ಪ್ರಧಾನಿಯಾಗಿ ಕಳೆದ ಹತ್ತು ವರ್ಷಗಳಲ್ಲಿ ಪ್ರಬಲ ಪ್ರತಿಪಕ್ಷವನ್ನು ಮಿಸ್ ಮಾಡಿಕೊಂಡಿದ್ದೇನೆ (ಪ್ರಬಲ ಪ್ರತಿಪಕ್ಷವನ್ನು ಕಳೆದುಕೊಂಡಿದ್ದೇನೆ), ಇದು ನನ್ನ ಮನಸ್ಸಿಗೆ ಬಹಳ ನೋವುಂಟು ಮಾಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿ: ಪ್ರಧಾನಿಯಾಗಿ ಕಳೆದ ಹತ್ತು ವರ್ಷಗಳಲ್ಲಿ ಪ್ರಬಲ ಪ್ರತಿಪಕ್ಷವನ್ನು ಮಿಸ್ ಮಾಡಿಕೊಂಡಿದ್ದೇನೆ (ಪ್ರಬಲ ಪ್ರತಿಪಕ್ಷವನ್ನು ಕಳೆದುಕೊಂಡಿದ್ದೇನೆ), ಇದು ನನ್ನ ಮನಸ್ಸಿಗೆ ಬಹಳ ನೋವುಂಟು ಮಾಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಿಎನ್‌ಎನ್ ನ್ಯೂಸ್-18ಗೆ ನೀಡಿದ ಸಂದರ್ಶನದಲ್ಲಿ, ‘ಪ್ರಧಾನಿಯಾಗಿ ತಾವು ಏನನ್ನು ಮಿಸ್ ಮಾಡಿಕೊಂಡಿದ್ದೀರಿ?’ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ‘ಪ್ರಜಾಪ್ರಭುತ್ವದಲ್ಲಿ ಪ್ರಬಲ ಪ್ರತಿಪಕ್ಷವಿರುವುದು ತೀರಾ ಅಗತ್ಯ. ಅವು ಒಂದು ಸರ್ಕಾರವನ್ನು ಕತ್ತಿಯ ಅಲುಗಿನ ಮೇಲೆ ನಡೆಯುವಂತೆ ಕಾಯುತ್ತಿರುತ್ತವೆ. ಆದರೆ ನಮ್ಮ ದೇಶದಲ್ಲಿ ಅತ್ಯುತ್ತಮ ಪ್ರತಿಭೆಗಳಿದ್ದರೂ ಪ್ರಬಲ ಪ್ರತಿಪಕ್ಷ ಇಲ್ಲದಿರುವುದನ್ನು ನಾನು ಪ್ರಧಾನಿಯಾಗಿ ಮಿಸ್ ಮಾಡಿಕೊಂಡಿದ್ದೇನೆ. ಇದು ನನ್ನ ಮನಸ್ಸಿಗೆ ಬಹಳ ನೋವುಂಟು ಮಾಡಿದೆ’ ಎಂದು ತಿಳಿಸಿದರು.
ಮುಸ್ಲಿಂ ಮತ ಬ್ಯಾಂಕ್‌ಗೆ ಕಾಂಗ್ರೆಸ್ ಮುಜ್ರಾ ನೃತ್ಯ ಮಾಡುತ್ತಿದೆ : ಮೋದಿ ವ್ಯಂಗ್ಯ ಏನಿದು ಮುಜ್ರಾ ನೃತ್ಯ?
ಪ್ರಣಬ್ ಸಲಹೆ:
ಇದೇ ವೇಳೆ, ‘ಪ್ರತಿಪಕ್ಷದವರಿಂದ ಸಲಹೆ ಪಡೆಯುತ್ತಿದ್ದಿರಾ?’ ಎಂದು ಪ್ರಶ್ನಿಸಿದ್ದಕ್ಕೆ, ‘ನಾನು ಪ್ರಧಾನಿಯಾದ ಬಳಿಕ ರಾಷ್ಟ್ರಪತಿ ಆಗಿದ್ದ ಪ್ರಣಬ್ ಮುಖರ್ಜಿ ಅವರಿಂದ ಅವರು ಇರುವವರೆಗೆ ಸಲಹೆ ಪಡೆಯುತ್ತಿದ್ದೆ. ಬಳಿಕ ನಾನು ಪ್ರತಿಪಕ್ಷದವರಿಂದ ಸಲಹೆ ಪಡೆದಿಲ್ಲ. ನಾನು ಪಕ್ಷದ ಪ್ರತಿನಿಧಿಗಳು ಮತ್ತು ಗುಜರಾತ್ ಮುಖ್ಯಮಂತ್ರಿಯಾದಾಗಿನ ಅನುಭವವೇ ನನ್ನನ್ನು ಮುನ್ನಡೆಸಿವೆ’ ಎಂದು ತಿಳಿಸಿದರು.
ಪ್ರಧಾನಿಗಳು ಜನ ಸಾಮಾನ್ಯರ ದೂತರೇ ಹೊರತು ದೇವದೂತರಲ್ಲ: ಎಚ್ ಸಿ ಮಹದೇವಪ್ಪ
ತಾಳ್ಮೆ ಅಗತ್ಯ:
ಇದೇ ವೇಳೆ ತಾಳ್ಮೆಯ ಅಗತ್ಯತೆಯನ್ನು ತಿಳಿಸಿದ ಅವರು, ‘ಕೆಲವು ನಿಯತಕಾಲಿಕೆಗಳು ನನ್ನನ್ನು ರಾಕ್ಷಸನ ರೀತಿ ತಮ್ಮ ಮುಖಪುಟದಲ್ಲಿ ಬಿಂಬಿಸುತ್ತಿದ್ದವು. ಆದರೆ ನಾನು ಧೃತಿಗೆಡಲಿಲ್ಲ. ರಾಕ್ಷಸನ ಚಿತ್ರ ಹಾಕಿದವರೇ ಈಗ ನನ್ನ ನಗುಮುಖದ ಚಿತ್ರ ಹಾಕುತ್ತಿದ್ದಾರೆ’ ಎಂದು ಚಟಾಕಿ ಹಾರಿಸಿದರು.