ಕಲುಷಿತ ರಾಜಕಾರಣದಿಂದ ಬೇಸತ್ತು ಬಿಜೆಪಿ ಸೇರಿದ್ದೇನೆ ಹೊರತು ಟಿಕೆಟ್‌ಗಾಗಿ ಅಲ್ಲ: ಎ.ಟಿ.ರಾಮಸ್ವಾಮಿ

By Kannadaprabha News  |  First Published Apr 13, 2023, 3:20 AM IST

ನಾನು ಟಿಕೆಟ್‌ ಅಪೇಕ್ಷಿತನಲ್ಲ ಎನ್ನುವುದನ್ನು ಈ ಹಿಂದೆ ಸಾಕಷ್ಟುಬಾರಿ ಹೇಳಿದ್ದೇನೆ. ಹಾಗಾಗಿ ಈ ಬಾರಿ ಟಿಕೆಟ್‌ ಕೈ ತಪ್ಪಿದ್ದರಿಂದ ರಾಮಸ್ವಾಮಿಯವರು ಅಸಮಾಧಾನಗೊಂಡಿದ್ದಾರೆ ಎನ್ನುವುದು ಸುಳ್ಳು. 


ಹಾಸನ (ಏ.13): ನಾನು ಟಿಕೆಟ್‌ ಅಪೇಕ್ಷಿತನಲ್ಲ ಎನ್ನುವುದನ್ನು ಈ ಹಿಂದೆ ಸಾಕಷ್ಟುಬಾರಿ ಹೇಳಿದ್ದೇನೆ. ಹಾಗಾಗಿ ಈ ಬಾರಿ ಟಿಕೆಟ್‌ ಕೈ ತಪ್ಪಿದ್ದರಿಂದ ರಾಮಸ್ವಾಮಿಯವರು ಅಸಮಾಧಾನಗೊಂಡಿದ್ದಾರೆ ಎನ್ನುವುದು ಸುಳ್ಳು. ಕಲುಷಿತ ರಾಜಕಾರಣದಿಂದ ಬೇಸತ್ತು ಮತ್ತು ಕಾರ್ಯಕರ್ತರನ್ನು ಉಳಿಸಿಕೊಳ್ಳಲಿಕ್ಕಾಗಿ ಬಿಜೆಪಿ ಸೇರಿದ್ದೇನೆ ಹೊರತು ಟಿಕೆಟ್‌ಗಾಗಿ ಅಲ್ಲ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂದು ದಿನಗಳ ಹಿಂದಷ್ಟೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಪ್ರಕಟವಾಗಿದೆ. ನಾನು ದೆಹಲಿ, ಬೆಂಗಳೂರು, ಹಾಸನದಲ್ಲಿ ಬಿಜೆಪಿ ಸೇರಿರುವುದು ಯಾವುದೇ ಅಧಿಕಾರದ ಆಸೆಗಾಗಿ ಅಲ್ಲ. 

ನಾನು ಟಿಕೇಟ್‌ ಅಪೇಕ್ಷಿತನೂ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆನು. ವರಿಷ್ಠರು ಕೂಡ ಬಹಳ ಒತ್ತಡ ಹಾಕಿ ಅಭ್ಯರ್ಥಿ ಆಗಲು ಹೇಳಿದ್ದರು. ನಾನು ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದೆ. ನಾನು ಕೊಟ್ಟಮಾತಿಗೆ ಹಿಂದೆ ಸರಿದಿಲ್ಲ. ಕೊಟ್ಟಮಾತಿನಂತೆ ನಡೆದುಕೊಂಡಿದ್ದೇನೆ. ಎ.ಟಿ. ರಾಮಸ್ವಾಮಿ ಅವರು ಬಿಜೆಪಿಗೆ ಹೋದರೂ ಟಿಕೇಟ್‌ ಸಿಗಲಿಲ್ಲ ಎಂದು ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ನಾನು ಆಡಿದ ಮಾತಿನಂತೆ ನಡೆದುಕೊಂಡಿದ್ದೇನೆ. ನನ್ನ ನಡೆಯಿಂದ ಯಾರಿಗಾದರು ಬೇಜಾರಾಗಿದ್ದರೆ ಕ್ಷಮಿಸಿ ಎಂದರು. ಪ್ರಸ್ತುತದ ರಾಜಕಾರಣದಲ್ಲಿ ಮೌಲ್ಯ ಇಲ್ಲವಾಗಿದೆ. ಮೌಲ್ಯ ಉಳಿಸಬೇಕಾಗಿದೆ.  ರಾಜಕೀಯ ಈಗ ವ್ಯಾಪಾರ ಆಗಿದೆ. ಕೆಲವರು ಐವತ್ತು ಕೋಟಿವರೆಗು ಬಂಡವಾಳ ಹೂಡಲು ಹೊರಟಿದ್ದಾರೆ. 

Latest Videos

undefined

ಬಿಜೆಪಿಯಲ್ಲಿ ಕಳ್ಳ ಸಾಗಾಣಿಕೆದಾರರಿಗೆ ಟಿಕೆಟ್: ಎಚ್.ಡಿ.‌ಕುಮಾರಸ್ವಾಮಿ

ಬಂಡವಾಳ ಹೂಡಿದ ಮೇಲೆ ಅದನ್ನು ಲಾಭದ ಸಮೇತ ವಾಪಸ್‌ ಕೂಡ ಪಡೆಯಬೇಕಾಗುತ್ತದೆ. ಇಂತಹ ರಾಜಕೀಯ ವ್ಯವಸ್ಥೆ ಮೊದಲು ಬದಲಾಗಬೇಕು. ಚುನಾವಣಾ ಆಯೋಗ ಕೂಡ ಕಟ್ಟು ನಿಟ್ಟಿನ ಕ್ರಮ ವಹಿಸಬೇಕಿದೆ. ಇದನ್ನ ಮಾಡದೆ ಹೋದರೆ ಪ್ರಜಾಪ್ರಭುತ್ವ ಬಲಾಢ್ಯರ ಪಾಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಚುನಾವಣೆಯಲ್ಲಿ ಎರಡು ಸಿಸಿ ಕೆಲಸ ಮಾಡುತ್ತದೆ. ಜಾತಿ ಮತ್ತು ಹಣಗಳ ಎರಡು ಪ್ರಭಾವ ಬೀರದಂತೆ ಮಾಡಿದರೆ ಪ್ರಜಾಪ್ರಭುತ್ವ ಮತ್ತಷ್ಟುಎತ್ತರಕ್ಕೆ ಹೋಗುತ್ತದೆ.  ನನ್ನ ಅಭಿಮಾನಿಗಳು ಮತ್ತು ಬೆಂಬಲಿಗರು ಯಾರು ಕೂಡ ಅಪಾರ್ಥ ಮಾಡಿಕೊಳ್ಳಬೇಡಿ. ನನಗೆ ಟಿಕೆಟ್‌ ಸಿಗಲಿಲ್ಲ ಎಂದು ನಡೆಯುತ್ತಿರೊ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಇದೆ ವೇಳೆ ಮನವಿ ಮಾಡಿದರು. 

ಬಿಜೆಪಿಯಿಂದ ಟಿಕೆಟ್ ದೊರೆತ ಸಂತೋಷದ ಹೊತ್ತಲ್ಲೇ ಭಟ್ಕಳ ಶಾಸಕ ಸುನೀಲ್ ನಾಯ್ಕ್‌ಗೆ ಪಿತೃ ವಿಯೋಗ!

ನನಗೆ ಮಾಜಿ ಸಿಎಂ ಯಡಿಯೂರಪ್ಪ, ಶೋಭ ಕರಂದ್ಲಾಜೆ ಅವರೆಲ್ಲಾ ನನಗೆ ಟಿಕೆಟ್‌ ಕೊಡುತ್ತೇವೆ ಎಂದು ಹೇಳಿ ಸ್ಪರ್ಧೆ ಮಾಡೋಕೆ ಹೇಳಿದ್ದರು. ಕೆಲವರು ನನಗೆ ಕೊಡಿ ಮಕ್ಕಳಿಗೆ ಟಿಕೆಟ್‌ ಕೊಡಿ ಎಂದು ಕೇಳ್ತಾರೆ. ನಿಮ್ಮದು ವಿಶೇಷ ಎಂದೇ ಅವರು ಹೇಳಿದ್ದರು. ನಾನು ರಾಜಕೀಯದಿಂದ ತಟಸ್ಥನಾಗಿರಬೇಕು ಎನ್ನೋ ಭಾವನೆ ಇತ್ತು. ಆದರೆ ನನ್ನ ಹಿತೈಷಿಗಳು ಹಾಗೂ ಬೆಂಬಲಿಗರ ರಕ್ಷಣೆಗಾಗಿ ಕೆಲಸ ಮಾಡಲು ಒಂದು ಪಕ್ಷ ಸೇರಲು ರೆಡಿಯಾಗಿದ್ದೇನೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!