ನಾಡಿನಲ್ಲಿ ಅನೇಕ ಮಂದಿ ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಆದರೆ, ಚಾಮುಂಡೇಶ್ವರಿ ತಾಯಿಯ ಇಚ್ಛೆಯೇ ಬೇರೆ ಇದೆ. ಚಾಮುಂಡೇಶ್ವರಿ ತಾಯಿ ಹಾಗೂ ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ರಾಮನಗರ (ಜು.21): ನಾಡಿನಲ್ಲಿ ಅನೇಕ ಮಂದಿ ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಆದರೆ, ಚಾಮುಂಡೇಶ್ವರಿ ತಾಯಿಯ ಇಚ್ಛೆಯೇ ಬೇರೆ ಇದೆ. ಚಾಮುಂಡೇಶ್ವರಿ ತಾಯಿ ಹಾಗೂ ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಶ್ರೀ ಚಾಮುಂಡೇಶ್ವರಿ ದೇವಿ ಕರಗ ಮಹೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ ನಾಡಿನಲ್ಲಿ ರೈತರು, ಬಡವರು ಹಾಗೂ ಯುವಕರ ಪರವಾದ ಜೆಡಿಎಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಜನರು ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ.
ನನಗೆ ತಾಯಿ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದ್ದು, ನನ್ನ ಸಂಕಲ್ಪಕ್ಕೆ ನಿಮ್ಮ ಆರ್ಶಿವಾದ ಬೇಕು. ನಿಮ್ಮ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿ ಹೊರಟಿದ್ದೇನೆ. ಜೆಡಿಎಸ್ ಪಕ್ಷಕ್ಕೆ ಐದು ವರ್ಷದ ಸರ್ಕಾರ ನಡೆಸುವ ಅವಕಾಶ ಕೊಟ್ಟರೆ ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ ಎಂದರು. 2019ರ ಜುಲೈನಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನನ್ನ ಅಧಿಕಾರವನ್ನು ಕುತಂತ್ರದಿಂದ ಕಸಿದುಕೊಂಡರು. ನೀವು ನನ್ನನ್ನು ಸಸಿಯಾಗಿ ನೆಟ್ಟು, ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಸಿದ್ದೀರಿ. ನೀವು ಕೊಟ್ಟಶಕ್ತಿಯನ್ನು ಲಕ್ಷಾಂತರ ಜನರಿಗೆ ಧಾರೆ ಎರೆದಿದ್ದೇನೆ. ನಾನು ಒಂದೊಂದು ಕ್ಷಣವೂ ಬಡವರಿಗಾಗಿ ಬದುಕುತ್ತಿದ್ದೇನೆ. ಪಂಚರತ್ನ ಯೋಜನೆ ಸಾಕಾರಗೊಳಿಸಲು ಮುಂಬರುವ ಚುನಾವಣೆಯನ್ನು ಸವಾಲನ್ನಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದರು.
ಬಿಜೆಪಿ ಸರ್ಕಾರದಿಂದ ಲೂಟಿ: ಎಚ್.ಡಿ.ಕುಮಾರಸ್ವಾಮಿ
ನನಗೆ ಆರೋಗ್ಯ ಸಮಸ್ಯೆ ಇದೆ. ಆದರೂ ನಿಮ್ಮ ಸೇವೆ ಮಾಡಲು ಹೊರಟಿದ್ದೇನೆ. ಪ್ರತಿನಿತ್ಯ ಮನೆ ಬಳಿ ನೂರಾರು ಜನ ಸಹಾಯ ಕೇಳಿ ಬರುತ್ತಾರೆ. ಅವರಿಗೆ ಎಲ್ಲಿಂದ ಸಹಾಯ ಮಾಡಲಿ? ನಾನು ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಕೈಗಾರಿಕೆಯನ್ನು ಹೊಂದಿಲ್ಲ. ಕೇತಗಾನಹಳ್ಳಿಯಲ್ಲಿ 45 ಎಕರೆ ಜಮೀನು ಹೊರತು ಪಡಿಸಿ ಬೇರೇನೂ ಇಲ್ಲ ಎಂದರು. ಈಗ ರಾಮನಗರದಲ್ಲಿ ಕೆಲವರು ತಪ್ಪಿನ ರಾಜಕಾರಣ ಮಾಡುತ್ತಿದ್ದಾರೆ. ಯಾರೂ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ನಾವು ಎಂದೂ ಜನರಿಗೆ ತೊಂದರೆ ಕೊಟ್ಟಿಲ್ಲ. ಏನೇ ಇದ್ದರು ನನ್ನ ಬಳಿ ಬಂದು ಮುಕ್ತವಾಗಿ ಚರ್ಚೆ ನಡೆಸುವಂತೆ ಕುಮಾರಸ್ವಾಮಿ ಹೇಳಿದರು.
ನಿಮ್ಮ ಮನೆ ಮಗನಾಗಿ ಕೆಲಸ ಮಾಡುವೆ: ನಿಮ್ಮ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿ ಹೊರಟಿದ್ದೇನೆ. ಜೆಡಿಎಸ್ ಪಕ್ಷಕ್ಕೆ ಐದು ವರ್ಷದ ಸರ್ಕಾರ ನಡೆಸುವ ಅವಕಾಶ ಕೊಟ್ಟರೆ ನಿಮ್ಮ ಮನೆ ಮಗನಾಗಿ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಶ್ರೀ ಚಾಮುಂಡೇಶ್ವರಿ ದೇವಿ ಕರಗ ಮಹೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡಿನಲ್ಲಿ ರೈತರು, ಬಡವರು, ಯುವಕರ ಪರವಾದ ಜೆಡಿಎಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಜನರು ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು. 2019ರ ಜುಲೈನಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನನ್ನ ಅಧಿಕಾರವನ್ನು ಕುತಂತ್ರದಿಂದ ತೆಗೆದರು.
ಈಗ ತಾಯಿ ಚಾಮುಂಡೇಶ್ವರಿಯ ಆಶಿರ್ವಾದ ಪಡೆದು ನಿಮ್ಮ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿ ಹೊರಟಿದ್ದೇನೆ. ನಾಡಿನಲ್ಲಿ ಬಹಳ ಜನರು ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಆದರೆ, ಚಾಮುಂಡೇಶ್ವರಿ ತಾಯಿಯ ಇಚ್ಛೆಯೇ ಬೇರೆ ಇದೆ. ಚಾಮುಂಡೇಶ್ವರಿ ತಾಯಿ ಹಾಗೂ ಜನರ ಆಶೀರ್ವಾದದಿಂದ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ನನಗೆ ತಾಯಿ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದ್ದು, ನನ್ನ ಸಂಕಲ್ಪಕ್ಕೆ ನಿಮ್ಮ ಆರ್ಶಿವಾದ ಬೇಕು ಎಂದರು. ನೀವು ನನ್ನನ್ನು ಸಸಿಯಾಗಿ ನೆಟ್ಟು, ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಸಿದ್ದೀರಿ. ನೀವು ಕೊಟ್ಟಶಕ್ತಿಯನ್ನು ಲಕ್ಷಾಂತರ ಜನರಿಗೆ ಧಾರೆ ಎರೆದಿದ್ದೇನೆ. ನಾನು ಒಂದೊಂದು ಕ್ಷಣವೂ ಬಡವರಿಗಾಗಿ ಬದುಕುತ್ತಿದ್ದೇನೆ.
ಪಂಚರತ್ನ ಯೋಜನೆ ಸಾಕಾರಗೊಳಿಸಲು ಮುಂಬರುವ ಚುನಾವಣೆಯನ್ನು ಸವಾಲನ್ನಾಗಿ ಸ್ವೀಕಾರ ಮಾಡಿದ್ದೇನೆ ಎಂದರು. ನನಗೆ ಆರೋಗ್ಯ ಸಮಸ್ಯೆ ಇದೆ. ಆದರೂ ನಿಮ್ಮಗಳ ಸೇವೆ ಮಾಡಲು ಹೊರಟಿದ್ದೇನೆ. ಪ್ರತಿನಿತ್ಯ ಮನೆಯ ಬಳಿ ನೂರಾರು ಜನರು ಸಹಾಯ ಕೇಳಿ ಬರುತ್ತಾರೆ. ಅವರಿಗೆ ಎಲ್ಲಿಂದ ಸಹಾಯ ಮಾಡಲಿ. ನಾನು ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಕೈಗಾರಿಕೆಗಳನ್ನಾಗಲಿ ಹೊಂದಿಲ್ಲ. ಕೇತಗಾನಹಳ್ಳಿಯಲ್ಲಿ 45 ಎಕರೆ ಜಮೀನು ಹೊರತು ಪಡಿಸಿದರೆ ಬೇರೇನೂ ಇಲ್ಲ ಎಂದರು. ನನ್ನ ಮತ್ತು ರಾಮನಗರ ಸಂಬಂಧ ತಾಯಿ ಮಗನ ಸಂಬಂಧ. ನಿಮ್ಮ ಕಣ್ಣೀರು ಒರೆಸುವುದು ನನ್ನ ಕರ್ತವ್ಯ. ನಿಮ್ಮ ಆಶೀರ್ವಾದವೇ ನನಗೆ ಶ್ರೀ ರಕ್ಷೆಯಾಗಿದೆ.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಉಚಿತ ನೀರು, ವಿದ್ಯುತ್: ಎಚ್‌ಡಿಕೆ ಘೋಷಣೆ
ಉಸಿರು ನಿಂತ ಮೇಲೆ ನಾನು ಇದೇ ಮಣ್ಣಲ್ಲಿ ಮಣ್ಣಾಗುತ್ತೇನೆ. ಕಳೆದ ರಾಜಕೀಯ ಸನ್ನಿವೇಶದಲ್ಲಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಎರಡು ಕಡೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೆ. ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟರೆ ಮತ್ತೆ ಅಲ್ಲಿ ಗೆಲ್ಲುವುದು ಕಷ್ಟವೆಂದು ರಾಜೀನಾಮೆ ಕೊಡಲಿಲ್ಲ ಎಂದು ತಿಳಿಸಿದರು. ಈಗ ರಾಮನಗರದಲ್ಲಿ ಕೆಲವರಿಂದ ತಪ್ಪಿನ ರಾಜಕಾರಣ ಮಾಡುತ್ತಿದ್ದಾರೆ. ಯಾರೂ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ನಾವು ಎಂದೂ ಜನರಿಗೆ ತೊಂದರೆ ಕೊಟ್ಟಿಲ್ಲ. ಏನೇ ಇದ್ದರು ನನ್ನ ಬಳಿ ಬಂದು ಮುಕ್ತವಾಗಿ ಚರ್ಚೆ ನಡೆಸುವಂತೆ ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕರಾದ ಸಾ.ರಾ.ಮಹೇಶ್ , ಎ.ಮಂಜುನಾಥ್ , ಅನಿತಾ ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ ಮತ್ತಿತರರು ಹಾಜರಿದ್ದರು.