ನಾನೂ ಮುಖ್ಯಮಂತ್ರಿ ಆಗಬೇಕೆಂದಿದ್ದೇನೆ ಆದ್ರೆ ಅವಕಾಶ ಸಿಗಬೇಕಲ್ವೇ: ಕಾಂಗ್ರೆಸ್ ಶಾಸಕ

By Suvarna News  |  First Published Feb 2, 2024, 4:38 PM IST

ನಾನೂ ಮುಖ್ಯಮಂತ್ರಿ ಆಗಬೇಕೆಂದಿದ್ದೇನೆ ಆದ್ರೆ ಅವಕಾಶ ಸಿಗಬೇಕಲ್ವೇ ಎಂದು ಕಾಂಗ್ರೆಸ್ ಶಾಸಕ ಮತ್ತು ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಅಧ್ಯಕ್ಷ ರಾಜು ಕಾಗೆ ಹೇಳಿಕೆ ನೀಡಿದ್ದಾರೆ.


ಹುಬ್ಬಳ್ಳಿ (ಫೆ.2): ನಾನೂ ಮುಖ್ಯಮಂತ್ರಿ ಆಗಬೇಕೆಂದಿದ್ದೇನೆ ಆದ್ರೆ ಅವಕಾಶ ಸಿಗಬೇಕಲ್ವೇ ಎಂದು ಕಾಂಗ್ರೆಸ್ ಶಾಸಕ ಮತ್ತು ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಅಧ್ಯಕ್ಷ ರಾಜು ಕಾಗೆ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದಿದೆ. ಎಲ್ಲ ಶಾಸಕರನ್ನು ಮಂತ್ರಿ ಮಾಡೋಕೆ, ಸಿಎಂ ಮಾಡೋಕೆ ಆಗಲ್ಲ. ಹಿರಿತನದ ಆಧಾರದ ಮೇಲೆ ನನ್ನನ್ನು ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ವಾಯುವ್ಯ ಸಾರಿಗೆ ನಷ್ಟದಲ್ಲಿದ್ದು, ಬೇರೆ ನಿಗಮ ಕೊಡಿ ಅನ್ನೋದು ತಪ್ಪಾಗುತ್ತೆ ಎಲ್ಲದಕ್ಕೂ ಅಸಮಾಧಾನ ತೋರಬಾರದು ಲಾಭದಾಯಕವಾದದ್ದನ್ನು ಕೊಡಿ ಅನ್ನಬಾರದು ಎಲ್ಲರೂ ನನಗೆ ಮಂತ್ರಿ ಮಾಡಿ ಅಂತ ಕೇಳೋದು ತಪ್ಪು. ಮಂತ್ರಿ ಆಗಲು, ಮುಖ್ಯಮಂತ್ರಿ ಆಗಲು ಅವಕಾಶ ಸಿಗಬೇಕಲ್ವೇ ? ಎಂದಿದ್ದಾರೆ.

ನಾಲ್ಕೈದು ಬಾರಿ ಶಾಸಕರಾದವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಬಿಜೆಪಿಯವರು ಸರ್ಕಾರ ಪತನ ಮಾಡೋ ಹಗಲು ಕನಸು ಕಾಣ್ತಿದಾರೆ. 135 ಶಾಸಕರಿದ್ದು, ಅದೆಲ್ಲಾ ಸಾಧ್ಯವಿಲ್ಲದ ಮಾತು ಎಲ್ಲದಕ್ಕೂ ವಿರೋಧ ಮಾಡೋದೇ ವಿರೋಧ ಪಕ್ಷದ ಕೆಲಸ. ವಿರೋಧ ಪಕ್ಷದವರು ನಮ್ಮನ್ನು ಆರತಿ ಮಾಡಿ ಒಳಗೆ ಕರೆದುಕೊಳ್ತಾರಾ? ಎಂದು ಹುಬ್ಬಳ್ಳಿಯಲ್ಲಿ ರಾಜು ಕಾಗೆ ಹೇಳಿಕೆ ನೀಡಿದ್ದಾರೆ.

Tap to resize

Latest Videos

click me!