
ಡೇಹ್ರಿ/ ಬಿಕ್ರಮ್ (ಬಿಹಾರ): ‘ವಿಪಕ್ಷಗಳು ದಲಿತ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ನೀಡಲು ನಾನು ನನ್ನ ಜೀವ ಇರುವವರೆಗೂ ಬಿಡುವುದಿಲ್ಲ’ ಎಂದು ಪುನಃ ಗುಡುಗಿರುವ ಪ್ರಧಾನಿ ನರೇಂದ್ರ ಮೋದಿ, ‘ಇಂಡಿಯಾ ಕೂಟವು ಮುಸ್ಲಿಮರ ಮತ ಪಡೆಯುವುದಕ್ಕೆ ಗುಲಾಮಗಿರಿ ಮತ್ತು ಮುಜ್ರಾ ನೃತ್ಯವನ್ನು ಮಾಡುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಬಿಹಾರದಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ,‘ಭಯೋತ್ಪಾದನೆ. ಭ್ರಷ್ಟಾಚಾರ ತೊಡೆದು ಹಾಕಲು ನಾನು ಯಾವುದೇ ಭಯವಿಲ್ಲದೇ ಕೆಲಸ ಮಾಡಿದ್ದನ್ನು ನೋಡಿ, ಪ್ರತಿಪಕ್ಷಗಳು ಹೆದರಿವೆ. ಸಾಮಾಜಿಕ ನ್ಯಾಯಕ್ಕೆ ಹೊಸ ರೂಪ ಕೊಟ್ಟ ಬಿಹಾರ ನೆಲದಲ್ಲಿ ನಿಂತು ಹೇಳುತ್ತಿದ್ದೇನೆ ವಿಪಕ್ಷಗಳು ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಮತವನ್ನು ಕಸಿಯಲು ಬಿಡುವುದಿಲ್ಲ. ಅದನ್ನು ಮುಸ್ಲಿಮರಿಗೆ ನೀಡಲು ಬಿಡಲ್ಲ’ ಎಂದು ಗುಡುಗಿದರು. ಇದೇ ವೇಳೆ, ‘ಪ್ರತಿಪಕ್ಷಗಳು ಮತಬ್ಯಾಂಕ್ ಮೆಚ್ಚಿಸಲು ಮುಜ್ರಾ ನೃತ್ಯ ಮಾಡುತ್ತಾರೆ. ಗುಲಾಮಗಿರಿಯನ್ನೂ ಮಾಡುತ್ತಾರೆ’ಎಂದು ವ್ಯಂಗ್ಯವಾಡಿದರು.
ಪ್ರಧಾನಿಗಳು ಜನ ಸಾಮಾನ್ಯರ ದೂತರೇ ಹೊರತು ದೇವದೂತರಲ್ಲ: ಎಚ್ ಸಿ ಮಹದೇವಪ್ಪ
ಇದೇ ಸಂದರ್ಭದಲ್ಲಿ ಆರ್‌ಜೆಡಿಗೂ ಟಾಂಗ್ ನೀಡಿದ ಪ್ರಧಾನಿ ,‘ಆರ್‌ಜೆಡಿ ಕಂದೀಲು ಹಿಡಿದು (ಪಕ್ಷದ ಚಿಹ್ನೆ) ಮುಜ್ರಾ ನೃತ್ಯವನ್ನು ಮಾಡುತ್ತದೆ. ಇದು ವಿರೋಧ ಪಕ್ಷ ವೋಟ್ ಜಿಹಾದಿಯಲ್ಲಿ ತೊಡಗಿಕೊಂಡಿದೆ ಎನ್ನುವುದನ್ನು ತೋರಿಸುತ್ತದೆ. ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸಬೇಕು ಎಂದು ವಿಪಕ್ಷ ನಿರ್ಧರಿಸಿದೆ’ ಎಂದು ಆರೋಪಿಸಿದರು.
‘ಕಾಂಗ್ರೆಸ್, ಆರ್‌ಜೆಡಿ,ಎನ್‌ಸಿಪಿ, ಸಮಾಜವಾದಿ, ಮತ್ತು ಇತರರು ತಲಾ 1 ವರ್ಷದ ಪ್ರಧಾನಿ ಹುದ್ದೆಯ ಬಯಕೆಯಲ್ಲಿವೆ. ಜೂ.4ಕಕ್ಕೆ ಫಲಿತಾಂಶ ಬಂದ ಬಳಿಕ ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷದವರು ಪರಸ್ಪರ ಬಟ್ಟೆ ಹರಿದುಕೊಂಡು ಕಿತ್ತಾಡುತ್ತಾರೆ. ಶಾಹಿ ಪರಿವಾರ (ಗಾಂಧಿ ಕುಟುಂಬ) ಸೋಲಿನ ಸಂಪೂರ್ಣ ಹೊಣೆಯನ್ನು ಮಲ್ಲಿಕಾರ್ಜುನ ಖರ್ಗೆ ಮೇಲೆ ಹೊರಸಿ, ವಿದೇಶಕ್ಕೆ ತೆರಳಲಿದೆ’ ಎಂದು ಟೀಕಿಸಿದರು.
ಹುಲಿ ಯೋಜನೆ ಕಾರ್ಯಕ್ರಮಕ್ಕೆ ಮೋದಿ ಮೈಸೂರು ಭೇಟಿ; ₹3.3 ಕೋಟಿ ಬಿಲ್ ಬಾಕಿ!
ಏನಿದು ಮುಜ್ರಾ ನೃತ್ಯ?
ಇದು ಮುಘಲರ ಕಾಲದಲ್ಲಿ ಆರಂಭವಾದ ನೃತ್ಯ. ಆಗ ಅರಸರು ಹಾಗೂ ಮಂತ್ರಿಗಳ ಮನತಣಿಸಲು ಹುಡುಗಿಯರು ಸಭಾಂಗಣದಲ್ಲಿ ನೃತ್ಯ ಮಾಡುತ್ತಿದ್ದರು. ಈಗ ಕ್ಯಾಬರೆಗಳು, ಡಾನ್ಸ್ ಬಾರ್‌ಗಳು, ಬ್ಯಾಚುಲರ್ ಪಾರ್ಟಿಗಳಲ್ಲಿ ಶ್ರೀಮಂತರು ಹಾಗೂ ರಸಿಕರ ಸಮ್ಮುಖದಲ್ಲಿ ಹುಡುಗಿಯರು ಅಶ್ಲೀಲ ನೃತ್ಯ ಮಾಡುತ್ತಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.