ಸಂಸದರಿಗಿಂತಲೂ ಬಿಜೆಪಿಯಲ್ಲಿ ನಾನು ಹಿರಿಯ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

By Kannadaprabha News  |  First Published Oct 25, 2023, 11:59 PM IST

ಹಾದಿಯಲ್ಲಿ ಬೀದಿಯಲ್ಲಿ ಹೋಗುವವರಿಗೆಲ್ಲಾ ನಾನೇಕೆ ಉತ್ತರ ಕೊಡಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿರುದ್ಧ ವಾಗ್ಧಾಳಿ ಮುಂದುವರಿಸಿದರು. 
 


ದಾವಣಗೆರೆ (ಅ.25): ಹಾದಿಯಲ್ಲಿ ಬೀದಿಯಲ್ಲಿ ಹೋಗುವವರಿಗೆಲ್ಲಾ ನಾನೇಕೆ ಉತ್ತರ ಕೊಡಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿರುದ್ಧ ವಾಗ್ಧಾಳಿ ಮುಂದುವರಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದ ಸಿದ್ದೇಶ್ವರರ ಬಗ್ಗೆ ನನಗೆ ಗೌರವವಿದೆ. ಸಂಸದರಿಗಿಂತಲೂ ಬಿಜೆಪಿಯಲ್ಲಿ ನಾನು ಹಿರಿಯನಿದ್ದೇನೆ. ಸಂಸದರು ವಯಸ್ಸಿನಲ್ಲಿ ಹಿರಿಯರಾಗಿರಬಹುದು. ಆದರೆ, ಪಕ್ಷದಲ್ಲಿ ನಾನು ದಾವಣಗೆರೆ ಸಂಸದರಿಗಿಂತ ಸೀನಿಯರ್ ಇದ್ದೀನಿ ಎಂದರು. ಬಿಜೆಪಿಗಾಗಿ ಎರಡು ಸಲ ಜೈಲಿಗೆ ಹೋಗಿ ಬಂದವನು ನಾನು, ನನ್ನ ರಕ್ತದ ಪ್ರತಿ ಕಣದಲ್ಲಿಯೂ ಹಿಂದುತ್ವ ಇದೆ. ರೇಣುಕಾಚಾರ್ಯ ಏನೇ ಮಾತನಾಡಿದರು, ಏನೇ ಒಂದು ಮಾತು ಹೇಳಿದರೂ ಅದು ಪಕ್ಷ ದ್ರೋಹವೆನ್ನುತ್ತಾರೆ. ಆದರೆ, ಬೇರೆ ಕೆಲವರು ಮಾತನಾಡಿದರೆ ಅದು ಪಕ್ಷ ದ್ರೋಹವಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ನಂತರ ಇಲ್ಲಿನ ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ವೃತ್ತದ ಬಳಿಯಿಂದ ಸಾರ್ವಜನಿಕ ವಿಜಯ ದಶಮಿ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳಿದ ಎಂ.ಪಿ.ರೇಣುಕಾಚಾರ್ಯ ಜಗಳೂರು ತಾಲೂಕಿನ ಮುಖಂಡ ಡಾ.ಟಿ.ಜಿ.ರವಿಕುಮಾರ ಜೊತೆಗೆ ಶೋಭಾಯಾತ್ರೆಗೆ ಆಗಮಿಸಿದ್ದ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್‌.ಶಿವಯೋಗಿಸ್ವಾಮಿ, ಹಿರಿಯ ಮುಖಂಡ ಪಿ.ಸಿ.ಮಹಾಬಲೇಶ ಭಟ್‌ ಇತರರನ್ನು ಭೇಟಿ ಮಾಡಿ, ಉಭಯ ಕುಶಲೋಪರಿಯಲ್ಲಿ ತೊಡಗಿದರು. ಸ್ಥಳದಲ್ಲಿ ಎಲ್‌.ಎನ್.ಕಲ್ಲೇಶ, ಟಿಪ್ಪು ಇತರರಿದ್ದರು.

Tap to resize

Latest Videos

ಹುಲಿ ಚರ್ಮದ ಮೇಲೆ ಕುಳಿತ ವಿನಯ್ ಫೋಟೋ ವೈರಲ್: ಆಧಾರ ಸಹಿತವಾಗಿ ಸ್ಪಷ್ಟನೆ ಕೊಟ್ಟ ಗುರೂಜಿ

ಬಿಎಸ್‌ವೈ ಕೈಗೆ ಬಿಜೆಪಿ ನಾಯಕತ್ವ ನೀಡಿ: ವಿಜಯದಶಮಿ ಹಬ್ಬದ ದಿನ ಹೇಳುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊರಟರೆ ಲಕ್ಷಾಂತರ ಕಾರ್ಯಕರ್ತರು ಬೆನ್ನಿಗೆ ನಿಲ್ಲುತ್ತಾರೆಂಬುದನ್ನು ಅರಿತು, ಯಡಿಯೂರಪ್ಪನವರಂತಹ ಜಾತ್ಯತೀತ, ಸಮರ್ಥ ನಾಯಕನ ಕೈಗೆ ಬಿಜೆಪಿ ನಾಯಕತ್ವ ನೀಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪನವರ ನೇತೃತ್ವದಲ್ಲೇ ಲೋಕಸಭೆ ಚುನಾವಣೆ-2024ಕ್ಕೆ ಹೋಗುವುದು ಸೂಕ್ತ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿಯಾಗಿದ್ದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಪಕ್ಷದ ವರಿಷ್ಠರು ಏನು ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ. ಓಡಾಟವಂತೂ ನನಗೆ ಹೊಸದಲ್ಲ. ಇಡೀ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದು ಹೇಳಿದರು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಉದ್ದೇಶ ನಮ್ಮೆಲ್ಲರದ್ದೂ ಆಗಿದೆ. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪನವರಂತಹ ಜಾತ್ಯತೀತ, ಸಮರ್ಥ ನಾಯಕತ್ವ ಇಂದು ಪಕ್ಷಕ್ಕೆ ಅತ್ಯಗತ್ಯವಾಗಿ ಬೇಕಾಗಿದೆ. ಪಕ್ಷ ಸಂಘಟನೆ, ಮತ್ತೆ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಕ್ಷದ ವರಿಷ್ಠರು ನಾಯಕತ್ವವನ್ನು ಯಡಿಯೂರಪ್ಪ ಕೈಗೆ ನೀಡಬೇಕು ಎಂದು ಆಗ್ರಹಿಸಿದರು.

'ಸರ್ವರೂ ಎಚ್ಚರದಿಂದ ಇರಬೇಕು': ಇದು ನಾಡಿನ ಸುಪ್ರಸಿದ್ದ ಮೈಲಾರಸ್ವಾಮಿ ಕಾರ್ಣಿಕ ನುಡಿ!

ಬಿಜೆಪಿ ಸಂಘಟನೆ ಬೂತ್ ಮಟ್ಟದಿಂದ ಆಗಬೇಕು. ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ಮೊದಲು ಹೋಗಬೇಕು. ಈಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಟಿಕೆಟ್ ನೀಡಲಾಯಿತು. ಹಳಬರನ್ನು ಕಡೆಗಣಿಸಲಾಯಿತು. ಹೊಸಬರಾದರೂ ಹಳಬರ ಕಾಲು ಏನಾದ್ರೂ ಬಿದ್ದು, ಹೋಗಿದ್ದರಾ ಎಂದು ಪ್ರಶ್ನಿಸಿದರು.

click me!