ಹಿರಿಯ ನಟ, ಮಾಜಿ ಸಚಿವ ದಿ.ಅಂಬರೀಶ್ ಅವರ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಕೇಳಿ ತಿಳಿದಾಗ ತೃಪ್ತ ಮನೋಭಾವ ಮೂಡುತ್ತದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಮಂಡ್ಯ (ಡಿ.15): ಹಿರಿಯ ನಟ, ಮಾಜಿ ಸಚಿವ ದಿ.ಅಂಬರೀಶ್ ಅವರ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಕೇಳಿ ತಿಳಿದಾಗ ತೃಪ್ತ ಮನೋಭಾವ ಮೂಡುತ್ತದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿನ ಮೇಲಂತಸ್ಥಿನ ಕಟ್ಟಡಕ್ಕೆ ಅನುದಾನ ನೀಡಿದ ಹಿನ್ನೆಲೆ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಂಬರೀಶ್ ಅವರು ಸಣ್ಣ ಸಮುದಾಯ ಭವನದಿಂದ ಹಿಡಿದು ಬೃಹತ್ ಅಭಿವೃದ್ಧಿ ಕಾರ್ಯಗಳ ವರೆಗೂ ಕೆಲಸ ಮಾಡಿದ್ದಾರೆ. ಅವರ ಕೆಲಸದಲ್ಲಿ ಅಪೂರ್ಣತೆ ಇದ್ದ ಕೆಲ ಕಾಮಗಾರಿಗಳನ್ನು ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ನನ್ನ ಲೋಕಸಭಾ ಸದಸ್ಯೆ ಅವಧಿಯಲ್ಲಿ ಪ್ರಯತ್ನ ಮಾಡಿದ್ದೇನೆ ಎಂದರು.
ಅಂಬರೀಶ್ ಅವರು ಪತ್ರಕರ್ತರ ಸಂಘದ ಕಟ್ಟಡ ನಿರ್ಮಾಣಕ್ಕೆ ಮೊದಲು ಅನುದಾನ ನೀಡಿದ್ದು, ನನ್ನ ಲೋಕಸಭಾ ಸದಸ್ಯತ್ವದ ಅವಧಿಯ ಕೊನೆಯಲ್ಲಿ ಪತ್ರಕರ್ತರ ಸಂಘವು ಸಹಾಯ ಕೋರಿ ಬಂದಾಗ ಮೇಲಂತಸ್ಥಿನ ಕಟ್ಟಡಕ್ಕೆ ಅನುದಾನ ನೀಡಿದ್ದು ಸಂತಸ ತಂದಿದೆ ಎಂದರು. ಅಂಬರೀಶ್ ಅವರ ರೀತಿಯ ಮಾತಿನ ದಾಟಿ ದೇಶದಲ್ಲಿನ ಬೇರಾವ ರಾಜಕಾರಣಿಗೂ ಇರಲಿಲ್ಲ. ಆ ದಾಟಿಯಲ್ಲಿ ಪತ್ರಕರ್ತರೊಂದಿಗೆ ಬೇರೆ ರಾಜಕಾರಣಿ ಮಾತನಾಡಿದರೆ ಅವರ ಪ್ರತಿಕ್ರಿಯೆಯನ್ನು ಊಹೆಯೂ ಮಾಡಿಕೊಳ್ಳಲಾಗದು. ಅವರ ಮಾತಿನ ರೀತಿಯನ್ನು ಪ್ರೀತಿಯಿಂದ ಅರ್ಥ ಮಾಡಿಕೊಳ್ಳುತ್ತಿದ್ದ ಪತ್ರಕರ್ತರೊಂದಿಗೆ ಅಂಬರೀಶ್ ಅವರಿಗೆ ವಿಶೇಷವಾದ ಸಂಬಂಧವಿದೆ ಎಂದರು.
ಕಾಂಗ್ರೆಸ್ಸಿಗರ ರಕ್ಷಣೆಗಾಗಿ ನಾನು ಯಾಕೆ ₹150 ಕೋಟಿ ಆಮಿಷವೊಡ್ಡಲಿ: ವಿಜಯೇಂದ್ರ
ಅಧಿಕಾರ ಇರಲಿ, ಇಲ್ಲದಿರಲಿ, ಪತ್ರಕರ್ತರ ಸಂಘಕ್ಕೆ ಕಡೆಗೆ ನಮ್ಮ ಸಹಕಾರ ಎಂದಿಗೂ ಇರುತ್ತದೆ. ಇದಕ್ಕೆ ಅಂಬರೀಶ್ ಅವರೊಂದಿಗೆ ಪತ್ರಕರ್ತರು ಹೊಂದಿದ್ದ ಪ್ರೀತಿ, ವಿಶ್ವಾಸವನ್ನು ನಿಭಾಯಿಸಿಕೊಂಡು ಮುನ್ನಡೆಸುತ್ತೇನೆ. ನನ್ನ ಕೈಲಾದ ಸಹಕಾರವನ್ನು ಪತ್ರಕರ್ತರಿಗೆ ನೀಡುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಮಾಜಿ ಅಧ್ಯಕ್ಷ ಪಿ.ಜೆ.ಚೈತನ್ಯಕುಮಾರ್, ಉಪಾಧ್ಯಕ್ಷ ನವೀನ್‌ಕುಮಾರ್, ಖಜಾಂಚಿ ನಂಜುಂಡಸ್ವಾಮಿ, ಬಾಲಕೃಷ್ಣ ಸೇರಿದಂತೆ ಇತರರಿದ್ದರು.
undefined
ಬಣ ಜಗಳ ವರಿಷ್ಠರು ಸರಿಮಾಡುವರು: ಬಿಜೆಪಿ ಬಣಜಗಳವನ್ನು ವರಿಷ್ಠರು ಬಗೆಹರಿಸುತ್ತಾರೆ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮಾಜಿ ಸಂಸದೆ ಸುಮಲತಾ ಹೇಳಿದರು ಪಕ್ಷದೊಳಗೆ ಸಣ್ಣಪುಟ್ಟ ವೈಮನಸ್ಸುಗಳಿರುವುದು ಸಹಜ. ಅದನ್ನು ಸರಿಪಡಿಸಲು ವರಿಷ್ಠರಿದ್ದಾರೆ. ಎರಡು ಗುಂಪಿನ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸುತ್ತಾರೆ. ಇದರಲ್ಲಿ ಬಹಳ ಆಳವಾಗಿ ನಾನು ಭಾಗಿಯಾದರೆ ಸರಿ ಹೋಗುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಾಗಿರುವುದು ಬೇಸರದ ವಿಚಾರ. ಎಲ್ಲ ವಿಚಾರದಲ್ಲೂ ರಾಜಕೀಯ ತರುತ್ತಿದ್ದಾರೆ.
150 ಕೋಟಿ ಆಮಿಷವೊಡ್ಡಿದ ವಿಜಯೇಂದ್ರ ಮೇಲೆ ಪ್ರಧಾನಿ ಸಿಬಿಐ ತನಿಖೆ ಮಾಡಿಸ್ಲಿ: ಸಿದ್ದರಾಮಯ್ಯ
ಇದನ್ನು ಎಕ್ಸ್‌ಟ್ರೀಮ್ ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದನ್ನು ನೋಡಿದರೆ ಭಯವಾಗುತ್ತದೆ. ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇರುತ್ತದೆ. ಸ್ವಾಮೀಜಿ ಅವರೇ ತಪ್ಪಾಯ್ತು ಎಂದ ಮೇಲೆ ಮುಂದುವರಿಸಿಕೊಂಡು ಹೋಗುವುದು ಸರಿಯಲ್ಲ ಎಂದರು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯವನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ವಿಚಾರ. ಮಂಡ್ಯ ಜಿಲ್ಲೆಯ ಸೊಗಡನ್ನು ಪ್ರಪಂಚಕ್ಕೆ ತೋರಿಸಲು ಅವಕಾಶ ಈ ಮೂಲಕ ಸಿಗುತ್ತಿದೆ. ಚಿತ್ರರಂಗದವರಿಗೂ ಕೂಡ ಅಹ್ವಾನ ಸಿಗುತ್ತದೆ. ಎಲ್ಲರನ್ನು ಜೊತೆಗೂಡಿ ಕಾರ್ಯಕ್ರಮ ಮಾಡಿದರೆ ಚೆನ್ನಾಗಿ ಇರುತ್ತದೆ ಎಂದರು.