ಕೆಆರ್‌ಪಿಪಿ ಉಳಿಸಿಕೊಂಡು ಬಿಜೆಪಿ ಸೇರ್ಪಡೆಯಾಗಬೇಕೇ ಅಥವಾ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಬೇಕೇ ಎನ್ನುವ ಬಗ್ಗೆಯೂ ಗಾಲಿ ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇನ್ನು ಕೊಪ್ಪಳ ಲೋಕಸಭಾ ಕ್ಷೇತ್ರದಿಂದಲೂ ಅಖಾಡಕ್ಕೆ ಇಳಿಸಬೇಕು ಎನ್ನುವುದು ಚರ್ಚೆಯಾಗುತ್ತಿದೆ.
ಕೊಪ್ಪಳ(ಜ.31): ಕೆಆರ್‌ಪಿಪಿ ಸಂಸ್ಥಾಪಕ ಅಧ್ಯಕ್ಷ, ಶಾಸಕ ಗಾಲಿ ಜನಾರ್ದನ ರೆಡ್ಡಿ ಭಾರತೀಯ ಜನತಾ ಪಾರ್ಟಿಗೆ ಸೇರುವ ಸಾಧ್ಯತೆ ದಟ್ಟವಾಗಿದ್ದು, ಇನ್ನೇನು ಸೇರ್ಪಡೆ ದಿನಾಂಕ ನಿಗದಿಯಾಗುವುದು ಬಾಕಿ ಇದೆ ಎನ್ನಲಾಗಿದೆ. ಸದ್ಯ ಆಗುತ್ತಿರುವ ಬೆಳವಣಿಗೆಯಲ್ಲಿ ಜನಾರ್ದನ ರೆಡ್ಡಿ ಆವರೊಂದಿಗೆ ಬಿಜೆಪಿ ಹೈಕಮಾಂಡ್ ನಿರಂತರ ಸಂಪರ್ಕದಲ್ಲಿದ್ದು, ಕೆಲವೊಂದು ವಿಷಯಗಳ ಕುರಿತು ಚರ್ಚೆಯಾಗುತ್ತಿದೆ.
ಕೆಆರ್‌ಪಿಪಿ ಉಳಿಸಿಕೊಂಡು ಬಿಜೆಪಿ ಸೇರ್ಪಡೆಯಾಗಬೇಕೇ ಅಥವಾ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಬೇಕೇ ಎನ್ನುವ ಬಗ್ಗೆಯೂ ಗಾಲಿ ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇನ್ನು ಕೊಪ್ಪಳ ಲೋಕಸಭಾ ಕ್ಷೇತ್ರದಿಂದಲೂ ಅಖಾಡಕ್ಕೆ ಇಳಿಸಬೇಕು ಎನ್ನುವುದು ಚರ್ಚೆಯಾಗುತ್ತಿದೆ.
undefined
ಕೊಪ್ಪಳ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ: ಜೀವಮಾನದಲ್ಲೇ ಇಂಥ ಜಾತ್ರೆ ನೋಡಿದ್ದು ಇದೇ ಮೊದಲು, ಡಿಕೆಶಿ
ರೆಡ್ಡಿ ಬಿಜೆಪಿಗೆ ಶೀಘ್ರ ಸೇರುವ ಸಾಧ್ಯತೆ ಬಿಜೆಪಿ ಪಾಳಯದಲ್ಲಿ ದಟ್ಟವಾಗಿ ಅದೀಗ ಫೆ.5ರಂದು ಮುಂದೂಡಿಕೆ ಸಾಧ್ಯತೆ ಇದೆ ಎನ್ನುವುದು ಈಗಿರುವ ಉನ್ನತ ಮೂಲಗಳ ಮಾಹಿತಿ. ಆದರೆ, ಇದ್ಯಾವುದಕ್ಕೂ ಜನಾರ್ದನ ರೆಡ್ಡಿ ಪ್ರತಿಕ್ರಿಯೆ ನೀಡುತ್ತಿಲ್ಲ, ಬದಲಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿ ಮಾಡುವುದಕ್ಕಾಗಿ ನನ್ನ ಬೆಂಬಲ ಎಂದಿದ್ದಾರೆ.
ಸಿವಿಸಿ ಬಿಜೆಪಿ ಸೇರ್ಪಡೆ:
ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ದೆ.ಫೆ.1ರಂದು ಸೇರ್ಪಡೆ ದಿನಾಂಕ ನಿಗದಿಯಾಗಿತ್ತು. ಟಿಕೆಟ್ ಕೈ ತಪ್ಪಿತು ಎನ್ನುವ ಕಾರಣಕ್ಕಾಗಿ ಬಿಜೆಪಿ ತೊರೆದು ಜೆಡಿಎಸ್ ಸೇರಿ, ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸದಸ್ಯರಾಗಿರುವ ಸಿ.ವಿ. ಚಂದ್ರಶೇಖರ ಸಹ ಮರಳಿ ಬಿಜೆಪಿ ಸೇರ್ಪಡೆಯಾಗುವ ಸಿದ್ಧತೆ ನಡೆದಿದೆ. ಈ ದಿಸೆಯಲ್ಲಿ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದ್ದು, ಖುದ್ದು ಸಿವಿಸಿ ಅವರೊಂದಿಗೂ ಕಳೆದ ವಾರದಿಂದ ಮಾತುಕತೆ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ. ಬಿಜೆಪಿಗೆ ಸೇರಿದ ಮೇಲೆ ಮುಂದಿನ ಬೆಳವಣಿಗೆ ಕುರಿತು ಈಗಲೇ ಒಂದಿಷ್ಟು ಮಾತುಕತೆ ನಡೆದಿದೆ ಎನ್ನಲಾಗಿದೆ.