ತುಮಕೂರಿನಿಂದ ಲೋಕಸಭೆಗೆ ಸ್ಪರ್ಧಿಸಲು ನಾನು ರೆಡಿ: ಸೋಮಣ್ಣ

By Kannadaprabha News  |  First Published Jan 26, 2024, 7:03 AM IST

ಹೈಕಮಾಂಡ್ ಬಳಿ ನಾನು ರಾಜ್ಯ ಸಭೆಗೆ ಅವಕಾಶ ನೀಡುವಂತೆ ಕೇಳಿದ್ದೆ. ಇದೀಗ ತುಮಕೂರಿನಿಂದ ನನಗೆ ಟಿಕೆಟ್ ಕೊಡುವ ಬಗ್ಗೆ ಒಂದು ಹಂತಕ್ಕೆ ಬಂದಿದೆ ಎಂಬ ಮಾಹಿತಿ ನನಗೆ ಬಂದಿದೆ. ಹೈಕಮಾಂಡ್ ಹೇಳಿದಂತೆ ಮಾಡುವೆ ಎಂದ ಮಾಜಿ ಸಚಿವ ಸಚಿವ ವಿ.ಸೋಮಣ್ಣ 


ಬೆಂಗಳೂರು(ಜ.26):  ಮುಂಬರುವ ಲೋಕಸಭಾ ಚುನಾವಣೆಗೆ ತುಮಕೂರಿನಿಂದ ಸ್ಪರ್ಧಿ ಸುವಂತೆ ಹೈಕಮಾಂಡ್‌ ಸೂಚಿಸಿದರೆ ಸ್ಪರ್ಧೆ ಮಾಡುವೆ ಎಂದು ಮಾಜಿ ಸಚಿವ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. 

ಗುರುವಾರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಬಳಿ ನಾನು ರಾಜ್ಯ ಸಭೆಗೆ ಅವಕಾಶ ನೀಡುವಂತೆ ಕೇಳಿದ್ದೆ. ಇದೀಗ ತುಮಕೂರಿನಿಂದ ನನಗೆ ಟಿಕೆಟ್ ಕೊಡುವ ಬಗ್ಗೆ ಒಂದು ಹಂತಕ್ಕೆ ಬಂದಿದೆ ಎಂಬ ಮಾಹಿತಿ ನನಗೆ ಬಂದಿದೆ. ಹೈಕಮಾಂಡ್ ಹೇಳಿದಂತೆ ಮಾಡುವೆ ಎಂದರು. 

Tap to resize

Latest Videos

ಐತಿಹಾಸಿಕ ಕ್ಷಣ ವೀಕ್ಷಣೆ ಪುಣ್ಯದ ಫಲ: ಮಾಜಿ ಸಚಿವ ಸೋಮಣ್ಣ

ನಿಷ್ಟುರವಾಗಿ ಕೆಲಸ ಮಾಡುವ, ಸತ್ಯ ಮಾತನಾಡುವ, ಕೆಲಸವೇ ದೇವರು ಎಂದು ನಂಬಿಕೊಂಡವನು ನಾನು. ಎಲ್ಲರೂ ಸೋಮಣ್ಣ ಆಗಲು ಸಾಧ್ಯ ವಿಲ್ಲ. ಸೋಮಣ್ಣನಲ್ಲಿ ದೊಡ್ಡ ಕಟ್ಟುಪಾಡುಗಳಿವೆ. ಸಂಕಲ ಇದೆ ಎಂದರು.

click me!