ಲೋಕಸಭೆ ಅಭ್ಯರ್ಥಿ ಕುರಿತ ಎಲ್ಲಾ ಊಹಾಪೋಹ ಗಳಿಗೆ ತೆರೆ ಎಳೆದು ಹೈಕಮಾಂಡ್ ಸೂಕ್ತ ಅಭ್ಯರ್ಥಿ ಯಾರು ಎನ್ನುವುದನ್ನು ತೀರ್ಮಾನ ಮಾಡುತ್ತದೆ. ಅವರು ತೀರ್ಮಾನಿಸಿದ ವ್ಯಕ್ತಿಯ ಪರವಾಗಿ ನಾವು ಕೆಲಸ ಮಾಡುತ್ತೇವೆ. ಒಗ್ಗಟ್ಟಾಗಿ ಹಾವೇರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಈಗಾಗಲೇ ಹೈಕಮಾಂಡ್ ಸರ್ವೇ ರಿಪೋರ್ಟ್ ನೋಡಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ರಾಜ್ಯಾಧ್ಯಕ್ಷರು ಸಹ ಹೇಳಿದ್ದಾರೆ ಎಂದ ಮಾಜಿ ಸಚಿವ ಬಿ.ಸಿ. ಪಾಟೀಲ
ಹಾವೇರಿ(ಜ.31): ಲೋಕಸಭೆ ಅಭ್ಯರ್ಥಿ ಯಾರಾಗಬೇಕು ಎನ್ನುವು ದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪಕ್ಷ ಏನಾದರು ನೀವು ಸ್ಪರ್ಧಿಸಿ ಎಂದು ಹೇಳಿದರೆ ನಾನು ಸ್ಪರ್ಧೆ ಮಾಡಲು ಸಿದ್ಧ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಅಭ್ಯರ್ಥಿ ಕುರಿತ ಎಲ್ಲಾ ಊಹಾಪೋಹ ಗಳಿಗೆ ತೆರೆ ಎಳೆದು ಹೈಕಮಾಂಡ್ ಸೂಕ್ತ ಅಭ್ಯರ್ಥಿ ಯಾರು ಎನ್ನುವುದನ್ನು ತೀರ್ಮಾನ ಮಾಡುತ್ತದೆ. ಅವರು ತೀರ್ಮಾನಿಸಿದ ವ್ಯಕ್ತಿಯ ಪರವಾಗಿ ನಾವು ಕೆಲಸ ಮಾಡುತ್ತೇವೆ. ಒಗ್ಗಟ್ಟಾಗಿ ಹಾವೇರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಈಗಾಗಲೇ ಹೈಕಮಾಂಡ್ ಸರ್ವೇ ರಿಪೋರ್ಟ್ ನೋಡಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ರಾಜ್ಯಾಧ್ಯಕ್ಷರು ಸಹ ಹೇಳಿದ್ದಾರೆ ಎಂದರು.
undefined
ಹಾವೇರಿಯಲ್ಲಿ ಮತ್ತೊಂದು ನೈತಿಕ ಪೊಲೀಸಗಿರಿ ! ಹಿಂದು ಯುವಕ ಮುಸ್ಲಿಂ ಯುವತಿಗೆ ಥಳಿತ!
ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶೆಟ್ಟರ್ ಮರಳಿ ಮನೆಗೆ ಬಂದಿದ್ದಾರೆ. ರಾಹುಕಾಲ, ಗುಳಿಗಕಾಲ ಎಂದಿರುತ್ತದಲ್ಲ, ಹಾಗೆ ಕಾಲ ಕೆಟ್ಟಿದ್ದರಿಂದ ಅದೇನೋ ಆಯ್ತು. ಅವರಿಗೂ ಕೂಡಾ ಅನ್ಯಾಯ ವಾಗಿತ್ತು. ಇವತ್ತು ಆ ಅನ್ಯಾಯವನ್ನು ಸರಿ ಮಾಡುತ್ತೇವೆ ಎಂದು ಮರಳಿ ಪಕ್ಷಕ್ಕೆ ಕರೆ ತಂದಿದ್ದಾರೆ. ಅವರು ಹಿರಿಯರು ಮರಳಿ ನಮ್ಮ ಪಕ್ಷಕ್ಕೆ ಬಂದಿದ್ದು ಒಂದು ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಹೇಳಿದರು.