Karnataka Politics: ಬಿಜೆಪಿಗೆ ಹೋದವರೆಲ್ಲ ವಾಪಸ್‌ ಕಾಂಗ್ರೆಸ್‌ಗೆ ಬರ್ತಾರಾ?: ಜಾರಕಿಹೊಳಿ ಹೇಳಿದ್ದಿಷ್ಟು

By Kannadaprabha News  |  First Published Feb 15, 2022, 10:11 AM IST

*  ಬಿಜೆಪಿಗೆ ಸೇರಿರುವ ಕೆಲ ಶಾಸಕರು ಪಕ್ಷಕ್ಕೆ ಮರಳಲಿದ್ದಾರೆ ಎಂದು ಹೇಳಿಕೆ ನೀಡಿದ್ದೇನೆ
*  ನಾನು ಈ ರೀತಿ ಹೇಳಿಕೆ ನೀಡಿಲ್ಲ 
*  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಣೆ 


ಬೆಳಗಾವಿ(ಫೆ.15):  ಕಾಂಗ್ರೆಸ್‌(Congress) ಪಕ್ಷ ತೊರೆದು ಬಿಜೆಪಿ(BJP) ಸೇರಿರುವ ಕೆಲ ಶಾಸಕರು ಮರಳಿ ಕಾಂಗ್ರೆಸ್‌ಗೆ ಸೇರಲು ಆಸಕ್ತಿ ತೋರಿದ್ದಾರೆ. ಆದರೆ, ಬಿಜೆಪಿಗೆ ಸೇರಿರುವ ಎಲ್ಲ ಶಾಸಕರು ಕಾಂಗ್ರೆಸ್‌ಗೆ ಮರಳಿ ಸೇರುತ್ತಾರೆ ಎಂದು ನಾನು ಹೇಳಿಕೆ ನೀಡಿಲ್ಲ ಎಂದು ಕೆಪಿಸಿಸಿ(KPCC) ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ(Satish Jarkiholi) ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆಯಲ್ಲಿ ಭಾನುವಾರ ನಾನು ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿರುವ ಕೆಲ ಶಾಸಕರು ಪಕ್ಷಕ್ಕೆ ಮರಳಲಿದ್ದಾರೆ ಎಂದು ಹೇಳಿಕೆ ನೀಡಿದ್ದೇನೆ. ಆದರೆ, ಸುದ್ದಿವಾಹಿನಿ ಹಾಗೂ ಪತ್ರಿಕೆಗಳಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿರುವ ಎಲ್ಲ ಶಾಸಕರು ಕಾಂಗ್ರೆಸ್‌ ಪಕ್ಷಕ್ಕೆ ಮರಳಲಿದ್ದಾರೆ ಎಂಬ ಸುದ್ದಿ ಪ್ರಕಟವಾಗಿದೆ. ಆದರೆ, ನಾನು ಈ ರೀತಿ ಹೇಳಿಕೆ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.

Tap to resize

Latest Videos

Karnataka BJP ಸಿಎಂ ಮಾಡುವಾಗಲೇ 6 ತಿಂಗ್ಳು ಷರತ್ತು ಹಾಕಿ ಪ್ರಮಾಣವಚನಕ್ಕೆ ಅವಕಾಶ, ಜಾರಕಿಹೊಳಿ ಬಾಂಬ್

ಬಿಜೆಪಿಗೆ ಹೋದ ಕಾಂಗ್ರೆಸ್‌ ಶಾಸಕರು ಚುನಾವಣೆ ವೇಳೆ ವಾಪಸ್‌: ಸತೀಶ್‌

ದಾವಣಗೆರೆ(Davanagere): ಬಿಜೆಪಿಗೆ ವಲಸೆ ಹೋಗಿದ್ದ ಶಾಸಕರು ಕಾಂಗ್ರೆಸ್ಸಿಗೆ ಮತ್ತೆ ಬಂದೇ ಬರುತ್ತಾರೆ, ಈಗಾಗಲೇ ಪಕ್ಷದ ಅಧ್ಯಕ್ಷರು, ಸಿಎಲ್‌ಪಿ ನಾಯಕರನ್ನೂ ಭೇಟಿಯಾಗಿ ಒಂದು ಹಂತದ ಮಾತುಕತೆ ನಡೆಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದರು. 

ಭಾನುವಾರ ಮಾಧ್ಯಮದರರೊಂದಿಗೆ ಮಾತನಾಡಿದ್ದ ಅವರು, ವಲಸೆ ಹೋಗಿದ್ದ ಶಾಸಕರು ಫೆಬ್ರವರಿಯಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಕ್ಕೆ ಮರಳಲಿದ್ದಾರೆ. ಈಗಾಗಲೇ ನಮ್ಮ ನಾಯಕರ ಜೊತೆಗೆ ಮೊದಲ ಸುತ್ತಿನ ಮಾತುಕತೆಯೂ ಆಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ನಮ್ಮ ಪಕ್ಷಕ್ಕೆ ವಲಸೆ ಹೋಗಿದ್ದ ಶಾಸಕರು ಮರಳಲಿದ್ದಾರೆ. ರಾಜಕೀಯದಲ್ಲಿ ಇದೆಲ್ಲಾ ಸಹಜ ಎಂದು ತಿಳಿಸಿದ್ದರು. 

ಸಿದ್ದು ಯಾವಾಗಲೂ ನಂಬರ್‌ ಒನ್‌:

ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಅಶಕ್ತರಾಗಿದ್ದಾರೆ ಎಂಬ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್‌ ಜಾರಕಿಹೊಳಿ, ರಾಜ್ಯದಲ್ಲಿ ಸಿದ್ದರಾಮಯ್ಯನವರದ್ದೇ ಆದ ಬೆಂಬಲಿಗರ ಪಡೆ ಇದ್ದು, ಮಾಸ್‌ ಅಟ್ರ್ಯಾಕ್ಷನ್‌ ಇದೆ. ಸಿದ್ದರಾಮಯ್ಯ ಯಾವಾಗಲೂ ಟಾಪ್‌ನಲ್ಲೇ ಇರುತ್ತಾರೆ. ಯಾವಾಗಲೂ ನಂಬರ್‌ ಒನ್‌ ಆಗಿದ್ದು, ನಂಬರ್‌ ಒನ್‌ ಆಗಿಯೇ ಇರುತ್ತಾರೆ ಎಂದರು.

ಬಿಜೆಪಿಗೆ ಬರುವವರನ್ನು ಡಿಕ್ಕೀಲಿ ಕೂರಿಸ್ತಾರಾ?: ಸತೀಶ್‌ ವ್ಯಂಗ್ಯ

ಗೋಕಾಕ: ಕಾಂಗ್ರೆಸ್‌ನಿಂದ ಹದಿನಾರು ಮಂದಿಯನ್ನು ಬಿಜೆಪಿಗೆ ಕರೆದುಕೊಂಡು ಬರುವುದಾಗಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ. ಆ ಹದಿನಾರು ಮಂದಿಯನ್ನು ಎಲ್ಲಿ ಕೂರಿಸುತ್ತಾರೆ? ಡಿಕ್ಕಿಯಲ್ಲೋ, ಟಾಪ್‌ ಮೇಲೋ ಎಂದು ಕಾಲೆಳೆದಿದ್ದರು.

Belagavi Politics ಬೆಳಗಾವಿಯಲ್ಲಿ ಸಹೋದರರ ಸವಾಲ್, ರಮೇಶ್ ಜಾರಕಿಹೊಳಿ ರಾಜೀನಾಮೆ ಮಾತು

ಜ.27 ರಂದು ಸುದ್ದಿಗಾರರ ಜತೆಗೆ ಮಾತನಾಡಿದ್ದ ಅವರು, ಬಿಜೆಪಿಯಲ್ಲಿ(BJP) 120 ಸ್ಥಾನ ಭರ್ತಿಯಾಗಿದೆ. ಅಲ್ಲಿ ಹೌಸ್‌ಫುಲ್‌ ಆಗಿದೆ. ಇನ್ನೂ ಹದಿನಾರು ಮಂದಿಯನ್ನು ಎಲ್ಲಿ ಕೂರಿಸುತ್ತಾರೆ? ರಮೇಶ್‌ ಜಾರಕಿಹೊಳಿ(Ramesh Jarkiholi) ಆಗಾಗ ಹೊಸ ಹೊಸ ಬಾಂಬ್‌ ಎಸೆಯುತ್ತಿರುತ್ತಾರೆ. ಕೆಲವು ಗಾಳಿಯಲ್ಲಿ ಹಾರುತ್ತವೆ. ಅವರು ಸುಮ್ಮನೆ ಟೈಂಪಾಸ್‌ ಮಾಡುತ್ತಿರುತ್ತಾರೆ. ನಾವು ಸುಮ್ಮನೆ ಕಿವಿ ಮುಚ್ಚಿಕೊಂಡು ಕೂರಬೇಕು ಅಷ್ಟೆ. ರಮೇಶ್‌ ಹಾಗೂ ಲಖನ್‌ ಜಾರಕಿಹೊಳಿ ಇಬ್ಬರೂ ರಾಜಕೀಯ ವ್ಯಾಪಾರಿಗಳು. ಕಾಂಗ್ರೆಸ್‌ಗೆ ಹೋಗುತ್ತೇವೆ ಎಂದು ಬಿಜೆಪಿಯವರಿಗೆ, ಬಿಜೆಪಿಗೆ ಹೋಗುತ್ತೇನೆ ಎಂದು ಕಾಂಗ್ರೆಸ್‌ನವರಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿರುತ್ತಾರೆ ಎಂದು ಹೇಳಿದ್ದರು. 

ಇದೇ ವೇಳೆ, ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರು ಸಂಪರ್ಕದಲ್ಲಿದ್ದಾರೆ. ಜೆಡಿಎಸ್‌, ಬಿಜೆಪಿಯವರು ನಮ್ಮ ಪಕ್ಷಕ್ಕೆ ಖಂಡಿತವಾಗಿ ಬರುತ್ತಾರೆ. ಈ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹೇಳಿದ್ದು ನಿಜ ಎಂದು ಸತೀಶ್‌ ಜಾರಕಿಹೊಳಿ ತಿಳಿಸಿದ್ದರು. 

click me!