ಬಿಜೆಪಿ ಜತೆಗಿನ ಮೈತ್ರಿಗೆ ನಾನಂತೂ ಒಪ್ಪಲ್ಲ: ಜೆಡಿಎಸ್‌ ಶಾಸಕ ಕಂದಕೂರ

By Kannadaprabha News  |  First Published Sep 10, 2023, 11:30 PM IST

ದೇವೇಗೌಡರ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ, ದಶಕಗಳಿಂದಲೂ ಜನತಾ ಪರಿವಾರದಲ್ಲೇ ಉಳಿದಿರುವ ಮಾಜಿ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ಕಂದಕೂರು ಅವರ ಈ ಹೇಳಿಕೆ ತೀವ್ರ ಕುತೂ​ಹ​ಲ ಮೂಡಿ​ಸಿ​ದೆ. 


ಯಾದಗಿರಿ(ಸೆ.10):  ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಜೆಡಿಎಸ್‌ ಶಾಸಕರಲ್ಲೇ ಇದೀಗ ಅಪ​ಸ್ವರ ಕೇಳಿ​ಬಂದಿ​ದೆ. ನಾಯಕರ ನಿರ್ಧಾರ ಏನಿದೆಯೋ ಗೊತ್ತಿಲ್ಲ. ಆದರೆ, ನಾನಂತೂ ಮೈತ್ರಿಗೆ ಒಪ್ಪಲ್ಲ ಎಂದು ಗುರುಮಠಕಲ… ಕ್ಷೇತ್ರದ ಜೆಡಿ​ಎ​ಸ್‌ ಶಾಸಕ ಶರಣಗೌಡ ಕಂದಕೂರ ಹೇಳಿದ್ದಾರೆ.

ದೇವೇಗೌಡರ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ, ದಶಕಗಳಿಂದಲೂ ಜನತಾ ಪರಿವಾರದಲ್ಲೇ ಉಳಿದಿರುವ ಮಾಜಿ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ಕಂದಕೂರು ಅವರ ಈ ಹೇಳಿಕೆ ತೀವ್ರ ಕುತೂ​ಹ​ಲ ಮೂಡಿ​ಸಿ​ದೆ. ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸೋಲಾ​ಗಿದೆ ಎಂದು ತಿಳಿದು, ಯಾರೋ ಒಬ್ಬರನ್ನು ಟಾರ್ಗೆಚ್‌ ಮಾಡಿ ಮೈತ್ರಿಗೆ ಮುಂದಾಗುವುದು ಸರಿಯಲ್ಲ. ಹಾಗೊಂದು ವೇಳೆ ನಡೆ​ದರೆ ನಮ್ಮ ಪಕ್ಷಕ್ಕೇ ಹಿನ್ನಡೆ ಆಗಲಿದೆ. ನಾವು ಕೆಲವರು(ಜೆಡಿಎಸ್‌ ಶಾಸಕರು) ಈ ಬಗ್ಗೆ ಚರ್ಚಿಸಿದ್ದೇವೆ. ಅಂತಿಮವಾಗಿ ರಾಜಕೀಯವಾಗಿ ಕೆಲ ಅಸ್ತಿತ್ವ ಹಾಗೂ ನಮ್ಮ ಜಿಲ್ಲೆ-ನಮ್ಮ ಕ್ಷೇತ್ರದ ಪ್ರಶ್ನೆ ಬಂದಾಗ ನಮ್ಮದೇನು ನಿರ್ಧಾರ ಅನ್ನುವು​ದನ್ನು ಚರ್ಚೆ ಮಾಡಿ ಪ್ರಕಟಿಸುವುದಾಗಿ ಕಂದಕೂರು ಹೇಳಿದರು.

Latest Videos

undefined

ಬಿಎಲ್ ಸಂತೋಷ್ ಸಂಪರ್ಕದಲ್ಲಿ 40 ಕಾಂಗ್ರೆಸ್ ಶಾಸಕರು: ಇದು ಶುದ್ಧ ಸುಳ್ಳು ಎಂದ ಶ್ರೀರಾಮುಲು!

ಮೈತ್ರಿ ಬಗ್ಗೆ ನಾಯಕರು ಅಂತಿಮವಾಗಿ ಅಧಿಕೃತವಾಗಿ ಹೇಳಿದ ಮೇಲೆ ನಾವೂ ಕಾರ್ಯಕರ್ತರ ಮಾತುಗಳ ಕೇಳಬೇಕಾಗುತ್ತದೆ. ನಾನೂ ಪಕ್ಷದ ಕೆಲವೊಂದು ವಿಚಾರಗಳಿಗಾಗಿ ತ್ಯಾಗ-ರಿಸ್‌್ಕ ತೆಗೆದುಕೊಂಡಿದ್ದೇನೆ, ನಾವು ಪಕ್ಷಕ್ಕೆ ಏನು ಮಾಡಿದ್ದೇವೆ, ಪಕ್ಷ ನಮಗೇನು ಮಾಡಿದೆ ಎಂಬ ಬಗ್ಗೆ ಕ್ಷೇತ್ರದ ಜನಾಭಿಪ್ರಾಯ ಪಡೆಯುತ್ತೇನೆ ಎಂದರು.

ಮೈತ್ರಿ ಬಗ್ಗೆ ಪಕ್ಷದ ಕೆಲ ಮಾಜಿ ಶಾಸಕರು ನನ್ನ ಜೊತೆ ಮಾತನಾಡಿದ್ದಾರೆ, ಅವರಿಗೂ ರಾಜಕೀಯ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಅವರೂ ವಿಚಾರ ಮಾಡುತ್ತಾರೆ. ನನ್ನ ಪರಿಚಯದ ಕೆಲ ಬಿಜೆಪಿ ಮಾಜಿ ಶಾಸಕರಲ್ಲೂ ಇಂಥದ್ದೇ ಅಳಕು ಇದೆ ಎಂದು ಶಾಸಕ ಕಂದಕೂರ ತಿಳಿಸಿದರು.

ಕಾಂಗ್ರೆಸ್ಸಿಗೆ 136 ಸೀಟುಗಳ ಬಹುಮತ ಬಂದಿದೆ. ಇದೀ​ಗ ಬಿಜೆಪಿ ಜತೆ ಹೋಗಬೇಕೆಂದರೆ ನಮ್ಮ ಪಕ್ಷದ ಮಾಜಿ ಶಾಸಕರ ಒಲವು ಇಲ್ಲ ಎಂದು ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ತಿಳಿಸಿದ್ದಾರೆ.  

click me!