ರಾಜಕೀಯಕ್ಕೆ ಬರ್ತಾರಂತೆ ಸೋನಿಯಾ ಗಾಂಧಿ ಅಳಿಯ, ರಾಬರ್ಟ್ ವಾದ್ರಾ!

Published : Apr 11, 2022, 05:22 PM IST
 ರಾಜಕೀಯಕ್ಕೆ ಬರ್ತಾರಂತೆ ಸೋನಿಯಾ ಗಾಂಧಿ ಅಳಿಯ, ರಾಬರ್ಟ್ ವಾದ್ರಾ!

ಸಾರಾಂಶ

ಜನರಿಗೆ ಸೇವೆ ಮಾಡಲು ರಾಜಕೀಯಕ್ಕಿಂತ ಇನ್ನೊಂದು ಆಯ್ಕೆಯಿಲ್ಲ.ಜನರು ಬಯಸಿದರೆ ರಾಜಕೀಯಕ್ಕೆ ಬರುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹೇಳಿದ್ದಾರೆ.

ಇಂದೋರ್ (ಏ,11):  ಎಲ್ಲಾ ನಿರೀಕ್ಷೆಯಂತೆಯೇ ಆದಲ್ಲಿ ಶೀಘ್ರದಲ್ಲೇ ಗಾಂಧಿ ಕುಟುಂಬದಿಂದ ಇನ್ನೊಬ್ಬರು ರಾಜಕೀಯಕ್ಕೆ ಧುಮುಕಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Congress president Sonia Gandhi) ಅಳಿಯ, ಪ್ರಿಯಾಂಕಾ ಗಾಂಧಿ ವಾದ್ರಾ ( Priyanka Gandhi Vadra) ಅವರ ಪತಿ ರಾಬರ್ಟ್ ವಾದ್ರಾ (Robert Vadra) "ಜನರು ಬಯಸಿದರೆ" ತಾವು ರಾಜಕೀಯಕ್ಕೆ ಬರಲು ಸಿದ್ಧ ಎಂದು ಹೇಳಿದ್ದಾರೆ. ರಾಜಕೀಯದ ಮೂಲಕ ಮಾತ್ರವೇ ಜನರಿಗೆ ಸೇವೆ ಸಲ್ಲಿಸೋದು ಸಾಧ್ಯ ಎನ್ನುವುದನ್ನು ನಂಬುವುದಾಗಿ ತಿಳಿಸಿದ್ದಾರೆ.

ಭಾನುವಾರ ಉಜ್ಜಯಿನಿಯ ಮಹಾಕಾಳೇಶ್ವರ (Mahakaleshwar Temple in Ujjain)ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸ್ಥಳೀಯ ಯೂಟ್ಯೂಬ್ ಚಾನೆಲ್‌ನೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ (53) ತಮಗೆ ರಾಜಕೀಯ ಅರ್ಥವಾಗದೇ ಇರೋ ಕ್ಷೇತ್ರವಲ್ಲ ಎಂದು ಹೇಳಿದ್ದಾರೆ.

"ಜನರು ನಾನು ಅವರನ್ನು ಪ್ರತಿನಿಧಿಸಬೇಕೆಂದು ಬಯಸಿದರೆ ಮತ್ತು ನಾನು ಅವರಿಗಾಗಿ ಸ್ವಲ್ಪ ಬದಲಾವಣೆಯನ್ನು ತರಲು ಸಾಧ್ಯವಾದರೆ, ನಾನು ಖಂಡಿತವಾಗಿಯೂ ಈ ಹೆಜ್ಜೆ ಇಡುತ್ತೇನೆ" ಎಂದು ಅವರು ಹೇಳಿದರು, ಹಾಗೆ ಮಾಡುವುದರಿಂದ, "ಪ್ರಮುಖ ರೀತಿಯಲ್ಲಿ" ಜನರಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ನನ್ನ ದಾನ-ದತ್ತಿ ಕಾರ್ಯಗಳು 10 ವರ್ಷಗಳಿಗೂ ಹೆಚ್ಚು ಕಾಲ ನಡೆಯುತ್ತಿದ್ದು, ಮುಂದೆಯೂ ಮುಂದುವರಿಯಲಿದೆ, ನಾನು ರಾಜಕೀಯಕ್ಕೆ ಬರಲಿ, ಇಲ್ಲದಿರಲಿ, ಜನಸೇವೆಯೇ ನನ್ನ ಮಾರ್ಗವಾಗಿರುವುದರಿಂದ ಈ ಕಾರ್ಯಗಳು ಮುಂದುವರಿಯಲಿವೆ ಎಂದರು.

ದೇಶದಾದ್ಯಂತ ಇರುವ ಜನರ ತಲೆಯಲ್ಲಿ ನಾನಿದ್ದೇನೆ. ಇಡೀ ದೇಶದ ಜನರು ತಮ್ಮೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆ."ನನ್ನ ಹೆಸರನ್ನು ಬಳಸಿದರೆ, ಅವರು (ಅವರ ಬೆಂಬಲಿಗರು) ಸಾಮಾನ್ಯ ಜನರಿಗೆ ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಈ ಜನರಿಗೆ ತಿಳಿದಿದೆ" ಎಂದು ಅವರು ಹೇಳಿದರು.

ಮುಂದೆ ಏನಾಗುತ್ತೋ ನೋಡೋಣ ಎಂದ ಅವರು, ಇಂದು ಯಾವ ರೀತಿಯ ರಾಜಕೀಯ ನಡೆಯುತ್ತಿದೆ, ದೇಶ ಪ್ರತಿದಿನ ಹೇಗೆ ಬದಲಾಗುತ್ತಿದೆ ಎನ್ನುವ ಬಗ್ಗೆ ಪ್ರತಿದಿನವೂ ನಮ್ಮ ಕುಟುಂಬದಲ್ಲಿ ಚರ್ಚೆ ಮಾಡುತ್ತಿರುತ್ತೇವೆ ಎಂದು ಹೇಳಿದ್ದಾರೆ. ದೇಶದ ಪ್ರಸ್ತುತ ರಾಜಕೀಯ ಸನ್ನಿವೇಶದ ಕುರಿತು ಕೇಳಲಾದ ಪ್ರಶ್ನೆಗೆ, ರಾಬರ್ಟ್ ವಾದ್ರಾ ಅವರು ಪ್ರಸ್ತುತ ಪರಿಸ್ಥಿತಿಗಳನ್ನು ನೋಡುವಾಗ, ಜನರು ಸುಖದಿಂದ ಬಾಳುತ್ತಿಲ್ಲ ಎಂದು ಹೇಳಿದರು. ಮಾಧ್ಯಮಗಳು ಜನರಿಗೆ ವಾಸ್ತವವನ್ನು ತೋರಿಸಲು ಹೆದರುತ್ತಿವೆ ಎಂದು ಅವರು ಹೇಳಿದರು. ಇಂತಹ ವಿಷಯಗಳು ಪ್ರಜಾಪ್ರಭುತ್ವದ ಭಾಗವಲ್ಲ ಮತ್ತು ಇವುಗಳು "ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತದೆಯೇ ಹೊರತು ಮುಂದೆ ಹೋಗಲು ನೆರವಾಗೋದಿಲ್ಲ' ಎಂದರು

ನಮಗೆ ವಿಪಕ್ಷಗಳಿಂದ ಕಲಿಯಬೇಕಾದ್ದು ಏನು ಇಲ್ಲ CM Basavaraj Bommai

ಇತ್ತೀಚೆಗೆ ಮುಗಿದ ದೇಶದ ಪ್ರಮುಖ ರಾಜ್ಯವಾದ ಉತ್ತರ ಪ್ರದೇಶದ ಚುನಾವಣೆಯ 403 ಕ್ಷೇತ್ರಗಳ ಪೈಕಿ, ಕೇವಲ 2 ಸ್ಥಾನಗಳಲ್ಲಿ ಮಾತ್ರವೇ ಕಾಂಗ್ರೆಸ್ ಜಯಿಸಿದೆ. ಯುಪಿ ಚುನಾವಣೆಯಲ್ಲಿ ತಮ್ಮ ಪತ್ನಿಯ ಸಾಧನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, "ನಾನು 10 ರಲ್ಲಿ 10 ಅಂಕಗಳನ್ನು ಪ್ರಿಯಾಂಕಾಗೆ ನೀಡುತ್ತೇನೆ, ಅವರು ಈ ಚುನಾವಣೆಗಳಿಗಾಗಿ ಹಗಲಿರುಳು ಶ್ರಮಿಸಿದರು, ಆದರೆ, ನಾವು ರಾಜ್ಯದ ಜನರ ಆದೇಶವನ್ನು ಸ್ವೀಕರಿಸುತ್ತೇವೆ ಮತ್ತು ಅವರ ಸೇವೆಯನ್ನು ಮುಂದುವರಿಸುತ್ತೇವೆ." ಎಂದರು. ಇವಿಎಂಗಳಿಗೆ ಸಂಬಂಧಿಸಿದಂತೆ ಜನರ ಮನಸ್ಸಿನಲ್ಲಿರುವ ಸಂದೇಹಗಳನ್ನು ತೆಗೆದುಹಾಕಿದರೆ ದೇಶದ ಚುನಾವಣಾ ಫಲಿತಾಂಶಗಳು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ ಎಂದು ಹೇಳಿದರು.

ಬಾಯಿ ತಪ್ಪಿ ಕಾಂಗ್ರೆಸ್ ವಿರುದ್ಧವೇ ಸಿದ್ದರಾಮಯ್ಯ ವಾಗ್ದಾಳಿ

ಕರೋನವೈರಸ್-ಪ್ರೇರಿತ ಲಾಕ್‌ಡೌನ್ ಅನ್ನು ಇದ್ದಕ್ಕಿದ್ದಂತೆ ಹೇರಿದ್ದಕ್ಕಾಗಿ ಮತ್ತು ಹೆಚ್ಚುತ್ತಿರುವ ನಿರುದ್ಯೋಗಕ್ಕಾಗಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು. "ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಒಡಕು ಕೊನೆಗೊಳ್ಳಬೇಕು ಮತ್ತು ಜಾತ್ಯತೀತವಾಗಿ ಉಳಿಯಲು ರಾಷ್ಟ್ರವು ಎಲ್ಲಾ ಧರ್ಮಗಳನ್ನು ಅಳವಡಿಸಿಕೊಳ್ಳಬೇಕು" ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!