ ಕಾಂಗ್ರೆಸ್ ಸೇರಿ ಅಧ್ಯಕ್ಷರಾಗಿದ್ದಾರೆ.
ಮೊದಲ ಬಾರಿಗೆ ಪುರಸಭೆಗೆ ಗೆದ್ದ ಬಿಜೆಪಿ ಸದಸ್ಯ, ಪುರಸಭೆಗೆ ಮೀಸಲು ಬಂದ ಬಳಿಕ ಒಕ್ಕಲಿಗ ಸಮಾಜದ ಮೊದಲ ಅಧ್ಯಕ್ಷ, ಪುರಸಭೆ ಇತಿಹಾಸದಲ್ಲಿ ಬಿಜೆಪೀಲಿ ಗೆದ್ದು ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಾದ ಮೊದಲಿಗರಾದ ಪುರಸಭೆ ನೂತನ ಅಧ್ಯಕ್ಷ ಕಿರಣ್ ಗೌಡ ಹೊರಹೊಮ್ಮಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.