ಗೌಡ್ರ ನೀವೇನೋ ಯೋಚನೆ ಮಾಡಬ್ಯಾಡ್ರಿ. ನಿಮ್ಮನ್ನು ಗೆಲ್ಲಿಸಿಕೊಂಡು ಬರ್ತೇವಿ’.! ಇದು ಕುಂದಗೋಳ ಕ್ಷೇತ್ರದ ಪಾಲಿಕೊಪ್ಪ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ ಪ್ರಚಾರಕ್ಕೆ ಬಂದ ವೇಳೆ ಗ್ರಾಮಸ್ಥ ಮಲ್ಲಿಕಾರ್ಜುನ ಗಣಾಚಾರಿ ಎಂಬಾತ ಹೇಳಿದ ಮಾತು.
ಕುಂದಗೋಳ (ಮೇ.5) :‘ಗೌಡ್ರ ನೀವೇನೋ ಯೋಚನೆ ಮಾಡಬ್ಯಾಡ್ರಿ. ನಿಮ್ಮನ್ನು ಗೆಲ್ಲಿಸಿಕೊಂಡು ಬರ್ತೇವಿ’.! ಇದು ಕುಂದಗೋಳ ಕ್ಷೇತ್ರದ ಪಾಲಿಕೊಪ್ಪ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ ಪ್ರಚಾರಕ್ಕೆ ಬಂದ ವೇಳೆ ಗ್ರಾಮಸ್ಥ ಮಲ್ಲಿಕಾರ್ಜುನ ಗಣಾಚಾರಿ ಎಂಬಾತ ಹೇಳಿದ ಮಾತು.
ಗೌಡ್ರ ನಮ್ಮೂರಿಗಷ್ಟೇ ಅಲ್ಲ ಇಡೀ ಕ್ಷೇತ್ರದೊಳಗ ಎಷ್ಟೆಲ್ಲ ಕೆಲ್ಸಾ ಮಾಡ್ರಿ. ಯಪ್ಪಾ ಕಷ್ಟಅಂತ ಬಂದಾಗ ಕೈ ಹಿಡಿದ ಸಮಾಧಾನ ಮಾಡ್ರಿ. ನಿಮ್ಮನ್ನ ಬಿಟ್ಟಮತ್ಯಾರಿಗೆ ಮತ ಹಾಕೋಣರ್ರಿ. ನೀವ್ ಹೇಳ್ರಿ.. ಚಿಂತಿ ಬಿಡ್ರಿ ಈ ಸಲ ನಿಮ್ಮನ್ನ ಗೆಲ್ಲಿಸಿಕೊಂಡ ಬರೋದ ಅಂದ್ರ ಬರೋದ್! ಎಂದು ಶಪಥ ಮಾಡಿದ.
undefined
ಕಾಂಗ್ರೆಸ್‌ಗೆ ಮತ ನೀಡಿ; ಹಿಟ್ನಾಳ್ ಪರ ಅಜರುದ್ದೀನ್ ಭರ್ಜರಿ ಬ್ಯಾಟಿಂಗ್!
ಎಂ.ಆರ್.ಪಾಟೀಲ(MR Patil)ರು ಗುರುವಾರ ಅಬ್ಬರದ ಪ್ರಚಾರ ನಡೆಸಿದರು. ಬೆಳಗ್ಗೆಯಿಂದಲೇ ತಿಮ್ಮಸಾಗರ, ಅಂಚಟಗೇರಿ, ಜಿಗಳೂರ, ಬೆಳ್ಳಿಗಟ್ಟಿ, ತೀರ್ಥ, ಮತ್ತಿಗಟ್ಟಿ, ರಾಮಾಪುರ, ಹನುಮನಹಳ್ಳಿ, ಪಾಲಿಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಎಲ್ಲೆಡೆ ಉತ್ತಮ ಸ್ಪಂದನೆ ಸಿಕ್ಕಿತು. ಹೋದೆಡೆಯೆಲ್ಲೆಲ್ಲ ಆರತಿ ಬೆಳಗಿ, ಹೂಮಳೆ ಸುರಿಸಿ ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದ ಗ್ರಾಮಸ್ಥರು, ‘ಗೌಡ್ರ ಚಿಂತಿಬಿಡ್ರಿ ನಿಮಗ ಈ ಸಲ ಗೆಲುವು ಗ್ಯಾರಂಟಿ’ ಎಂದು ಅಭಯ ಹಸ್ತ ನೀಡುತ್ತಿದ್ದರು.
ಇನ್ನು ಎಲ್ಲೆಡೆ ಪ್ರಚಾರ ಮುಗಿಸಿ ಸಂಜೆ ವೇಳೆಗೆ ಪಾಲಿಕೊಪ್ಪಕ್ಕೆ ಹೆಜ್ಜೆ ಇಡುತ್ತಿದ್ದಂತೆ ಮಲ್ಲಿಕಾರ್ಜುನ ಗಣಾಚಾರಿ(Mallikarjun ganachari) ತಾನೇ ಮುಂದಾಗಿ, ಗೌಡ್ರ ಯೋಚನೆ ಮಾಡಬ್ಯಾಡ್ರಿ. ಈ ಸಲ ನಾವೆಲ್ಲರೂ ನಿಮಗ ವೋಟ್ ಹಾಕ್ತೇವಿ. ಈ ಚುನಾವಣ್ಯಾಗ ನೀವು ಅಭ್ಯರ್ಥಿಯಲ್ಲ. ನಾವೇ ಅಭ್ಯರ್ಥಿ ಅಂತ್ಹೇಳಿ ಪ್ರಚಾರ ಮಾಡಕ್ಕತ್ತೇವಿ. ನಿಮ್ಮನ್ನು ಗೆಲ್ಲಿಸಿಕೊಂಡೇ ಬರ್ತೇವೆ ನೋಡ್ತಾ ಇರಿ ಎಂದು ಬಡಬಡನೆ ಮಾತನಾಡಿದ. ಇದನ್ನು ಕೇಳುತ್ತಿದ್ದಂತೆ ಪಾಟೀಲ ಕೂಡ ಕೊಂಚ ಭಾವುಕರಾದರು. ನಿಮ್ಮ ಅಭಿಮಾನಕ್ಕೆ ನಾ ಯಾವಾಗಲೂ ಚಿರಋುಣಿ. ನಾನು ಶಾಸಕನಾದರೆ ನೀವೇ ಶಾಸಕರಾದಂತೆ. ನಿಮ್ಮೂರಿನ ಏನೇ ಕೆಲಸವಿದ್ದರೂ ಹಕ್ಕಿನಿಂದ ಕೇಳಿಕೊಂಡು ಮಾಡಿಸಿಕೊಳ್ಳಿ. ನಿಮ್ಮ ಮನೆಯ ಮಗ ನಾನು. ಈ ಸಲ ಆಶೀರ್ವದಿಸಿ ಹರಸಿ ವಿಧಾನಸಭೆಗೆ ಕಳುಹಿಸಿ ಎಂದು ಮನವಿ ಮಾಡಿದರು.
ಕುಂದಗೋಳ(Kundagol assembly constituency) ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಕ್ಷೇತ್ರವೆಂದು ಕರೆಸಿಕೊಳ್ಳುತ್ತದೆ. ಎಷ್ಟೇ ಚುನಾವಣೆ ನಡೆದರೂ, ಯಾರೇ ಶಾಸಕರಾದರೂ ತಾಲೂಕು ಮಾತ್ರ ಅಭಿವೃದ್ಧಿಯಿಂದ ವಂಚಿತಗೊಳ್ಳುತ್ತಲೇ ಬಂದಿದೆ. ಈ ಕಾರಣದಿಂದಲೇ ನಾನು ಯಾವುದೇ ಅಧಿಕಾರವಿಲ್ಲದೇ, ಸ್ವಂತ ವರ್ಚಸ್ಸಿನ ಮೇಲೆ ಸಾಕಷ್ಟುಜನಪರವಾದ ಕೆಲಸ ಮಾಡಿದ್ದೇನೆ. ಇದೀಗ ರಾಜಕೀಯ ಬಲವನ್ನು ಮತದಾರರು ಕೊಟ್ಟಲ್ಲಿ, ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿಯನ್ನಾಗಿ ಮಾಡಿ ತೋರಿಸುತ್ತೇನೆ ಎಂದರು.
ಬಜರಂಗದಳವಲ್ಲ, ಕಾಂಗ್ರೆಸ್ಸೇ ಬ್ಯಾನ್ ಆಗುತ್ತೆ: ಬಿ.ವೈ.ವಿಜಯೇಂದ್ರ
ಗುರುವಾರದ ಪ್ರಚಾರದಲ್ಲಿ ಮಾಲತೇಶ್ ಶಾಗೋಟಿ, ಡಿ.ವೈ. ಲಕ್ಕನಗೌಡ್ರ, ಟಿ.ಜಿ. ಬಾಲನವರ, ಮಾಧ್ಯಮ ವಕ್ತಾರ ಗುರು ಪಾಟೀಲ, ಉಮೇಶ ಕುಸುಗಲ, ಲಿಂಗರಾಜ ಮೆಣಸಿನಕಾಯಿ, ಎಸ್.ಡಿ.ಮಾಳಗಿ, ಪ್ರಕಾಶ ಕುಬಿಹಾಳ ಮತ್ತಿತರರು ಸಾಥ್ ನೀಡಿದರು.