ವಾಲ್ಮೀಕಿ ನಿಗಮದಲ್ಲಿ ನೀಚ ಕೆಲಸ ಮಾಡಿಲ್ಲ: ಕಣ್ಣೀರಿಟ್ಟ ನಾಗೇಂದ್ರ

By Kannadaprabha NewsFirst Published Oct 18, 2024, 9:52 AM IST
Highlights

ವಾಲ್ಮೀಕಿ ಸಮುದಾಯದಲ್ಲಿ ಹುಟ್ಟಿದ ನಾನು, ನಿಗಮದಲ್ಲಿ ಹಗರಣ ಮಾಡುವಂತಹ ನೀಚ ಕೆಲಸಕ್ಕೆ ಕೈ ಹಾಕಿಲ್ಲ ಬಿ.ನಾಗೇಂದ್ರ ಕಣ್ಣಿರು ಹಾಕಿದ್ದಾರೆ. ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಹಗರಣದಿಂದಾದ ಜೈಲುವಾಸ ನೆನೆದು ವೇದಿಕೆಯಲ್ಲಿಯೇ ಬಿಕ್ಕಿಬಿಕ್ಕಿ ಅತ್ತರು. 

ಬಳ್ಳಾರಿ (ಅ.18): ವಾಲ್ಮೀಕಿ ಸಮುದಾಯದಲ್ಲಿ ಹುಟ್ಟಿದ ನಾನು, ನಿಗಮದಲ್ಲಿ ಹಗರಣ ಮಾಡುವಂತಹ ನೀಚ ಕೆಲಸಕ್ಕೆ ಕೈ ಹಾಕಿಲ್ಲ ಬಿ.ನಾಗೇಂದ್ರ ಕಣ್ಣಿರು ಹಾಕಿದ್ದಾರೆ. ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಹಗರಣದಿಂದಾದ ಜೈಲುವಾಸ ನೆನೆದು ವೇದಿಕೆಯಲ್ಲಿಯೇ ಬಿಕ್ಕಿಬಿಕ್ಕಿ ಅತ್ತರು. ವಿನಾಕಾರಣ ನನ್ನನ್ನು ಆರೋಪಿ ಸ್ಥಾನ ದಲ್ಲಿನಿಲ್ಲಿಸಲಾಗಿದೆ. ಬಳ್ಳಾರಿಗೆ ಬರಲು ವಾಲ್ಮೀಕಿಯೇ ಬಂದು ಜಾಮೀನು ಕೊಟ್ಟಂತಾಗಿದೆ ಎಂದರು. 

ಹಗರಣದಲ್ಲಿ ಹೆಸರು ಕೇಳಿದಾಗ ರಾಜೀನಾಮೆ ಕೊಡಬೇಕು ಎಂದು ತೀರ್ಮಾನಿಸಿದ್ದೆ. ಆದರೆ, ಹಿರಿಯರ ಸಲಹೆ ಮೇರೆಗೆ ಸುಮ್ಮನಾದೆ. ನನ್ನ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿಯವರ ಹೆಸರನ್ನು ಪರಪ್ಪನ ಅಗ್ರಹಾರದ ಗೋಡೆಯ ಮೇಲೆ ಬರೆದಿಟ್ಟು ಬಂದಿದ್ದೇನೆ. ಬಿಜೆಪಿಯವರು ಅದೇ ಜೈಲು ಪಾಲಾಗಲಿದ್ದಾರೆ. ಆಗಲಾದರೂ ತಪ್ಪಿನ ಅರಿವಾಗಲಿ. ಜಿಲ್ಲೆಗೆ ಬರಬಾರದು ಎಂದುಕೊಂಡಿದ್ದೆ. ಕೆಟ್ಟ ರಾಜಕಾರಣಿಗಳನ್ನು ಜಿಲ್ಲೆಯಿಂದ ಕಿತ್ತೊಗೆಯಲು ಬಂದಿದ್ದೇನೆ ಎಂದರು. 

Latest Videos

ಕಲಬುರಗಿ ಜೈಲಲ್ಲಿರುವ ಉಗ್ರನಿಂದ ಸಹಕೈದಿ, ಸಿಬ್ಬಂದಿಗೆ ಹನಿಟ್ರ್ಯಾಪ್

ನಾಗೇಂದ್ರ ಭರ್ಜರಿ ಡ್ಯಾನ್ಸ್: 3 ತಿಂಗಳ ಬಳಿಕ ಬಳ್ಳಾರಿಗೆ ಬಂದ ಬಿ.ನಾಗೇಂದ್ರ ಅವರನ್ನು ಕಾರ್ಯಕರ್ತರು ಪಟಾಕಿ ಸಿಡಿಸಿ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ನಾಗೇಂದ್ರ ಭರ್ಜರಿ ಡ್ಯಾನ್ಸ್ ಮಾಡಿದರು. ಈ ವೇಳೆ ಶಾಸಕ ಭರತ್ ರೆಡ್ಡಿ ಇದ್ದರು.

ಸಂಡೂರಿನಲ್ಲಿ ಅರಮನೆ ಮಾಡಿದರೂ ಕೈ ಗೆಲುವು ಖಚಿತ: ಜನಾರ್ದನ ರೆಡ್ಡಿ ಸಂಡೂರಿನಲ್ಲಿ ಮನೆ ಅಲ್ಲ, ಅರಮನೆಯನ್ನೇ ಮಾಡಲಿ; ಕಾಂಗ್ರೆಸ್ ಗೆಲುವು ಖಚಿತ ಎಂದು ಶಾಸಕ ಬಿ. ನಾಗೇಂದ್ರ ತಿರುಗೇಟು ನೀಡಿದ್ದಾರೆ. ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ನಗರದಲ್ಲಿ ಜರುಗಿದ ಮೆರವಣಿಗೆಯಲ್ಲಿ ಪಾಲ್ಗೊಂಡ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದಿರುವುದರಿಂದ ರಾಜಕೀಯದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಕಾಂಗ್ರೆಸ್‌ ಗೆ ಯಾವುದೇ ಸಮಸ್ಯೆಯಿಲ್ಲ. ಇಡಿ, ಸಿಬಿಐ ಭಯಕ್ಕೆ ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ದಾರೆ. ಅವರು ಕೆಆರ್‌ಪಿ ಪಕ್ಷ ಸ್ಥಾಪನೆ ಮಾಡಿದಾಗ ಬಿಜೆಪಿ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದರು. ಇದೀಗ ಮಾತಿನ ವರಸೆಯೇ ಬದಲಾಯಿಸಿದ್ದಾರೆ. ಜನಾರ್ದನ ರೆಡ್ಡಿ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ರಾಯಚೂರು ವಿಶ್ವವಿದ್ಯಾಲಯ, ವಸತಿ ಶಾಲೆಗೆ ವಾಲ್ಮೀಕಿ ಹೆಸರು: ಸಿಎಂ ಸಿದ್ದರಾಮಯ್ಯ ಘೋಷಣೆ

ಇದೀಗ ಜನಾರ್ದನ ರೆಡ್ಡಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಮೊದಲು ಅವರ ಜತೆ ಇದ್ದಾಗ ಒಳ್ಳೆಯವನಾಗಿದ್ದೆ. ಈಗ ಪಕ್ಷ ಬದಲಾದ ಕೂಡಲೇ ನಾಗೇಂದ್ರ ಕೆಟ್ಟವನಾಗಿಬಿಟ್ಟನೇ ಎಂದು ಪ್ರಶ್ನಿಸಿದರು. ಬಿಜೆಪಿಯಿಂದ ಸಿಬಿಐ, ಇಡಿ ಬಳಸಿಕೊಂಡು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆದಿದೆ. ಈ ಕಾರಣಕ್ಕಾಗಿಯೇ ನನ್ನನ್ನು ಟಾರ್ಗೆಟ್‌ ಮಾಡಲಾಗಿದೆ. ಈ ಪ್ರಕರಣದಿಂದ ಶೀಘ್ರದಲ್ಲೇ ಆರೋಪ ಮುಕ್ತನಾಗುವೆ. ಬಿಜೆಪಿ ಕುತಂತ್ರ ಬಯಲಾಗಲಿದೆ ಎಂದು ನಾಗೇಂದ್ರ ತಿಳಿಸಿದರು.

click me!